ಓಲಾ AI ಘಟಕ ‘ಕೃತ್ರಿಮ್’ ನ ಇಂಜಿನಿಯರ್ ಆತ್ಮಹತ್ಯೆ : ವಿಪರೀತ ಕೆಲಸದ ಒತ್ತಡ ನಿಲ್ಲಿಸಲು KITU ಕರೆ

ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳ ನೌಕರರ ಸಂಘ (KITU) ಓಲಾ ದ ಕೃತಕ ಬುದ್ಧಿಮತ್ತೆ ಘಟಕ (AI) ‘ಕೃತ್ರಿಮ್’ ನ ಬೆಂಗಳೂರಿನ  ಇಂಜಿನಿಯರ್ ಆದ ನಿಖಿಲ್ ಸೂರ್ಯವಂಶೀಯ ಸಾವಿಗೆ ಅಪಾರ ದುಖ ವ್ಯಕ್ತಪಡಿಸಿದೆ. ಓಲಾ

ಈತ ಅತಿಯಾದ ಕೆಲಸದ ಒತ್ತಡ ಮತ್ತು ಕಂಪನಿಯ ವಿಷಕಾರಿ ಕಾರ್ಯ ಪರಿಸರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ ಇವರಿಗೆ ಮೂರು ಜನರ ಕೆಲಸಗಳನ್ನು ವಹಿಸಲಾಗಿತ್ತು ಮತ್ತು ಅವರ ಮ್ಯಾನೇಜರ್ ಸತತವಾಗಿ ಕಿರುಕುಳ ನೀಡುತ್ತಿದ್ದರು. KITU ಒಲಾ ದ ಮ್ಯಾನೇಜ್ಮೆಂಟ್ ಅನ್ನು ಈ ಸಾವಿಗೆ ಮತ್ತು ಅತೀವ ಶೋಷಣೆಯ, ನೌಕರರ ಘನತೆಯ ಉಲ್ಲಂಘನೆ ಮತ್ತು ಮಿತಿಮೀರಿದ ಕೆಲಸದ ಹೇರುವಿಕೆಗೆ ಪೂರ್ಣ ಬಾಧ್ಯಸ್ಥರನ್ನಾಗಿ ನೋಡುತ್ತದೆ. ಕಂಪನಿಯ ಟೊಳ್ಳು ಸಂತಾಪ, ‘ನಿಖಿಲ ಅವರು ವೈಯಕ್ತಿಕ ರಜೆಯ ಮೇಲೆ ಇದ್ದರು’ ಎನ್ನುವ ಹಾರಿಕೆಯ ಮಾತು, ತನ್ನ ಜವಾಬ್ದಾರಿಯನ್ನು ಕೊಡವಿಕೊಳ್ಳುವ, ಉದ್ಯೋಗಿಗಳ ದುರುಪಯೋಗವನ್ನು ತಡೆಯುವಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನವಷ್ಟೇ. ‘ಕೃತ್ರಿಮ್’ ನಲ್ಲಿನ ಆಘಾತಕಾರಿ ಕಾರ್ಯ ಪರಿಸರ ಮತ್ತು ಕಾರ್ಮಿಕ ಕಾಯದೆಗಳ ಸತತ ಉಲ್ಲಂಘನೆಯ ಕುರಿತು ಕಂಪನಿಯ ಮಾಜಿ ಉದ್ಯೋಗಿಗಳ ಹೇಳಿಕೆಗಳು ಈ ದುರುಪಯೋಗವನ್ನು ದೃಢೀಕರಿಸಿವೆ.

ಇದನ್ನೂ ಓದಿ : ಕ್ಯಾಬ್‌ ಸೇವೆಗೂ ಮುನ್ನ ಟಿಪ್ಸ್‌ ಪಡೆದರೆ ಕಟ್ಟುನಿಟ್ಟಿನ ಕ್ರಮ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ ಓಲಾ

ಇದೊಂದು ಅಪರೂಪದ ಒಂಟಿ ಘಟನೆ ಅಲ್ಲ. ಇದು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವ್ಯವಸ್ಥಿತ ಮಾದರಿ. ಇಲ್ಲಿ ದಿನಕ್ಕೆ ಎಂಟರಿಂದ ಒಂಬತ್ತು ಘಂಟೆಯ ಕೆಲಸವೆಂಬುದು ಇಲ್ಲ. ಇಲ್ಲಿ ಕಂಪನಿಗಳು ನೌಕರರನ್ನು ನಿಯಮಿತ ಕೆಲಸದ ಸಮಯದ ಹೊರಗೂ ಯಾವುದೇ ಹೆಚ್ಚಿನ ಪ್ರತಿಫಲ ಇಲ್ಲದೆ ಕೆಲಸ ಮಾಡಲು ಮತ್ತು ವಾರಾಂತ್ಯಗಳಲ್ಲೂ ಕೆಲಸ ಮಾಡಲು ಒತ್ತಡ ಹೇರುತ್ತಲೇ ಇರುತ್ತವೆ. ಮಾಲಕರು ನೌಕರರನ್ನು ಮಿತಿ ಮೀರಿ ದುಡಿಸಿಕೊಂಡು ಅವರಿಗೆ, ದೈಹಿಕ, ಮಾನಸಿಕ ಹಿಂಸೆ ಮಾಡುತ್ತಾರೆ. ಅವುಗಳು ಆತ್ಮಹತ್ಯೆಯಂತಹ ದುಖದಾಯಕ ಅಂತ್ಯಗಳನ್ನೂ ಕಾಣುತ್ತವೆ.

ಓಲಾ ಸ್ಥಾಪಕ ಭಾವಿಷ್ ಅಗರವಾಲ್ ಅವರು ಕೆಲಸ-ಜೀವನ ಸಮತೋಲದ ಬಗೆಗೆ, ಅವು “ಪಾಶ್ಚಿಮಾತ್ಯರ ಪರಿಕಲ್ಪನೆ” ಎಂದು, ತಿರಸ್ಕಾರ ತೋರಿದ್ದಾರೆ. ಸರಕಾರ ಈ ವಿಷಯದಲ್ಲಿ ಸಂಪೂರ್ಣ ತನಿಖೆ ನಡೆಸಿ, ಓಲಾ ವನ್ನು ಇಂತಹ ನಿಯಂತ್ರಣವಿಲ್ಲದ ವಿಷಕಾರಿ ಕೆಲಸ ಪದ್ದತಿಗೆ ಬಾಧ್ಯಸ್ಥ ಗೊಳಿಸಿ ಕಾನೂನು ಉಲ್ಲಂಘಿಸುವ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡುವ ಕೆಲಸ ಮಾಡಬೇಕು ಎಂದು KITU ಒತ್ತಾಯಿಸಿದೆ. ಕೆಲಸ-ಜೀವನ ಸಮತೋಲ ಇರುವ ಕೆಲಸ ಪರಂಪರೆ/ ಸಂಸ್ಕೃತಿ ಹುಟ್ಟುಹಾಕಲು ಮತ್ತು ವಿಷಕಾರಿ ಕೆಲಸ ಸಂಸ್ಕೃತಿಗೆ ವಿದಾಯ ಹಾಡಲು ಎಲ್ಲ ನೌಕರರು ಹೋರಾಟದ ತೊರೆಗೆ ಬಂದು ಸೇರಬೇಕೆಂದು KITU ಕರೆ ನೀಡಿದೆ.

ಇದನ್ನೂ ನೋಡಿ : ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media ಓಲಾ

 

Donate Janashakthi Media

Leave a Reply

Your email address will not be published. Required fields are marked *