ಭೂ ಮಾಫಿಯಾ ವಿರುದ್ಧ 26 ವರ್ಷಗಳಿಂದ ಧರಣಿ ನಡೆಸುತ್ತಿರುವ ಶಿಕ್ಷಕ ಚುನಾವಣೆಗೆ ಸ್ಪರ್ಧೆ

ಲಕ್ನೋ: ಸತತ 26 ವರ್ಷಗಳಿಂದ ಭೂ ಹಗರಣದ ವಿರುದ್ಧ ಧರಣಿ ನಡೆಸುತ್ತಿರುವ ಶಿಕ್ಷಕರೊಬ್ಬರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಈಗಾಗಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಚುನಾವಣಾ ಪ್ರಚಾರ ಕೈಗೊಂಡಿದ್ದು, ಭಾರೀ ಪೈಪೋಟಿ ಏರ್ಪಟ್ಟಿದೆ. ಇದೀಗ ವಿಜಯ್ ಸಿಂಗ್ ಎಂಬ ಶಿಕ್ಷಕ ಇವರಿಬ್ಬರಿಗೆ ಪ್ರತಿಸ್ಪರ್ಧಿಯಾಗಲಿದ್ದಾರೆ.

ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್ ಪುರ ನಗರದಿಂದ ಸ್ಪರ್ಧಿಸಿದರೆ, ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ವಿರುದ್ಧ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಜಯ್ ಸಿಂಗ್ ಭ್ರಷ್ಟಾಚಾರ ವಿರೋಧಿ ಹೋರಾಟಗಾರನಾಗಿದ್ದು, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಭೂಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಜಾಫರ್‌ನಗರದಲ್ಲಿ 26 ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದೇನೆ. ಫೆಬ್ರವರಿ 9ರಂದು ಗೋರಖ್ ಪುರ ನಗರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಕಳೆದ 26 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ ಯಾವುದೇ ಪಕ್ಷವು ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಚಿಂತಿಸಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ.

ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಭೂಗೋಳಶಾಸ್ತ್ರವನ್ನು ಅಧ್ಯಯನ ಮಾಡಿ ಪದವೀಧರಾಗಿರುವ ವಿಜಯ್ ಸಿಂಗ್ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವ ಮೊದಲು 1990 ರ ದಶಕದ ಮಧ್ಯಭಾಗದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಅವರ ಮನೆಯ ಪರಿಸ್ಥಿತಿ ಬದಲಾಯಿತು.

ಸುಮಾರು 60 ವರ್ಷ ವಯಸ್ಸಿನ ವಿಜಯ್ ಸಿಂಗ್ ಅವರು 1996ರ ಜನವರಿಯಿಂದ ಮುಝಾಫರ್‌ ನಗರದ ಸರ್ಕಾರಿ ಕಛೇರಿ ಮುಂಭಾಗ ಧರಣಿ ಕುಳಿತರು. ಅವರು ಜಿಲ್ಲೆಯ ಅಧಿಕಾರಿಗಳು, ಕಂದಾಯ ನ್ಯಾಯಾಲಯಗಳು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೈರಾನಾದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಷಣ ಮಾಡಿದ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ವಿಜಯ್‌ ಸಿಂಗ್ ತಮ್ಮ ಬೇಡಿಕೆಗಳ ಬಗ್ಗೆ ಗದ್ದಲ ಸೃಷ್ಟಿಸಿದರು.

ಬಡವರು ಮತ್ತು ಭೂರಹಿತರು ಕೃಷಿ ಮಾಡಲು ಉದ್ದೇಶಿಸಿರುವ ಸರ್ಕಾರಿ ಭೂಮಿಗಳಾಗಿವೆ. ಆದರೆ, ಆಡಳಿತ ಪಕ್ಷಗಳು ಮತ್ತು ಭೂ ಮಾಫಿಯಾಗಳ ಕುತಂತ್ರದಿಂದಾಗಿ ಬಡವರ ಹಕ್ಕು ಮತ್ತು ಆಹಾರ ಹಕ್ಕನ್ನು ಕಸಿಯಲಾಗುತ್ತಿದೆ. ಮುಜಾಫರ್‌ನಗರ ಮತ್ತು ಶಾಮ್ಲಿ ಒಂದರಲ್ಲೇ ದೊಡ್ಡ ಪ್ರಮಾಣದ ಜಮೀನನ್ನು ಭೂ ಮಾಫಿಯಾ ಅತಿಕ್ರಮಿಸಿಕೊಂಡಿದೆ ಎಂದು ವಿಜಯ್‌ ಸಿಂಗ್ ಹೇಳಿದರು.

ನನ್ನ ಅಗತ್ಯಗಳನ್ನು ನೋಡಿಕೊಳ್ಳುವ ಮೂರು-ನಾಲ್ಕು ಸ್ನೇಹಿತರಿದ್ದಾರೆ. ನನ್ನ ಅಗತ್ಯಗಳು ಸೀಮಿತವಾಗಿವೆ. ನಾನೂ ಕೂಡ ಒಬ್ಬ ಕೃಷಿಕ ಮತ್ತು ಸ್ವಲ್ಪ ಜಮೀನು ಹೊಂದಿದ್ದೇನೆ ಎಂದರು.

ವಿಜಯ್‌ ಸಿಂಗ್‌ ಅವರಿಗೆ ಪಶ್ಚಿಮ ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ, ಇಬ್ಬರಿಗೂ ವಿವಾಹವಾಗಿದೆ ಮತ್ತು ಒಬ್ಬ ಮಗನಿದ್ದಾರೆ. ಅವರು ಹೇಳುವಂತೆ ನನ್ನ ಕುಟುಂಬ ನನ್ನನ್ನು ಬೆಂಬಲಿಸುವುದಿಲ್ಲ. ಅವರು ನನ್ನ ಧರಣಿಗೆ ವಿರುದ್ಧವಾಗಿದ್ದಾರೆ. ಇದು ಅವರಿಗೆ ತುಂಬಾ ಸಮಯವಾಗಿದೆ”ಎಂದರು.

Donate Janashakthi Media

Leave a Reply

Your email address will not be published. Required fields are marked *