ಬೆಂಗಳೂರು: ಅಶ್ಲೀಲ ಪೆನ್ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ, ಇಂದು ಬೆಂಗಳೂರಿಗೆ ವಿದೇಶದಿಂದ ಬರುವ ಸಾಧ್ಯತೆಯಿರುವುದರಿಂದ ಎಸ್ಐಟಿ ಮುಂದೆ ಶರಣಾಗತಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಬೆಂಗಳೂರಿಗೆ ಬಂದು ಶರಣಾಗದಿದ್ದರೆ, ಅರೆಸ್ಟ್ ಮಾಡಬೇಕಾದ ಎಲ್ಲಾ ಸಿದ್ಧತೆಯನ್ನು ಎಸ್ಐಟಿ ಅಧಿಕಾರಿಗಳ ಮಾಡಿಕೊಂಡಿದ್ದಾರೆ. ಇನ್ನೂ ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಬಂದಲ್ಲಿ ನೇರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮನೆ ಹೋಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮತ್ತೆ ಕುಣಿಯಲಿದೆಯೇ ಕರಡಿ ಅಥವಾ ಮತದಾರರ ಮಣೆ ಹೊಸ ಮುಖಕ್ಕೋ?
ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಪ್ರಜ್ವಲ್ ಲೊಕೇಶನ್ ಪತ್ತೆಹಚ್ಚಿದ ಎಸ್ಐಟಿ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ.ಇದರ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಏರ್ಪೋರ್ಟ್ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.ಪ್ರಜ್ವಲ್ ರೇವಣ್ಣ ವಿದೇಶದಿಂದ ಯಾವುದೇ ಏರ್ಪೋರ್ಟ್ಗೆ ಬಂದ ಬೆನ್ನಲ್ಲೇ ವಶಕ್ಕೆ ಪಡೆಯಲು ಎಸ್ಐಟಿ ಟೀಂ ಸಿದ್ದವಾಗಿದೆ.
ಇದನ್ನೂ ನೋಡಿ: ಪೆನ್ಡ್ರೈವ್ ಪ್ರಕರಣ : ರೇವಣ್ಣ, ಪ್ರಜ್ವಲ್ ರೇವಣ್ಣ ಶೀಘ್ರ ಬಂಧನಕ್ಕೆ ಆಗ್ರಹ Janashakthi Media