ಮಂಗಳೂರು: ಧರ್ಮಸ್ಥಳ ಅನಧಿಕೃತ ಶವ ಹೂತ ಪ್ರಕರಣದ ಶವಶೋಧ ಕಾರ್ಯದ ಅಂತಿಮ ಸ್ಥಳದಲ್ಲಿ ಆಗಸ್ಟ್ 6ರಂದು ಕಾರ್ಯಾಚರಣೆ ನಡೆಯಲಿದೆ ಎನ್ನಲಾಗಿದ್ದೂ, ದೂರುದಾರ ಬಹಳ ನಿರೀಕ್ಷೆ ಇಟ್ಟಿರುವ 13 ನೇ ಸ್ಥಳದ ಅಗೆಯುವ ಕಾರ್ಯಾಚರಣೆ ಇದು ಎನ್ನಲಾಗಿದೆ. ಆದರೆ ಪ್ರತಿದಿನ 11-30 ರವೇಳೆಗೆ ಆರಂಭ ಆಗುತ್ತಿದ್ದ ಕಾರ್ಯಾಚರಣೆ ಇದೀಗ ವಿಳಂಬ ಆಗಿದೆ. ಧರ್ಮಸ್ಥಳ
ಎಸ್‌ಐಟಿ ಅಧಿಕಾರಿಗಳ ಮಹತ್ವದ ಸಭೆ
ಎಸ್ ಐಟಿ ತನಿಖಾಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಬೆಳ್ತಂಗಡಿ ಎಸ್ ಐಟಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸ್ಥಳೀಯ ಅಧಿಕಾರಿಗಳೂ ಇದ್ದಾರೆ.
ಪುತ್ತೂರು ಎಸಿ ಸ್ಟೆಲ್ಲಾ, ತನಿಖಾಧಿಕಾರಿ ಎಂ ಎನ್ ಜಿತೇಂದ್ರ ದಯಾಮ. ಎಸ್ ಐಟಿ ಅಧಿಕಾರಿಗಳಾದ ಅನುಚೇತ್, ಧರ್ಮಸ್ಥಳ ಠಾಣೆ ಎಸ್ ಐ ಸೇರಿದಂತೆ ಪ್ರಮುಖರ ಜೊತೆ ಪ್ರಣವ್ ಮೊಹಾಂತಿ ಸಭೆ ನಡೆಸಿ ತನಿಖೆಯ ವರದಿ ಪಡೆಯುತ್ತಿದ್ದಾರೆ. ಜಯಂತ್ ಟಿ ಹೊಸ ದೂರುದಾರ ಅವರ ತನಿಖೆಯನ್ನೂ ಎಸ್ ಐಟಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಗದರಹಿತ ವ್ಯವಹಾರಕ್ಕೆ ಇ-ಕಚೇರಿ ಕಡ್ಡಾಯ: ಕೃಷ್ಣ ಬೈರೇಗೌಡ
ಪ್ರತೀದಿನ 11-30 ಕ್ಕೆ ಆರಂಭ ಆಗುತ್ತಿದ್ದ ಸಭೆ 12-27 ರವರೆಗೂ ನಡೆದಿಲ್ಲ. ಮೊದಲ ಹಂತದ ಎಲ್ಲಾ ಉತ್ಖನನ ಕಾರ್ಯ ನಡೆದಿರುವ ಬಗ್ಗೆ ಸಭೆ ನಡೆಯುತ್ತಿದೆ. ಇಂದು 13 ನೇ ಸ್ಥಳ ಅಗೆಯಲು ಪೊಲೀಸರು ಸಿದ್ಧತೆ ಆರಂಬಿಸುತ್ತಿದ್ದಾರೆ. ಸ್ಥಳದಿಂದ ಜನರನ್ನು ಚದುರಿಸುತ್ತಿದ್ದಾರೆ.
ವಕೀಲ ಮಂಜುನಾಥ್ ಗಂಭೀರ ಆರೋಪ
ಅನನ್ಯಾ ಭಟ್ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ನೆಲ ಅಗೆಯುವ ಬದಲು, ಅಸ್ಥಿಪಂಜರ ಪತ್ತೆಗೆ ಜಿಪಿಆರ್ ಯಂತ್ರ ಬಳಸಲು ಮನವಿ ಮಾಡಲಾಗಿತ್ತು. ಆದರೆ ಜಿಪಿಆರ್ ಯಂತ್ರಗಳ ಕೃತಕ ಅಭಾವ ಸೃಷ್ಟಿಸಲಾಗಿದೆ. ಯಂತ್ರ ಕೊಡುವ ಕಂಪನಿಗಳ ಮೇಲೆ ಒತ್ತಡ ಹೇರಲಾಗಿದೆ. ಧರ್ಮಸ್ಥಳ ನಿಗೂಢ ಶವ ಗಳನ್ನು ಭೂಮಿ ಮೇಲಿಂದಲೇ ಪತ್ತೆ ಹಚ್ಚಲು ಸಹಾಯವಾಗುವ ಜಿಪಿಆರ್ ಯಂತ್ರ , ಆದರೆ ಇವುಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
13 ನೇ ಸ್ಥಳದಲ್ಲಿ ಸಿಗುತ್ತಾ ಕುರುಹು?
ಸ್ಥಳೀಯರ ಪ್ರಕಾರ, ಈ ಪಾಯಿಂಟ್ ನಲ್ಲಿ ಶವ ಸಿಗೋದೆ ಇಲ್ಲ . ಮಣ್ಣು ಸುರಿದು ಜಾಗವನ್ನು ಸಮತಟ್ಟು ಮಾಡಲಾಗಿದೆ, ಅಭಿವೃದ್ಧಿ ಕೆಲಸ ನಡೆಸಲಾಗಿದೆ, ಹೀಗಾಗಿ 10 ವರ್ಷದ ಹಳೆಯ ಅಸ್ಥಿಪಂಜರದ ಅವಶೇಷ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಿದ್ದಾರೆ.
ಇಂದು ಅಸ್ಥಿಪಂಜರ ಶೋಧಕಾರ್ಯದ ಕಟ್ಟಕಡೆಯ ಸ್ಥಳ ಆಗಿದೆ. 13 ನೇ ಸ್ಥಳ ಬಹಳಷ್ಟು ಚರ್ಚೆಗೆ ಒಳಗಾಗಿದೆ. 1994 ರಿಂದ 2014 ರವರೆಗೆ ಮೃತದೇಹ ಹೂತುಹಾಕಿದ್ದೇನೆ ಎಂದು ಹೇಳಿದ್ದನು.ಆದರೆ ಈ ಜಾಗದಲ್ಲಿ ಕಿಂಡಿ ಅಣೆಕಟ್ಟಿನ ನಿರ್ಮಾಣ ಸಂದರ್ಭದಲ್ಲಿ ಹಾಗೂ ಸ್ನಾನಘಟ್ಟದ ಕಾಮಗಾರಿಯೂ ನಡೆದಿತ್ತು.
2019 ರ ಪ್ರವಾಹದ ಸಂದರ್ಭದಲ್ಲಿಯೂ ಸ್ನಾನಘಟ್ಟಕ್ಕೆ ಡ್ಯಾಮೇಜ್ ಆಗಿತ್ತು. ಹೀಗಾಗಿ ಅನೇಕ ಅಭಿವೃದ್ಧಿ ಕಂಡಿರುವ ಈ ಜಾಗದಲ್ಲಿ ಇಂದು ಮೃತದೇಹದ ಕುರುಹು ಸಿಗುತ್ತಾ ಅನ್ನೋದು ಅನುಮಾನ ಮೂಡಿಸಿದೆ. ಇನ್ನೊಂದೆಡೆ ಸ್ನಾನಘಟ್ಟದ ಬಳಿ ಅಚಾನಕ್ ಆಗಿ ಅಥವಾ ಪ್ರವಾಸಿಗರಲ್ಲಿ ಯಾರೇ ಮೃತಪಟ್ಟರೂ ಈ ಜಾಗದಲ್ಲಿ ಹೂತಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನಿನ್ನೆ 11, ಹಾಗೂ 12 ನೇ ಪಾಯಿಂಟ್ ನಲ್ಲೂ ಯಾವುದೇ ಕುರುಹು ಸಿಕ್ಕಿರಲಿಲ್ಲ. 1 ರಿಂದ 8 ನೇ ಪಾಯಿಂಟ್ ನಲ್ಲಿ ನೇತ್ರಾವತಿಯ ಪ್ರವಾಹವೂ ಉಂಟಾಗಿತ್ತು. ಆದರೆ 9 ರಿಂದ 12 ನೇ ಜಾಗದಲ್ಲಿಯೂ ಯಾವುದೇ ಕುರುಹು ಸಿಕ್ಕಿಲ್ಲ.
ಇದನ್ನೂ ನೋಡಿ: ಸಿಯುಕೆ| ಶೈಕ್ಷಣಿಕ ಹತ್ಯೆ – ಪೊಲೀಸ್ ಬರುವ ಮುನ್ನವೇ ಕಾರ್ಪೆಂಟರ್ ಮೂಲಕ ಬಾಗಿಲು ಮುರಿದಿದ್ದು ಯಾಕೆ ? #CUK
