ವಿಕವಾಂಡಿ: ದ್ವೇಷ ರಾಜಕಾರಣ ದೇಶದ ಶತ್ರು, ದ್ರಾವಿಡ ಹೆಸರಲ್ಲಿ ವಂಚಿಸಲಾಗುತ್ತಿದೆ. ಇದನ್ನು ತಡೆದು ಜಾತ್ಯತೀತ, ನ್ಯಾಯಯುತವಾಗಿ ನಡೆದುಕೊಳ್ಳುವುದೇ ನಮ್ಮ ರಾಜಕೀಯ ಸಿದ್ಧಾಂತ ಎಂದು ನಟ ವಿಜಯ್ ವಿಕವಾಂಡಿ ಜಿಲ್ಲೆಯ ವಲ್ಲುಪುರಂನಲ್ಲಿ ಭಾನುವಾರ ನಡೆದ ಕಜಕಮ್ ರ್ಯಾಲಿಯನ್ನು ಉದ್ದೇಶಿಸಿ ತಮ್ಮ ಮೊದಲ ರಾಜಕೀಯ ಭಾಷಣದಲ್ಲಿ ಹೇಳಿದ್ದಾರೆ. ಬದಲಾವಣೆ
ಇಲ್ಲಿ ಸೇರಿರುವ ಜನರು ಹಣಕ್ಕಾಗಿ ಬಂದಿಲ್ಲ. ಬದಲಾಗಿ ಬದಲಾವಣೆಗಾಗಿ ಬಂದಿದ್ದಾರೆ. ಬದಲಾವಣೆ ತರುವುದೇ ನಮ್ಮ ಗುರಿ. ಈ ವಿಷಯದಲ್ಲಿ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದರು.
ಜಾತಿ-ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಆದರ ಅಂತರದಲ್ಲಿ ಇದೆಲ್ಲಾ ವ್ಯವಹಾರಿಕವಾಗಿವೆ. ದ್ರಾವಿಡರ ಹೆಸರಿನಲ್ಲಿ ಅಲ್ಪ ಸಂಖ್ಯಾತರನ್ನು, ಸಾಮಾನ್ಯ ಜನರನ್ನು ವಂಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಯಮನಂತೆ ವೇಷ ಧರಿಸಿ ಜನಜಾಗೃತಿ ಮೂಡಿಸಿದ ಪೊಲೀಸ್ ಸಿಬ್ಬಂದಿ ಮೃತ
ಇದೇ ವೇಳೆ ದೇಶದಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ದ್ವೇಷದ ರಾಜಕಾರಣ, ದೇಶದ, ನಮ್ಮ ನಿಮ್ಮೆಲ್ಲರ ಶತ್ರು. ನಾನು ಯಾವುದೇ ಕಾರಣಕ್ಕೂ ನಮ್ಮ ಪಕ್ಷ ದ್ವೇಷ ರಾಜಕಾರಣ ಮಾಡಲ್ಲ. ಒಡೆದು ಆಳುವ ನೀತಿ ಅನುಸರಿಸಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದರು.
ಒಂದು ವರ್ಗ ದ್ವೇಷವನ್ನು ಸೃಷ್ಟಿಸುವ ಮೂಲಕ ದೇಶವನ್ನು ಒಡೆಯುವ ಪುಯತ್ನ ನಡೆಸುತ್ತಿದೆ. ದೇಶವನ್ನು ಒಡೆಯುವವರು ನಮ್ಮ ಮೊದಲ ಶತ್ರು. ದ್ರಾವಿಡ ಸಿದ್ಧಾಂತದ ಮೂಲಕ ತಮಿಳುನಾಡಿನಲ್ಲಿ ಒಡೆದು ಆಳುವವರು ನಮ್ಮ ಎರಡನೇ ಶತ್ರು.
ಸೈದ್ಧಾಂತಿಕವಾಗಿ ಬಿಜೆಪಿ ನಮ್ಮ ಮೊದಲ ಶತ್ರು. ಡಿಎಂಕೆ ರಾಜಕೀಯ ವಿರೋಧಿ, ನಾನು ಯಾವುದೇ ಉದ್ದೇಶಗಳನ್ನು ಇಟ್ಟುಕೊಂಡು ರಾಜಕೀಯಕ್ಕೆ ಬಂದಿಲ್ಲ. ಹಿಂದೆ ರಾಜಕೀಯ ಯಾಕೆ ಎಂದು ಹೇಳುತ್ತಿದೆ. ಆದರೆ ಈಗ ಉತ್ತಮ ಉದ್ದೇಶದ ರಾಜಕೀಯ ಪಕ್ಷದ ಅಗತ್ಯ ಹಿನ್ನೆಲೆಯಲ್ಲಿ ಬಂದಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 152ಸಿನೆಮಾ : ಜಗ್ಗಿ ಭಾಷೆ : ಪಂಜಾಬಿನಿರ್ದೇಶನ : ಅನ್ಮೊಲ್ ಸಿದ್ದುವಿಶ್ಲೇಷಣೆ : ಮ.ಶ್ರೀ.ಮುರಳಿ ಕೃಷ್ಣ