ತಮಿಳುನಾಡಿಗೆ ಹರಿದು ಹೋದ 77 ಟಿಎಂಸಿ ಕಾವೇರಿ ನೀರು

ಮಂಡ್ಯ: ಕೊಡಗು ಮತ್ತು ಹಾಸನ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕಾವೇರಿ ಕಣಿವೆ ವ್ಯಾಪ್ತಿಯ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಹೆಚ್ಚುವರಿ ನೀರನ್ನು ಜಲಾಶಯಗಳಿಂದ ನದಿಗೆ ಬಿಡಲಾಗಿದ್ದು, ಕಳೆದ ಒಂದೂ ಕಾಲು ತಿಂಗಳಲ್ಲಿ ಬರೋಬ್ಬರಿ 77 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ.

ಜೂನ್‌ ಮತ್ತು ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಕೊಡಬೇಕಾದ (40.43 ಟಿಎಂಸಿ) ಪ್ರಮಾಣಕ್ಕಿಂತಲೂ 36.5 ಟಿಎಂಸಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೊಗಿದೆ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಜೂನ್‌ ನಲ್ಲಿ 9.19 ಟಿಎಂಸಿ ಮತ್ತು ಜುಲೈ 31.24 ಟಿಎಂಸಿ ನೀರನ್ನು ಕರ್ನಾಟಕವು ತಮಿಳುನಾಡಿಗೆ ಕೊಡಬೇಕಿದೆ. ಆದರೆ ಈವರೆಗೆ ಕೆ ಆರ್‌ ಎಸ್‌ ಜಲಾಶಯದಿಂದ 46 ಟಿಎಂಸಿ ಹಾಗೂ ಕಬಿನಿ ಜಲಾಶಯದಿಂದ 40.51 ಟಿಎಂಸಿ ನೀರನ್ನು ನದಿಗೆ ಬಿಡಲಾಗಿದೆ.

ಇದನ್ನೂ ಓದಿ: 3 ತಿಂಗಳಲ್ಲಿ ಪ್ರತಿಕ್ರಿಯಿಸಲು ಸಿಬಿಎಸ್ಇ, ಸಿಐಎಸ್ಸಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಆದರೆ ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ 77 ಟಿಎಂಸಿ ಅಡಿ ನೀರು ತನಿಳುನಾಡಿಗೆ ಹರಿದು ಹೋಗಿದೆ ಜು. 11 ರೊಳಗೆ ಇಷ್ಟೊಂದು ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಕೊಟ್ಟಿರುವುದು ಇದೇ ಮೊದಲು. ಸಾಮಾನ್ಯವಾಗಿ ಕಾವೇರಿ ಕಣೀವೆಯ ಜಲಾಶಯಗಳು ಭರ್ತಿಯಾದ ಬಳಿಕ ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್‌ ತಿಂಗಳಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು.

ಈ ಬಾರಿ ಜೂನ್‌ ನಲ್ಲೇ ಅತ್ಯದಿಕ ಪ್ರಮಾಣದ ನೀರನ್ನು ತಮಿಳುನಾಡಿಗೆ ಕೊಡಲಾಗಿದೆ. ಇದಕ್ಕೆ ಈ ಬಾರಿ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸುರಿದು ಧಾರಾಕಾರ ಮಳೆಯೇ ಕಾರಣವಾಗಿದೆ. ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಜಲಾಶಯಗಳಿಗೆ ನಿರೀಕ್ಷೆಗೂ ಮೀರಿದ ಪ್ರಮಾಣದ ಒಳ ಹರಿವು ಬಂದಿದೆ. ಇದರಿಂದ ಜಲಾಶಯಗಳು ಭರ್ತಿಯಂಚು ತಲುಪುತ್ತಿದಂತೆ ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗಿತ್ತು.

ಇದನ್ನೂ ನೋಡಿ: ಉದ್ಯೋಗ ಸಂಬಂಧಿತ ಪ್ರೋತ್ಸಾಹ ಯೋಜನೆ(ELI) ಎನ್ನುವ ವಂಚನೆಯ ಆಳ‌ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *