ತಿರುವನಂತಪುರಂ: ಮತದಾರರ ಪಟ್ಟಿಯಲ್ಲಿ ಒಬ್ಬ ಮಹಿಳೆ ವಿವಿಧ ಕಡೆಗಳಲ್ಲಿ ತಮ್ಮ ವಿವರಗಳು ದಾಖಲಾಗಿರುವ ಹಿಂದೆ ಯಾವುದೇ ಸಂಘಟಿತ ಪ್ರಯತ್ನವಿಲ್ಲ. ಆ ಮಹಿಳೆ ಕಾಂಗ್ರೆಸ್ ಸದಸ್ಯರ ಪಟ್ಟಿಯಲ್ಲಿರುವವರು ಎಂದು ಅಳಪ್ಪುಳದಲ್ಲಿ ಸುದ್ದಿಗಾರರಿಗೆ ಕೇರಳದ ಮುಖ್ಯಮಂತ್ರಿ ಹಾಗೂ ಎಡರಂಗದ ನಾಯಕ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಪಿಣರಾಯ್ ವಿಜಯನ್ ಹೇಳಿದರು.
ಕೇರಳದ ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಾಲ ಅವರು ಕೇರಳದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವರ ವಿವರಗಳು ಹಲವೆಡೆ ನಮೂದಾಗಿರುವ ಹಿಂದೆ ಸಂಘಟಿತ ಕ್ರಮವಿದೆ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು.
ಕೇರಳದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ವಂಚನೆ ಮತ್ತು ಅಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲಾ ಗಂಭೀರ ಆರೋಪಗಳನ್ನು ಎತ್ತಿದ್ದರು. 2021ರ ಜನವರಿ 20 ರಂದು ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಯನ್ನು ಉಲ್ಲೇಖಿಸಿ ಅವರು ರಾಜ್ಯದಾದ್ಯಂತ ಪ್ರತಿ ಕ್ಷೇತ್ರದಲ್ಲಿ ನಕಲಿ ಮತಗಳನ್ನು ವ್ಯಾಪಕವಾಗಿ ಸೇರಿಸಲಾಗಿದೆ ಎಂದು ಹೇಳಿದ್ದರು. ರಾಜ್ಯದ ಎಲ್ಲಾ 140 ಕ್ಷೇತ್ರಗಳಲ್ಲಿ ನಕಲಿ ಮತದಾರರನ್ನು ಸೃಷ್ಟಿಸುವ ಪ್ರಯತ್ನದ ಹಿಂದೆ ರಾಜ್ಯ ಮಟ್ಟದಲ್ಲಿ ಸ್ಪಷ್ಟವಾದ ಸಂಘಟಿತ ಪ್ರಯತ್ನಗಳು ನಡೆದಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವು ಇದನ್ನು ಒಪ್ಪಿಕೊಂಡಿದ್ದು ಚುನಾವಣಾ ಆಯುಕ್ತರಾದ ಟೀಕಾ ರಾಮ್ ಮೀನಾ ಅವರು 1600ಕ್ಕೂ ಹೆಚ್ಚು ಈ ರೀತಿ ಎರಡೆರೆಡು ಬಾರಿ ಮತಪಟ್ಟಿಗಳು ಸಿದ್ಧವಾಗಿವೆ. ಈ ಬಗ್ಗೆ ತನಿಖೆ ನಡೆಸಿದ್ದಾರೆ. 590 ಕಡೆಗಳಲ್ಲಿ ಈ ಬಗ್ಗೆ ಕಂಡು ಹಿಡಿಯಲಾಗಿದೆ. ಅದು ಹೊಸತೇನಲ್ಲ ಮತ್ತು ವಿವಿಧ ಕಾರಣಗಳಿಂದಾಗಿ ಅನೇಕ ರಾಜ್ಯಗಳಲ್ಲಿದ್ದವರು ಸೇರಿರಬಹುದು. ಇಂತಹ ಅಕ್ರಮದಲ್ಲಿ ಭಾಗಿಯಾದಂತಹ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ನೆನ್ನೆ ಚುನಾವಣಾ ಆಯೋಗದ ಹೇಳಿಕೆಯ ನಂತರ ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆವರು ಹಲವೆಡೆ ಮತಪಟ್ಟಿಗಳಲ್ಲಿ ತಮ್ಮ ಮಹಿಳೆಯೊಬ್ಬರ ಹೆಸರು ನಮೂದಾಗಿದೆ. ಆಕೆ ಕಾಂಗ್ರೆಸ್ ಪಕ್ಷದ ಸಹಾನುಭೂತಿ ಇರುವ ಮಹಿಳೆ. ಕಾಂಗ್ರೆಸ್ ಕಾರ್ಯಕರ್ತರ ಪಟ್ಟಿಗೆ ಸೇರಿರುವವರು ಎಂದು ಸ್ಪಷ್ಟಪಡಿಸಿದರು.
ಉತ್ತರ ಕಾಸರಗೋಡು ಜಿಲ್ಲೆಯ ಉದುಮಾ ವಿಭಾಗದ ವ್ಯಾಪ್ತಿಯಲ್ಲಿ 61 ವರ್ಷದ ಮತದಾರೆ ಕುಮಾರಿ ಎಂಬವರ ವಿವರಗಳು ಐದು ಚುನಾವಣಾ ಗುರುತಿನ ಚೀಟಿಗಳಲ್ಲಿ ಇವೆ ಎಂದು ರಮೇಶ್ ಚೆನ್ನಿತಾಲಾ ಆರೋಪಿಸಿದರು. ತಾನು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವವಳು. ತಮ್ಮ ಹೆಸರು ಐದು ಗುರುತಿನ ಚೀಟಿಯಲ್ಲಿ ಹೇಗೆ ನಮೂದಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಮಹಿಳೆ ಮಾಧ್ಯಮದವರಿಗೆ ತಿಳಿಸಿದಳು.
ಐದು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ನಂತರ ಚುನಾವಣಾ ಅಧಿಕಾರಿಯನ್ನು ಸೋಮವಾರ ಅಮಾನತುಗೊಳಿಸಲಾಗಿದೆ.