ಕೇರಳ: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಇದೀಗ ಕೇರಳ ಕೆಲವು ಶಾಲೆಗಳು ಹೊಸದಾಗಿ ಅರ್ಧ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಪರಿಚಯಿಸಿವೆ. ಬೆಂಚ್
2024 ರಲ್ಲಿ ಬಿಡುಗಡೆಗೊಂಡ ವಿನೇಶ್ ವಿಶ್ವನಾಥ್ ಅವರ ನಿರ್ದೇಶನದ ಮಲಯಾಳಂ ಚಲನಚಿತ್ರವಾದ ʼಸ್ಥಾನಾರ್ಥಿ ಶ್ರೀಕುಟ್ಟನ್ʼ ಸಿನಿಮಾದಿಂದ ಪ್ರೇರಣೆಗೊಂಡು ಶಾಲೆಗಳು ಈ ಹೊಸ ವ್ಯವಸ್ಥೆಯನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳಿಗೆ ಕಟ್ಟುವ ಬ್ಯಾಕ್ ಬೆಂಚರ್ಚ್ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.
ʼUʼ ಶೇಪ್ ಅಂದರೆ ಈ ಅರ್ಧವೃತ್ತಾಕಾರದ ಆಸನ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ತರಗತಿಯಲ್ಲಿ ಸಮಾನ ಒಳಗೊಳ್ಳುವಿಕೆ, ಸಮಾನ ಭಾಗವಹಿಸುವಿಕೆ ಮತ್ತು ಎಲ್ಲಾ ಚಟುವಟಿಕೆಗಳಲ್ಲೂ ಉತ್ತಮ ತೊಡಗಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಪದವಿ, ಇಂಜಿನೀಯರಿಂಗ್ ಬೋಧಕ ವರ್ಗದ ತರಬೇತಿಗೆ ಅಜೀಂ ಪ್ರೇಮ್‌ಜಿಗೆ ಹೊಣೆ – ವ್ಯಾಪಕ ವಿರೋಧ
ಕೇರಳದ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ನಿರ್ವಹಣಾ ಸಮಿತಿಗಳು ಈ ಉಪಕ್ರಮವನ್ನು ಅನುಮೋದಿಸಿವೆ. ಪ್ರಸ್ತುತ ಈ ವ್ಯವಸ್ಥೆಯನ್ನು ಕೊಲ್ಲಂ, ಕಣ್ಣೂರು, ತ್ರಿಶೂರ್, ಪಾಲಕ್ಕಾಡ್ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರಲಾಗಿದೆ.
“ಈ ಹೊಸ ವ್ಯವಸ್ಥೆಯು ʼವಿದ್ಯಾರ್ಥಿಗಳ ನಡುವಿನ ಸಂವಹನದಲ್ಲಿ ಹೆಚ್ಚಳ ಕಂಡು ಬಂದಿದೆ. ಜೊತೆಗೆ ವಿಶೇಷವಾಗಿ ಹಿಂಬಂದಿಯಲ್ಲಿ ಕೂರುತ್ತಿದ್ದ ವಿದ್ಯಾರ್ಥಿಗಳ ನಿರ್ಲಕ್ಷ್ಯವನ್ನು ಮತ್ತು ಅವರ ಕಡೆಗಣಿಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಅಲ್ಲದೆ ಈ ಹೊಸ ವ್ಯವಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿವೆ” ಎಂದು ಇಲ್ಲಿನ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ವ್ಯವಸ್ಥೆಯ ಬಗ್ಗೆ ಮಾತನಾಡಿದ ಕೇರಳ ಸಾಮಾನ್ಯ ಶಿಕ್ಷಣ ನಿರ್ದೇಶಕ ಎಸ್. ಶನವಾಸ್, ‘ತರಗತಿಯ ಗಾತ್ರ ಮತ್ತು ವಿದ್ಯಾರ್ಥಿಗಳ ಸಂಖ್ಯೆಯಂತಹ ಅಂಶಗಳನ್ನು ಅಧ್ಯಯನ ಮಾಡಿದ ಬಳಿಕ ಈ ವಿಧಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಈ ವ್ಯವಸ್ಥೆಯಲ್ಲಿ ಮೊದಲ ಬೆಂಚ್, ಕೊನೆಯ ಬೆಂಚ್ ಎಂದ ತಾರತಮ್ಯ ಇರುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಪಾಠದ ಕಡೆ ಗಮನ ಹರಿಸಬಹುದು. ಮಾತ್ರವಲ್ಲದೆ, ಎಲ್ಲಾ ವಿದ್ಯಾರ್ಥಿಗಳ ಮೇಲೆ ಏಕಕಾಲದಲ್ಲಿ ಕಣ್ಣಿಡಲು ಹಾಗೂ ಎಲ್ಲರಿಗೂ ಸಮಾನ ಆದ್ಯತೆ ಕೊಡಲು ಶಿಕ್ಷಕರಿಗೂ ಸುಲಭವಾಗುತ್ತದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ನೋಡಿ: ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆ(ELI) ಎನ್ನುವ ವಂಚನೆಯ ಆಳ ಅಗಲ.. Janashakthi Media
