ಸದನದ ಒಳಗೆ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್

ಬೆಂಗಳೂರು: ವಿಧಾನಸಭೆ‌ ಅಧಿವೇಶನ ಆರಂಭವಾಗುತ್ತಿದ್ದಂತೆ ಸದನದ ಒಳಗ ಕಾಂಗ್ರೆಸ್‌ ಸದಸ್ಯರು ಸಿಡಿ ಪ್ರದರ್ಶನ ಮಾಡಿ ಧರಣಿ ನಡೆಸಿದರು. ಸಿಡಿ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ನ್ಯಾಯಾಲಯದ ಮೋರೆ ಹೋಗಿದ್ದ ಆರು ಜನ ಸಚಿವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಸದಸ್ಯರು ಗದ್ದಲ ಏರ್ಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರಸ್‌ ಸದಸ್ಯರಿಂದ ಆರಂಭವಾದ ಪ್ರತಿಭಟನೆ ಇಂದು ಸಹ ಮುಂದುವರೆಯಿತು.

ಸದನದ ಒಳಹೋಗುವ ಮುನ್ನ ಕಾಂಗ್ರೆಸ್‌ ಸದಸ್ಯರು ಈಶ್ವರ ಖಂಡ್ರೆ ಸಿಡಿಯನ್ನು ಪ್ರದರ್ಶಿಸಿದರು. ರಾಜ್ಯದಲ್ಲಿರುವುದು ಸಿಡಿ ಸರಕಾರ ಎಂದು ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಆರೋಪಿಸಿದರು.

 ಇದನ್ನು ಓದಿ : ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸಿದ ಸಿದ್ಧು

ಉಚ್ಚ ನ್ಯಾಯಾಲಯದ ನೇತೃತ್ವದಲ್ಲಿ ತನಿಖೆಯಾಗಬೇಕು. ಹೆಣ್ಣು ಮಗಳಿಗೆ ರಕ್ಷಣೆ ನೀಡಬೇಕು. ಅತ್ಯಾಚಾರ ಪ್ರಕರಣವನ್ನು ದಾಖಲಿಸಬೇಕು ಹಾಗೂ ವರದಿ ಪ್ರಕಟಿಸಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಆರು ಜನ ಸಚಿವರೂ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು. ಬೇಡಿಕೆ ಈಡೇಡರದಿದ್ದರೆ ಧರಣಿ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದರು.

ಸದನದಲ್ಲಿ ಕಾಂಗ್ರೆಸ್‌ ಸದಸ್ಯರ ಗದ್ದಲ ಹೆಚ್ಚಾಗುತ್ತಿದ್ದಂತೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನ ಸುಗಮವಾಗಿ ನಡೆಯಲು ಸಹಕಾರ ನೀಡಬೇಕೆಂದು ಕೇಳಿದರೂ ಸಹ ಗದ್ದಲ ನಿಲ್ಲದ ಪರಿಣಾಮವಾಗಿ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.

ಇದನ್ನು ಓದಿ : ಸಿಡಿ ಬ್ಲಾಕ್‌ ಮೇಲ್‌ ನಲ್ಲಿ ನರಳುತ್ತಿದೆ ʼನೈತಿಕತೆʼ

ಕಲಾಪ ಸುಗಮವಾಗಿ ನಡೆಸಲು ಕಾಂಗ್ರೆಸ್‌ ನಾಯಕರ ಮನವೊಲಿಸಲು ಮುಂದಾದ ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ಪ್ರಕರಣವನ್ನು ತನಿಖೆ ನಡೆಯುತ್ತಿದೆ. ಸರಕಾರ ನಿನ್ನೆಯೇ ಇದಕ್ಕೆ ಉತ್ತರ ನೀಡಿದೆ. ಇನ್ನೇನೂ ಹೇಳುವುದಿಲ್ಲ. ಕಾಂಗ್ರೆಸ್‌ ನವರು ಧರಣಿ ಕೈಬಿಡಬೇಕೆಂದು ಕೇಳಿಕೊಂಡರು.

ಸಭಾಧ್ಯಕ್ಷರ ಕಛೇರಿಯಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಮೇಶ್‌ ಕುಮಾರ್‌ ಭಾಗವಹಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಸಂಧಾನ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌, ಡಿ.ಕೆ.ಶಿವಕುಮಾರ್‌ ಹಾಗೂ ಅಜಯ್‌ ಸಿಂಗ್‌ ಭಾಗಿಯಾದರು.

ಸಭಾಧ್ಯಕ್ಷರ ಸಮ್ಮುಖದಲ್ಲಿ ಸಂಧಾನ ಸಭೆ ವಿಫಲವಾಯಿತು. ಸಿಡಿ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು ಹಾಗು ಕೋರ್ಟ್‌ ಮೋರೆ ಹೋಗಿರುವ ಆರು ಜನ ಸಚಿವರು ಸಹ ರಾಜೀನಾಮೇ ನೀಡಬೇಕೆಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು.

ಇದನ್ನು ಓದಿ : ಸಿಡಿ ಪ್ರಕರಣ : ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಜೆಪಿ ಹೈಕಮಾಂಡ್

ಸಭಾಧ್ಯಕ್ಷರ ಸಮ್ಮುಖದಲ್ಲಿನ ಸಭೆಯ ಗೃಹ ಬಳಿಕ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಡಿ.ಕೆ.ಶಿವಕುಮಾರ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಮಧ್ಯಾಹ್ನ 12.40ಕ್ಕೆ ಮತ್ತೆ ಆರಂಭವಾದ ಸದನದಲ್ಲಿ ಸಭಾಧ್ಯಕ್ಷರು ಸಂಧಾನ ಸಭೆಯ ಮಾಹಿತಿಯನ್ನು ನೀಡಿದರು. ಸರಕಾರ ಉತ್ತರ ನೀಡಿದೆ ಧರಣಿ ಕೈಬಿಡಿ ಎಂದರು. ಸಭಾಧ್ಯಕ್ಷರು ಮತ್ತೆ ಎರಡನೇ ಬಾರಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

 

Donate Janashakthi Media

Leave a Reply

Your email address will not be published. Required fields are marked *