ಪದವಿ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿಗೆ ಮುಂದಾದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕ್ರಮಕ್ಕೆ ಖಂಡನೆ; ಎಸ್ಎಫ್ಐ

ಕೊಪ್ಪಳ: ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ. ಪ್ರಥಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳಿಂದ ದಾಖಲಾತಿ ಶುಲ್ಕವನ್ನು ಅಧಿಕವಾಗಿ ವಸೂಲೆ ಮುಂದಾಗಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ), ರಾಜ್ಯ ಸಮಿತಿ ಖಂಡಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ದಾಖಲಾತಿ ಶುಲ್ಕ ತುಂಬಾ ಕಡಿಮೆ ಇದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ವಿದ್ಯಾರ್ಥಿಗೆ 2078 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ 2049 ರೂಪಾಯಿ ಶುಲ್ಕ ನಿಗದಿಯಾಗಿದೆ. ಆದರೆ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕಡಿಮೆ ಇರುವ ಈ ಪ್ರದೇಶದಲ್ಲಿ ಸ್ವಾಯತ್ತತೆಯ ಹೆಸರಿನಲ್ಲಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹಾಗೂ ಕುಲ ಸಚಿವರು ವಿದ್ಯಾರ್ಥಿಗಳಿಂದ ಬಿ.ಇಡಿ ವಿಶ್ವವಿದ್ಯಾಲಯ ಶುಲ್ಕವನ್ನು 8770 ರೂಪಾಯಿ ಪಡೆದುಕೊಳ್ಳದರ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ವಿದ್ಯಾರ್ಥಿನಿ – ಮಹಿಳೆಯರಿಗೆ ಸೂಕ್ತ ರಕ್ಷಣೆ, ಮುಂಜಾಗೃತ ಕ್ರಮಕ್ಕೆ ಆಗ್ರಹಿಸಿ ಎಸ್‌ಎಫ್‌ಐ ಮನವಿ

ರಾಜ್ಯದಲ್ಲಿನ ಇತರೆ ವಿಶ್ವವಿದ್ಯಾಲಯಗಳ ಶುಲ್ಕಕ್ಕೆ ಹೋಲಿಸಿದರೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಒಬ್ಬ ವಿದ್ಯಾರ್ಥಿಯಿಂದ ₹ 6692 ಹಣವನ್ನು ಹೆಚ್ಚುವರಿ ಪಡೆದುಕೊಳ್ಳುತ್ತಿದೆ. ಹೆಚ್ಚುವರಿ ಶುಲ್ಕವನ್ನು ಸುಮಾರು ಮೂರು ವರ್ಷಗಳಿಂದ  ಇದೇ ರೀತಿ ಪಡೆದುಕೊಳ್ಳತ್ತದೆ. ಇದನ್ನು ಖಂಡಿಸಿ ಎಸ್‌ಎಫ್‌ಐ ಸಂಘಟನೆ ಹಲವಾರು ಬಾರಿ ಹೋರಾಟ ಮಾಡಿ ವಿವಿ ಸಿಂಡಿಕೇಟ್ ಸದಸ್ಯರಿಗೆ ಹಾಗೂ ಕುಲಸಚಿವರಿಗೆ ಮನವಿ ಪತ್ರ ಸಲ್ಲಿಸಿತು. ಆದರೂ ಸಹ ವಿಶ್ವವಿದ್ಯಾಲಯ ಶುಲ್ಕ ಕಡಿತ ಮಾಡದೇ ತನ್ನ ಹಠಮಾರಿ ಧೋರಣೆ ಮುಂದುವರಿಸಿರವುದನ್ನು ಸಂಘಟನೆಯು ಖಂಡಿಸಿದೆ.

ಕೂಡಲೇ ಉಪಕುಲಪತಿಗಳು ಹಾಗೂ ಕುಲಸಚಿವರು ವಿದ್ಯಾರ್ಥಿ ಸಂಘಟನೆಯ ಮುಖಂಡರ ಜೊತೆ ಸಭೆ ಕರೆದು ಶುಲ್ಕವನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ವಿಶ್ವವಿದ್ಯಾಲದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾನ್ ಸೈಯದ್, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ, ಜಿಲ್ಲಾ ಉಪಾಧ್ಯಕ್ಷ ಗ್ಯಾನೇಶ, ವಿದ್ಯಾರ್ಥಿಗಳಾದ ವಿರೇಶ, ಶರಣಪ್ಪ, ರಾಘವೇಂದ್ರ, ಕೃಷ್ಣ, ಮಂಜುನಾಥ, ಶ್ರೀಕಾಂತ, ನವೀನ್, ಭೀರಪ್ಪ, ಹನುಮಂತಿ, ಕಾವೇರಿ ಹಿರೇಮಂಠ, ಅಂಬಿಕಾ, ಲಕ್ಷ್ಮಿ ಇತರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *