ಬೆಂಗಳೂರು: ಬಿಎಂಟಿಸಿ ನಿರ್ಭಯಾ ಯೋಜನೆಯಡಿ ಬಸ್‌ಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್ ಅಳವಡಿಕೆಗೆ ಬಿಎಂಟಿಸಿ ಮುಂದಾಗಿದೆ. ಈಗಾಗಲೇ 5000 ಬಸ್ಗಳಿಗೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ ಎಂದ ವರದಿಯಾಗಿದೆ.
ಬಸ್ನಲ್ಲಿ ಸರಗಳ್ಳತನ, ಲೈಂಗಿಕ ಕಿರುಕುಳದಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್ಗಳ ಅಳವಡಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದು, ಐದು ಸಾವಿರ ಬಸ್ಗಳಿಗೆ ಅಳವಡಿಕೆ ಮಾಡಲಾಗಿದೆ.
ಸದ್ಯ ಬಿಎಂಟಿಸಿ ತನ್ನ ಸಿಬ್ಬಂದಿಗೆ ಪ್ರಯಾಣಿಕರು ಪ್ಯಾನಿಕ್ ಬಟನ್ ಒತ್ತಿದಾಗ ನಿಯಂತ್ರಣಾ ಕೊಠಡಿ ಸಿಬ್ಬಂದಿ ಹಾಗೂ ಸಾರಥಿ ಸಿಬ್ಬಂದಿಯು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಸಿದ್ಧಪಡಿಸಿದೆ. ಅದರಂತೆ, ಇನ್ನೂ ಮುಂದೆ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ರಕ್ಷಣೆ ಸಿಗಲಿದೆ.
ಇದನ್ನೂ ಓದಿ: ಹಾಸನ| ಆಟವಾಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು, ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನೆ
ಬಿಎಂಟಿಸಿ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಒತ್ತಿದರೆ ಸಿಸಿ ಟಿವಿ ಅಲರ್ಟ್ ಮತ್ತು ಸೈರನ್ ಆನ್ ಆಗುತ್ತದೆ. ಬಟನ್ ಪ್ರೆಸ್ ಆಗುತ್ತಿದ್ದಂತೆ ಬಿಎಂಟಿಯ ಕಂಟ್ರೋಲ್ ರೂಮ್ಗೆ ಬಸ್ನ ಸಂಪೂರ್ಣ ಮಾಹಿತಿ ರವಾನೆಯಾಗಿ ಅಲ್ಲದೆ, ಕಂಡಕ್ಟರ್ ಮತ್ತು ಡ್ರೈವರ್ಗೆ ಕಂಟ್ರೋಲ್ ರೂಮ್ನಿಂದ ಕರೆ ಬರುತ್ತದೆ.
ಪ್ರಯಾಣಿಕರು ನಿಮ್ಮ ಬಸ್ನಲ್ಲಿರುವ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದರೆ ಆ ಪ್ರಯಾಣಿಕರಿಗೆ ಸಮಸ್ಯೆ ಏನಾಗಿದೆ ಎಂದು ಕೇಳಲಾಗುತ್ತದೆ. ನಂತರ ಆಕೆಯ ರಕ್ಷಣೆಗೆ ಕಂಡಕ್ಟರ್ ಮತ್ತು ಡ್ರೈವರ್ ದಾವಿಸುತ್ತಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಬಸ್ ಅನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ. ಯಾರಾದರೂ ಮಹಿಳೆಯರಿಗೆ ಕಿರುಕುಳ ನೀಡಿದ್ದ ಬಗ್ಗೆ ಮಾಹಿತಿ ನೀಡಿದರೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ವಿಡಿಯೋ ನೋಡಿ: ಸರ್ಕಾರದ ಕಿವಿ ಹಿಂಡಿದ ಮಾಧ್ಯಮದ ಕತ್ತು ಹಿಸುಕುವ ಕೇಂದ್ರ ಸರ್ಕಾರ – ಸಿದ್ದನಗೌಡ ಪಾಟೀಲ್ ಜೊತೆ ಮಾತುಕತೆ