ಬಸ್‌ ಅಪಘಾತ: ಪರಿಹಾರ ಮೊತ್ತ ನೀಡದ ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ-ಕುಟುಂಬಕ್ಕೆ ಹಸ್ತಾಂತರ!

ಸಾಂಗ್ಲಿ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ನಡೆದ ಬಸ್​​ ಅಪಘಾತ ಪ್ರಕರಣವೊಂದರಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುವೊಂದನ್ನು​​ ಜಪ್ತಿ ಮಾಡಲಾಗಿದ್ದು, ಅಪಘಾತದಲ್ಲಿ ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

2015ರಲ್ಲಿ ಮೀರಜ್​​ನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು  ಡಿಕ್ಕಿ ಹೊಡೆದು ಭಾನುದಾಸ್ ಬೋಸಲೆ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಮಗೆ ಪರಿಹಾರ ನೀಡುವಂತೆ ಬೋಸಲೆ ಕುಟುಂಬದವರು ಸಾಂಗ್ಲಿ ನ್ಯಾಯಾಲಯಕ್ಕೆ ದಾವೆ ಹೂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​, 2016ರಲ್ಲಿ ಮೃತನ ಕುಟುಂಬಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ 8 ಲಕ್ಷ, 33 ಸಾವಿರದ 563 ರೂಪಾಯಿ ನೀಡುವಂತೆ ಆದೇಶಿಸಿತ್ತು.

ಆದರೆ, ಪರಿಹಾರ ನೀಡುವ ವಿಷಯದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ಕಾಲಹರಣ ಮಾಡಿದೆ. ಭಾನುದಾಸ್ ಬೋಸಲೆ ಪತ್ನಿ ವಿಜಯಾ ಸಾಂಗ್ಲಿ ಈ ವಿಷಯವನ್ನು ನ್ಯಾಯಾಲಯದ ತಿಳಿಸಿದ್ದರು. ಕೋರ್ಟ್‌ ಆದೇಶದನ್ವಯ ಸಾಂಗ್ಲಿ ಬಸ್​ ಡಿಪೋದಿಂದ ಕರ್ನಾಟಕ ಸಾರಿಗೆ ಬಸ್‌ವೊಂದನ್ನು​​ ಜಪ್ತಿ ಮಾಡಿರುವ ಅಧಿಕಾರಿಗಳು ಮೃತ ಸಂತ್ರಸ್ತರ ಕುಟುಂಬಕ್ಕೆ ಒಪ್ಪಿಸಿದ್ದಾರೆ.!

Donate Janashakthi Media

Leave a Reply

Your email address will not be published. Required fields are marked *