ಬೆಂಗಳೂರು: ಏರ್ಪೋರ್ಟ್ ಆಡಳಿತ ಮಂಡಳಿ ನಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದಶಕಗಳಿಂದ ಅವರೆಲ್ಲ ಏರ್ಪೋಟ್ ಟ್ಯಾಕ್ಸಿಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕೆಎಸ್ಟಿಡಿಸಿಯ ಏರ್ಪೋಟ್ ಟ್ಯಾಕ್ಸಿ ಚಾಲಕರು. ಆದ್ರೆ ಕೆಎಸ್ಟಿಡಿಸಿ ಚಾಲಕರಿಗೆ ವರ್ಷಗಳು ಕಳೆದಂತೆ ಏರ್ಪೋಟ್ ನಲ್ಲಿ ಏರ್ಪೋಟ್ ಆಡಳಿತ ಮಂಡಳಿಯಿಂದಲೆ ಅನ್ಯಾಯವಾಗ್ತಿದೆ ಅಂತ ಚಾಲಕರು ಗರಂ ಆಗಿದ್ದು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ.
ದೇವನಹಳ್ಳಿ ಬಳಿ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ಥಾಣ 2008 ರಲ್ಲಿ ಆರಂಭವಾದಗಲಿಂದಲೂ ಕೆಎಸ್ಟಿಡಿಸಿಯಲ್ಲಿ ಏರ್ಪೋಟ್ ಟ್ಯಾಕ್ಸಿ ಚಾಲಕರು ಕೆಲಸ ಮಾಡ್ತಿದ್ದು ನಿತ್ಯ ಎರಡು ಮೂರು ನಾಲ್ಕು ಟ್ರಿಪ್ಗಳನ್ನ ಓಡಿಸುತ್ತಿದ್ರಂತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಳಿ ಮಳೆ ಹೆಚ್ಚಾಗಿ 44,000 ಹೆಕ್ಟರ್ ಬೆಳೆ ಕೃಷಿ ಭೂಮಿಯಲ್ಲಿ ಹಾನಿಯಾಗಿದೆ: ಸಚಿವ ಕೃಷ್ಣ ಬೈರೇಗೌಡ
ಆದ್ರೆ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗ್ತಿದ್ದಂತೆ ಏರ್ಪೋಟ್ ಆಡಳಿತ ಮಂಡಳಿ ಒಲಾ ಉಬರ್ ಬ್ಲೂ ಟ್ಯಾಕ್ಸಿ ಸೇರಿದಂತೆ ಇತರೆ ಟ್ಯಾಕ್ಸಿಗಳನ್ನ ಏರ್ಪೋಟ್ಗೆ ಟೈ ಅಪ್ ಮಾಡಿಕೊಂಡಿದೆ. ಜೊತೆಗೆ ಕೆಎಸ್ಟಿಡಿಸಿಗೆ ಇಷ್ಟು ಅಂತ ಮೀಟರ್ ಬಾಡಿಗೆ ಪಿಕ್ಸ್ ಮಾಡಿದ್ದು ಬೇರೆ ಟ್ಯಾಕ್ಸಿಗಳು ಕೆಎಸ್ಟಿಡಿಸಿಗಿಂತ ಕಡಿಮೆ ಬೆಲೆಯಲ್ಲಿ ಬಾಡಿಗೆಯನ್ನ ಓಡಿಸುತ್ತಿದ್ದಾರಂತೆ ಎಂದರು.
ಹೀಗಾಗಿ ಏರ್ಪೋಟ್ ನಲ್ಲಿ ಕೆಎಸ್ಟಿಡಿಸಿ ಟ್ಯಾಕ್ಸಿ ಚಾಲಕರಿಗೆ ಬಾಡಿಗೆಗಳಿಲ್ಲದೆ ಚಾಲಕರು ಪರದಾಡ್ತಿದ್ದು ದಿನದ 24 ಗಂಟೆ ಕಾದು ಕುಳಿತ್ರು ಒಂದು ಬಾಡಿಗೆಯು ಸಿಗ್ತಿಲ್ಲ ಅಂತ ಏರ್ಪೋಟ್ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ರು. ಸಾಲ ಸೂಲ ಮಾಡಿ ಏರ್ಪೊಟ್ ಟ್ಯಾಕ್ಸಿಗೆ ಕ್ಯಾಬ್ ಅಟೆಚ್ ಮಾಡಿಕೊಂಡಿದ್ದು ದಿನಪೂರ್ತಿ ದುಡಿದ್ರು ಒಂದು ಬಾಡಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ನೋಡಿ: ಕಟ್ಟ ಕಡೆಯ ವ್ಯಕ್ತಿಗೆ ಗೌರವ ನೀಡುವುದೇ ಮೊಟ್ಟ ಮೊದಲ ಆದ್ಯತೆಯಾಗಬೇಕು – ಬರಗೂರು ರಾಮಚಂದ್ರಪ್ಪ Janashakthi Media