ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ

ಬೆಂಗಳೂರು: ಧರಣಿನಿರತರ ಹಕ್ಕೊತ್ತಾಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಲು ಒಪ್ಪಿದ್ದು, ಶೀಘ್ರದಲ್ಲೇ ಹೋರಾಟಗಾರರೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಹೇಳಿದರು. ಅವರು ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ದುಡಿಯುವ ಜನರ ಮಹಾಧರಣಿ ಸ್ಥಳಕ್ಕೆ ಬಂದು ಹೋರಾಟಗಾರರ ಹಕ್ಕೊತ್ತಾಯಗಳನ್ನು ಆಲಿಸಿ ಮಾತನಾಡುತ್ತಿದ್ದರು.

“ಮುಖ್ಯಮಂತ್ರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿದ್ದಾರೆ. ಇಲ್ಲಿನ ಹೋರಾಟದ ಬಗ್ಗೆ ಅವರಿಗೆ ಅರಿವಿದೆ. ಅವರ ಪರವಾಗಿ ನನ್ನನ್ನು ಕಳಿಸಿದ್ದಾರೆ. ಹೋರಾಟಗಾರರು ಮುಂದಿಟ್ಟಿರುವ ಎಲ್ಲ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಲು ಸಮಯ ಕೊಡುತ್ತೇನೆ ಎಂದ ಸಚಿವರು, “ಹೋರಾಟಗಾರರು 18 ಹಕ್ಕೊತ್ತಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಮೂರು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳೂ ಇವೆ. ಮಂಗಳವಾರ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಭೆ ಇದೆ. ಅಲ್ಲಿ, ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಮಾಡಿಸಲು ನಾನು ಒತ್ತುಕೊಡುತ್ತೇನೆ. ಶೀಘ್ರದಲ್ಲೇ ಹೋರಾಟಗಾರರೊಂದಿಗಿನ ಸಭೆಯನ್ನು ನಿಗದಿ ಮಾಡಿಸುತ್ತೇನೆ” ಎಂದು ಸಚಿವರು ಹೇಳಿದರು.

ಇದನ್ನೂ ಓದಿ :ಮಹಾಧರಣಿ| ಶತ್ರುಗಳ ಎದೆಯಲ್ಲಿ ಭಯ ಬಿತ್ತುವ ಹೋರಾಟ ಕಟ್ಟಬೇಕಾಗಿದೆ-ವಿಜೂ ಕೃಷ್ಣನ್‌

“ಕಾರ್ಮಿಕರು, ಭೂಮಿ ರಹಿತರು ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬರ ಪರಿಹಾರಕ್ಕೆ ಅನುದಾನ ಕೇಂದ್ರದಿಂದ ಬಂದಿಲ್ಲ. ಅದರ ಬಗ್ಗೆ ಚರ್ಚಿಲು ಮುಖ್ಯಮಂತ್ರಿಗಳು ದೆಹಲಿಗೆ ತರಳಲಿದ್ದಾರೆ. ಡಿಸೆಂಬರ್ 4ರಿಂದ ಅಧಿವೇಶನವೂ ಇದೆ. ಈ ಎಲ್ಲದರ ನಡುವೆ ಸಮಯವನ್ನು ನೋಡಿಕೊಂಡು, ಸಭೆ ನಿಗದಿ ಮಾಡಿಸುತ್ತೇನೆ. ಎಲ್ಲರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ” ಎಂದಿದ್ದಾರೆ. “ಹೋರಾಟಗಾರರು ಮುಂದಿಟ್ಟಿರುವ ಎಲ್ಲ ವಿಷಯಗಳು ಶ್ರಮಿಕರು, ಬಡವರ ಪರವಾಗಿವೆ. ಅವುಗಳೆಲ್ಲವನ್ನೂ ನಾವು ಈಡೇರಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬಡವರು, ರೈತರು, ಕಾರ್ಮಿಕರ ಪರವಾಗಿ ನಡೆಯುತ್ತಿರುವ ಹೋರಾಟ ಸ್ವಾಗತಾರ್ಹ. ಸಾಮಾನ್ಯ ಜನರ ವಿಷಯಗಳು ಚರ್ಚೆಯಾಗಬೇಕು. ಜೀವನಾಧಾರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಾಗಿ, ಎಲ್ಲ ಹಕ್ಕತ್ತಾಯಗಳ ಬಗ್ಗೆ ಖಂಡಿತವಾಗಿಯೂ ಚರ್ಚಿಸುತ್ತೇನೆ. ಸಭೆ ಕರೆಯುತ್ತೇವೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

 

Donate Janashakthi Media

Leave a Reply

Your email address will not be published. Required fields are marked *