ಆಗಸ್ಟ್ 3 ರಿಂದ 11ರ ವರೆಗೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯಿಂದ ರಾಜಕೀಯ ಪ್ರಚಾರಾಂದೋಲನ

ಮಂಗಳೂರು: ವಿಪರೀತ ಬೆಲೆಯೇರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 3 ರಿಂದ 11 ರವರಗೆ ಜಿಲ್ಲೆಯಾದ್ಯಂತ ರಾಜಕೀಯ ಪ್ರಚಾರಾಂದೋಲನ ನಡೆಸಲು ಸಿಪಿಐಎಂ ದ‌.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ ಎಂದು ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಹುರಾಷ್ಟ್ರೀಯ ಕಾರ್ಪೊರೋಟ್ ಹಿತಾಸಕ್ತಿಗಳ ಪರವಾದ ನೀತಿಗಳನ್ನು ನಿರ್ಲಜ್ಜವಾಗಿ ಜಾರಿಗೆ ತರುತ್ತಿದೆ. ಇದರಿಂದಾಗಿ ದೇಶದ ಒಳಗಡೆ ಶ್ರೀಮಂತರ ಸಂಪತ್ತು ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಬಡತನದ ಪ್ರಮಾಣವೂ ಅಧಿಕಗೊಳ್ಳುತ್ತಿದೆ. ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸಿ ಅವರನ್ನು ಕಾರ್ಪೊರೇಟ್ ಕಂಪೆನಿಗಳ ಸಂಪತ್ತು ಹೆಚ್ಚಿಸುವ ಯಂತ್ರದ ರೀತಿ ಪರಿಗಣಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಓಲಾ, ಉಬರ್ ರೀತಿಯಲ್ಲಿ ಆಂಬುಲೆನ್ಸ್ ಬುಕ್ಕಿಂಗ್‌; ಸರ್ಕಾರದಿಂದಲೇ ದರ ನಿಗದಿ

ಇದರಿಂದಾಗಿ ದೇಶದಲ್ಲಿ ನಿರುದ್ಯೋಗ, ಬಡತನ ವೇಗವಾಗಿ ಏರುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಆರ್ಥಿಕ ನೀತಿಗಳಲ್ಲಿ ಕೇಂದ್ರದ ಬಿಜೆಪಿ ಸರಕಾರದ ಪಡಿಯಚ್ಚಿನಂತೆ ನಡೆದುಕೊಳ್ಳುತ್ತಿದೆ. ಕಾರ್ಮಿಕರ ದುಡಿಮೆಯ ಅವಧಿಯನ್ನು ಹತ್ತು ಗಂಟೆಗೆ ಹೆಚ್ಚಿಸುವುದು, ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಅಪಾಯಕಾರಿ ರೈತ ಕಾಯ್ದೆಗಳನ್ನು ಮುಂದುವರಿಸುತ್ತಿರುವುದು ಕಾಂಗ್ರೆಸ್ ಸರಕಾರದ ಜನವಿರೋಧಿ ಧೋರಣೆಗಳನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.

ದ.ಕ. ಜಿಲ್ಲೆಯಲ್ಲಿಯೂ ಸರಕಾರಗಳ ಈ ನೀತಿಗಳ ಪರಿಣಾಮಗಳು ಜನತೆಯನ್ನು ಹೈರಾಣಾಗಿಸಿದೆ. ಮತೀಯ ರಾಜಕಾರಣ, ಫ್ಯೂಡಲ್ ಮೌಲ್ಯಗಳು ಕರಾವಳಿ ರಾಜಕಾರಣದ ಹೆಗ್ಗುರಿತಿನಂತಾಗಿದೆ. ಖಾಸಗಿ ಆರೋಗ್ಯ, ಶಿಕ್ಷಣದ ಲಾಭಿಗಳ ಸಹಿತ ಬಲಾಢ್ಯ ವ್ಯಾಪಾರಿ ವರ್ಗ ಜಿಲ್ಲೆಯ ರಾಜಕಾರಣ, ಆರ್ಥಿಕತೆಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಮುಂದಿಟ್ಟು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಒಂದು ವಾರಗಳ ಕಾಲದ ರಾಜಕೀಯ ಪ್ರಚಾರಾಂದೋಲನ ನಡೆಸಲು ತೀರ್ಮಾನಿಸಿದೆ. ಪ್ರತಿ ಗ್ರಾಮಮಟ್ಟದಲ್ಲಿ ಮನೆ ಮನೆ ಭೇಟಿ, ಕರಪತ್ರ ವಿತರಣೆ, ವಾರ್ಡ್ ಮಟ್ಟದಲ್ಲಿ, ಗ್ರಾಮಮಟ್ಟಲ್ಲಿ ಸಾರ್ವಜನಿಕ ಸಭೆ, ಪ್ರಚಾರ ಸಭೆಗಳನ್ನು ನಡೆಸುವುದು, ಜನಸಾಮಾನ್ಯರೊಂದಿಗೆ ಸಂವಾದಗಳನ್ನು ಪ್ರಚಾರಾಂದೋಲನದ ಭಾಗವಾಗಿ ಸಂಘಟಿಸಲಾಗುತ್ತಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ಪ್ರಕಟನೆ ತಿಳಿಸಿದೆ ಎಂದರು.

ಇದನ್ನೂ ನೋಡಿ: ಭೂಮಿ ಕಸಿದುಕೊಳ್ಳಲು ಬಂದ ನೈಸ್‌ ಕಂಪನಿ ವಿರುದ್ಧ ರೈತರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *