ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ‘ನವಕರ್ನಾಟಕ ಪ್ರಕಾಶನ’ ಆಯ್ಕೆಯಾಗಿದೆ. ಪ್ರಕಾಶನ ರಂಗದಲ್ಲಿ ಅನುರೂಪದ ಸೇವೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ನವದೆಹಲಿಯಲ್ಲಿ ಈ ತಿಂಗಳ 11 ಮತ್ತು 12 ರಂದು ಒಕ್ಕೂಟವು ಹಮ್ಮಿಕೊಂಡಿರುವ ಭಾರತೀಯ ಪ್ರಕಾಶಕರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರಮೇಶ್ ಮಿತ್ತಲ್ ತಿಳಿಸಿದ್ದಾರೆ.
ಇದನ್ನೂಓದಿ:ಬಾರದ ಅಂಬುಲೆನ್ಸ್ : ಹುಟ್ಟುವ ಮುನ್ನವೇ ಕಣ್ಮುಚ್ಚಿದ ಮಗು
‘ಪುಸ್ತಕಗಳ ಮೂಲಕ ಮಾನವ ಲೋಕದ ಸೇವೆ’ ಎನ್ನುವ ಧ್ಯೇಯದೊಂದಿಗೆ ಪ್ರಾರಂಭವಾಗಿದ್ದು ನವಕರ್ನಾಟಕ ಸಂಸ್ಥೆ ಇಂದು 6500 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು, ನಾಲ್ಕು ಕೇಂದ್ರಗಳಲ್ಲಿ ಆರು ಮಾರಾಟ ಮಳಿಗೆಗಳನ್ನು ಹೊಂದಿದೆ. ನಾಡಿನ ಪುಸ್ತಕ ಪ್ರಾಧಿಕಾರ, ಅಂಕಿತ ಸೇರಿದಂತೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ನವಕರ್ನಾಟಕ ಪ್ರಕಾಶನಕ್ಕೆ ಸಂದಿವೆ.