ಮಾರ್ಚ್‌ 5ಕ್ಕೆ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಕಲಾತ್ಮಕ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು: ರವೀಂದ್ರನಾಥ್ ಟ್ಯಾಗೂರ್‌ ರವರ ಕಾದಂಬರಿ ಆಧಾರಿತ ʻʻಒಂದಾನೊಂದು ಕಾಲದಲ್ಲಿ ಒಬ್ಬ ರಾಜ‌ ಇದ್ದ” ಕಲಾತ್ಮಕ ಚಿತ್ರವೊಂದು ತಯಾರಾಗಿದೆ. ದೃಷ್ಟಿ ಮಿಡಿಯಾ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.

ಚಲನಚಿತ್ರದಲ್ಲಿ ಒಂದು ವಿಶೇಷತೆಯು ಅಡಗಿದೆ. ಈ ಚಿತ್ರದ 24 ಪಾತ್ರಗಳನ್ನು ಒಬ್ಬ ಕಲಾವಿದನೇ ಮಾಡಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ಬರಹಗಾರ ಯೋಗೇಶ್ ಮಾಸ್ಟರ್ ಈ ಎಲ್ಲಾ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಲ್ಲದೆ, ಠಾಕೂರರ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ರಾಷ್ಟ್ರಕವಿ ರವೀಂದ್ರನಾಥ್‌ ಟ್ಯಾಗೋರ್‌ ಅವರ ಇಂಗ್ಲೀಷ್‌ ಭಾಷೆಯ ʻಹಂಗ್ರಿ ಸ್ಟೋನ್ಸ್‌ʼ ಎಂಬ ಕಥಾಸಂಕಲನದಲ್ಲಿ ಇದ್ದ ʻಇನ್ಸ್‌ ದೇರ್‌ ವಾಸ್‌ ಎ ಕಿಂಗ್‌ʼ ಎಂಬ ಕತೆಯನ್ನು ಯೋಗೇಶ್‌ ಮಾಸ್ಟರ್‌ 25 ವರ್ಷಗಳ ಹಿಂದೆ ಕನ್ನಡಕ್ಕೆ ಅನುವಾದ ಮಾಡಿದ್ದರು. ಇದೇ ಕಥೆಯನ್ನು ಆಧರಿಸಿ ನಾಟಕವನ್ನು ಬರೆದು ರಂಗ ಪ್ರಯೋಗ ಮಾಡಿದ್ದರು. ಆಗಲೂ ಸಹ ಈ ನಾಟಕದ ಎಲ್ಲಾ ಪಾತ್ರಗಳನ್ನು ಯೋಗೇಶ್‌ ಮಾಸ್ಟರ್ ಅವರೇ ನಿರ್ವಹಿಸಿ ಏಕವ್ಯಕ್ತಿ ಪ್ರದರ್ಶನಕ್ಕೆ ಮಾರ್ಪಾಡು ಮಾಡಿ ಪ್ರಸ್ತುತಪಡಿಸಿದರು. ಈ ಪ್ರಯೋಗ ಸಾಕಷ್ಟು ಯಶಸ್ಸು ಗಳಿಸಿತು. ಇದನ್ನೇ ಈಗ ತೆರೆಯ ಮೇಲೆ ತರಲಾಗಿದೆ.

ಚಿತ್ರದ ನಿರ್ದೇಶಕ ಸಂತೋಷ್ ಕೊಡೆಂಕೇರಿ ಕೇವಲ 11 ಜನರ ತಂಡದೊಂದಿಗೆ ನಿರ್ದೇಶನ ಮಾಡಿದ್ದು ವಿಶೇಷ.‌ ಗುಣಮಟ್ಟದಲ್ಲಿ ಎಲ್ಲಿಯೂ ತೊಡಕುಗಳಾಗದಂತೆ ಸಿನಿಮಾ ತಯಾರಾಗಿದೆ ಮತ್ತು ಈ ಚಿತ್ರವೂ ವಿಶ್ವದ ಹಲವಾರು ಚಿತ್ರೋತ್ಸವದಲ್ಲಿ ಪಾಲ್ಗೊಂಡು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಚಿತ್ರತಂಡ ಟ್ರೈಲರ್, ಪೋಸ್ಟರ್ ಮತ್ತು ಚಿತ್ರದ ಒಂದಷ್ಟು ವಿಶೇಷತೆಗಳನ್ನು ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ(ಮಾರ್ಚ್ 5) ಮಧ್ಯಾಹ್ನ 12 ಘಂಟೆಗೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಜರುಗಲಿದೆ.

Donate Janashakthi Media

Leave a Reply

Your email address will not be published. Required fields are marked *