ಕಂದಾಯ ಮತ್ತು ಅರಣ್ಯ ಇಲಾಖೆ ವಿರುದ್ದ ಡಿ.5 ರಂದು ತಹಶಿಲ್ದಾರ್ ಕಛೇರಿ ಮುಂದೆ ರೈತರೊಂದಿಗೆ ಪ್ರತಿಭಟನೆ

ಕೋಲಾರ: ರಾಜ್ಯಾದ್ಯಂತ ಬಗರ್ ಹುಕಂ ಸಾಗುವಳಿದಾರರನ್ನು ವಂಚಿಸಲು ಬಗರ್ ಹುಕುಂ ಭೂಮಿಗಳ ಅರಣ್ಯ ಇಂಡೀಕರಣದ ಮೂಲಕ ನೂರಾರು ವರ್ಷಗಳ ಸಾಗುವಳಿ ರೈತರನ್ನು ಹಾಗೂ ಈಗಾಗಲೇ ಬಗರ್ ಹುಕುಂ ಸಾಗುವಳಿ ಸಕ್ರಮಗೊಂಡ ರೈತರನ್ನು ಒಕ್ಕಲೆಬ್ಬಿಸುತ್ತಿರುವ ರೈತ ವಿರೋಧಿ ಕ್ರಮವನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ತಾಲೂಕಿನ ಅರಹಳ್ಳಿ ಗೇಟ್ ನಲ್ಲಿ ಗುರುವಾರ ನವೆಂಬರ್-30 ರಂದು ರೈತರ ಭೂಮಿಯನ್ನು ಅರಣ್ಯ ಇಲಾಖೆಯ ಇಂಡೀಕರಣದ ವಿರುದ್ದ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಸೇರಿದಂತೆ ಕೆಲವು ಕಡೆ ರೈತರ ತರಕಾರಿ ಬೆಳೆಗಳು ಸೇರಿದಂತೆ ಬೆಳೆದುನಿಂತ ಫಸಲು ಭರಿತ ಮಾವು ತೋಟಗಳನ್ನು ನಿರ್ದಯವಾಗಿ ಪೊಲೀಸ್ ರಕ್ಷಣೆಯಲ್ಲಿ ನಾಶ ಮಾಡಲಾಗಿದೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ದುಡಿಯುವ ಜನರ ಮಹಾಧರಣಿಯ ಮಹಾ ನಿರ್ಣಯ | ಕೇಂದ್ರಕ್ಕೆ ಛೀಮಾರಿ, ರಾಜ್ಯಕ್ಕೆ ಎಚ್ಚರಿಕೆ!

ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಾರ್ಪೊರೇಟ್ ಪರವಾದ ಧೋರಣೆ ಅನುಸರಿಸುತ್ತಿದೆ. ರೈತಾಪಿ ಬೇಸಾಯವನ್ನು ಸಂಪೂರ್ಣ ತೆಗೆದುಹಾಕಿ ಕಾರ್ಪೊರೇಟ್ ಕೃಷಿ ಹೇರುವ ನೀತಿಗಳನ್ನು ಅನುಸರಿಸುತ್ತಿದೆ. ಇಂತಹ ಕಾರ್ಪೊರೇಟ್ ಕೃಷಿ ನೀತಿಗಳನ್ನು ರೈತರು ಒಂದು ವರ್ಷಗಳ ಕಾಲ ಹೋರಾಟ ನಡೆಸಿ ಮೋದಿ ಸರ್ಕಾರ ಮಂಡಿಯೂರುವಂತೆ ಮಾಡಿದೆ ಇಂತಹ ನೀತಿಗಳನ್ನು ರಾಜ್ಯಗಳ ಮೂಲಕ ಜಾರಿಗೆ ತರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಕಾರ್ಪೊರೇಟ್ ಪರವಾದ ಕೃಷಿ ಧೋರಣೆಗಳನ್ನು ಕೃಷಿ ಪಂಪ್ ಸೆಟ್ ಗೆ ಪ್ರೀಪೇಡ್ ಮೀಟರ್ ಅಳವಡಿಸುವುದು. ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಕೇರಳ, ತಮಿಳುನಾಡು ಮಾದರಿಯಲ್ಲಿ ವಿರೋಧಿಸಬೇಕು ಜಿಲ್ಲೆಯ ಯಾವುದೇ ಸರ್ಕಾರಿ ಕಂದಾಯ ಭೂಮಿಗಳನ್ನು, ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಅರಣ್ಯ ಎಂದು ಇಂಡೀಕರಿಸುವಂತೆ ಅರಣ್ಯ ಇಲಾಖೆಯ ಮನವಿಯನ್ನು ತಿರಸ್ಕರಿಸಬೇಕು. ರೈತರ ಭೂಮಿ ಹಕ್ಕನ್ನು ರಕ್ಷಣೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ

ಈಗಾಗಲೇ ಆಗಿರುವ ಬಗರ್ ಹುಕುಂ ಭೂಮಿಗಳ ಅರಣ್ಯ ಇಲಾಖೆ ಇಂಡೀಕರಣ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದರೂ ಇದನ್ನು ಮರೆಮಾಚಿ ಬಿಜೆಪಿ ಸಂಸದ ಮುನಿಸ್ವಾಮಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಿಜೆಪಿ ತಿರಸ್ಕರಿಸಿ,ಕಾಂಗ್ರೆಸ್ ಅಧಿಕಾರಕ್ಕೆ ತಂದರೂ ಬಿಜೆಪಿ ಕಾಲದ ಇಂಡೀಕರಣವನ್ನೇ ಮುಂದುವರೆಸುತ್ತಿದ್ದು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಿಲ್ಲೆಯವರೇ ಆದ ಕಂದಾಯ ಮಂತ್ರಿ ಬಗರ್ ಹುಕಂ ಸಾಗುವಳಿದಾರರ ಅರ್ಜಿ ವಜಾ ಮಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಭಾಗವಹಿಸಿದ್ದ ರೈತರು ಮಾತನಾಡಿ ರೈತರ ಭೂಮಿಗಳಿಗೆ ಸರಕಾರವೇ ದಾಖಲೆಗಳನ್ನು ನೀಡಿದ್ದಾರೆ ಜೊತೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿದ್ದರು ಇವತ್ತು ಅರಣ್ಯ ಭೂಮಿ ಎಂದು ಹೇಳಲು ಹೊರಟಿದ್ದಾರೆ ರೈತರು ಒಗ್ಗಟ್ಟಿನಿಂದ ನಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕಾಗಿದೆ ಇದರ ವಿರುದ್ದ ಡಿ.5 ರಂದು ತಹಶಿಲ್ದಾರ್ ಕಛೇರಿ ಮುಂದೆ ದೊಡ್ಡ ಮಟ್ಟದ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ, ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್, ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಮುಖಂಡರಾದ ಆಲಹಳ್ಳಿ ವೆಂಕಟೇಶಪ್ಪ, ನಾರಾಯಣರೆಡ್ಡಿ, ಎನ್.ಎನ್ ಶ್ರೀರಾಮ್, ಸುಗಟೂರು ಶ್ರೀಧರ್ ರಾಜ್ಯ ರೈತ ಸಂಘದ ಅಬ್ಬಣಿ ಶಿವಪ್ಪ, ರೈತ ಹಕ್ಕಗಳ ಸಮಿತಿ ಚಂದ್ರಮೌಳಿ, ರೈತರಾದ ಯಡಹಳ್ಳಿ ಮಂಜುನಾಥ್, ನಾಗರಾಜ್, ಲೋಕೇಶ್, ಎನ್.ಬಿ ವೆಂಕಟೇಶ್, ರಂಗಪ್ಪ, ಶಿವಮೂರ್ತಿ, ನರಸಿಂಹಪ್ಪ, ಸುರೇಶ್ ಬಾಬು, ಅಶ್ವಥ್ ನಾರಾಯಣಗೌಡ, ಯಲ್ಲಪ್ಪ, ನಂಜುಂಡಪ್ಪ, ಮುಂತಾದವರು ಇದ್ದರು.

ವಿಡಿಯೋ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

Donate Janashakthi Media

Leave a Reply

Your email address will not be published. Required fields are marked *