ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮನೆಯಿಂದ ಹೊರಹಾಕಿದ್ದಕ್ಕೆ ಸೊಸೆಯೊಬ್ಬಳು ಮಾವನ ಒಡೆತನದ ಶಾಲೆಯ ಮುಂದೆಯೇ ಕುಟುಂಬ ಸಮೇತ ಧರಣಿ ಕುಳಿತ ಘಟನೆಯೊಂದು ನಡೆದಿದೆ.
ಮಾಗಡಿ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮಾಲೀಕರೊಬ್ಬರ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಮಾಗಡಿಯ ಮಾರುತಿ ಶಿಕ್ಷಣ ಸಂಸ್ಥೆಯ ಮಾಲೀಕ ಗಂಗರಾಜು ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಅವರ ಸೊಸೆ ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ಮದುವೆಯಾಗಿ ಕೇವಲ ಒಂದು ವರ್ಷ ತುಂಬುವಷ್ಟರಲ್ಲೇ ಸೊಸೆಯನ್ನು ಮನೆಯಿಂದ ಹೊರ ಹಾಕಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಪ್ರೀತಿ ಕುಟುಂಬ ಶಾಲೆ ಮುಂಭಾಗ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆಶಾಕಿರಣ SFI ಗೆ 56 ರ ಸಂಭ್ರಮ
ಈ ಕುರಿತು ಹೇಳಿಕೆ ನೀಡಿದ ಪ್ರೀತಿ, ಹೆಚ್ಚುವರಿ ವರದಕ್ಷಿಣೆ ತರದಿದ್ದರೆ ಮಗನಿಗೆ ಎರಡನೇ ಮದುವೆ ಮಾಡುವುದಾಗಿ ಮಾವ ಗಂಗರಾಜು ಬೆದರಿಕೆ ಹಾಕುತ್ತಿದ್ದಾರೆ. ನನ್ನ ಗಂಡ ನನ್ನನ್ನು ಮುಟ್ಟಬೇಕಾದರೂ ಅತ್ತೆಯ ಪರ್ಮಿಷನ್ ಬೇಕು. ಗಂಡನ ಜೊತೆ ಮಾತನಾಡಲು ಸಹ ಬಿಡುತ್ತಿಲ್ಲ. ಜೊತೆಗೆ ತವರು ಮನೆಗೆ ಹೋಗಲು ಅವಕಾಶ ನೀಡುತ್ತಿಲ್ಲ. ದೇವಸ್ಥಾನಕ್ಕೆ ಹೋದರೂ ಅನುಮಾನ ಪಡುತ್ತಿದ್ದಾರೆ. ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ, ಈಗ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ಇನ್ನು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಭಾವಿ ವ್ಯಕ್ತಿಗಳಾದ ಕಾರಣ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಯಕ್ಕಾಗಿ ಹೋರಾಟ: ಸದ್ಯ ತನಗೆ ಪ್ರಾಣ ಭಯವಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿ ಯುವತಿ ಪ್ರೀತಿ ಹಾಗೂ ಆಕೆಯ ಕುಟುಂಬದವರು ಮಾರುತಿ ಶಾಲೆಯ ಮುಂಭಾಗವೇ ಪ್ರತಿಭಟನೆ ಕುಳಿತಿದ್ದಾರೆ. ಪತಿ ರೂಪೇಶ್, ಮಾವ ಗಂಗರಾಜು ಮತ್ತು ಅತ್ತೆ ವರಲಕ್ಷ್ಮಿ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ: ಪತಿಯ ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯದಿಂದ ಪತ್ನಿ ಕಂಗಾಲಾಗಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಂದೇ ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿದ್ದ ಸಹೋದ್ಯೋಗಿಗಳಿಬ್ಬರು ಪ್ರೀತಿಸಿ ಸೆಪ್ಟೆಂಬರ್ 3ರಂದು ಮದುವೆಯಾಗಿದ್ದರು. ಮದುವೆಗೆ ಮುಂಜುನಾಥ್‌ನೇ ಯುವತಿಯ ಮನೆಯವರನ್ನೂ ಒಪ್ಪಿಸಿದ್ದಅದಾದ ಬಳಿಕ ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ ಸೈಕೋ ರೀತಿ ವರ್ತಿಸುತ್ತಿರೋದನ್ನು ಕಂಡು ಪತ್ನಿ ಬೆಚ್ಚಿಬಿದ್ದಿದ್ದಾಳೆ.
ಇದನ್ನೂ ನೋಡಿ: ಚಿತ್ರದುರ್ಗ | ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ Janashakthi Media
