ಪಂಜಾಬ್ : ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಸಂದರ್ಭದಲ್ಲಿ ಜನವರಿ 12ರಂದು ಬಂಧಿಸಲ್ಪಟ್ಟಿದ್ದ ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೌದೀಪ್ ಕೌರ್ ಅವರಿಗೆ ಪಂಜಾಬ್-ಹರಿಯಾಣ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಕಳೆದ 46 ದಿನಗಳಲ್ಲಿ ಜೈಲಿನಲ್ಲಿದ್ದಾಗ ತಾನು ಅನುಭವಸಿದ ಆಘಾತಕಾರಿ ಅನುಭವವನ್ನು 24 ವರ್ಷದ ಕೌರ್ ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ದೌರ್ಜನ್ಯದ ಕುರಿತು ತಿಳಿಸುತ್ತಾ ಹೋಗಿದ್ದಾರೆ.
ಕೌರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 307 (ಕೊಲೆ ಯತ್ನ), 353ರ (ಕರ್ತವ್ಯಕ್ಕೆ ಅಡ್ಡಿ), 146 (ದೊಂಬಿ) ಅಡಿ ಮೂರನೇ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲಿ ಇದ್ದರು.
ಪೋಲಿಸರು ನೀನು ಒಬ್ಬ ದಲಿತೆ, ನಿಮ್ಮ ಕೆಲಸ ಏನಿದ್ದದರೂ ಗಟಾರವನ್ನು ಸ್ವಚ್ಚಗೊಳಿಸುವು. ದೊಡ್ಡವರ ವಿರುದ್ದ ಹೋರಾಡುವ ಹಕ್ಕನ್ನು ನಿಮಗೆ ಯಾರು ಕೊಟ್ಟಿದಾರೆ? ಎಂದು ನಿಂದಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ನಾನು ಜೈಲಿನಲ್ಲಿದ್ದಾರೆ ಇತರ ಮಹಿಳಾ ಖೈದಿಗಳ ಸ್ಥಿತಿ ಇದಕ್ಕಿಂತ ಹೀನವಾಗಿದೆ. 200 ಕ್ಕೂ ಅಧಿಕ ಬಡ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಮಹಿಳೆಯರು, ಸಣ್ಣ ಆರೋದಡಿ ಬಂಧಿಸ್ಪಟ್ಟು, ಅವರನ್ನು ಹಿಂಸಿಸುತ್ತಿದ್ದಾರೆ.
ಫೆಬ್ರವರಿ 27 ರಂದು ದಾಖಲಾದ ಕ್ರಿಮಿನಲ್ ಪ್ರಕರಣಗಳಲ್ಲಿ ನನ್ನ ಜೊತೆ ಆರೋಪಿ ಆಗಿರುವ ಶಿವ ಕುಮಾರ್ ಅವರನ್ನು ಬಿಡುಗಡೆಗೊಳಿಸಬೇಕು. ಮತ್ತು ಅವರಿಗಾಗಿ ನಾವು ಧ್ವನಿ ಎತ್ತಬೇಕಿದೆ. ಆತನನ್ನು ಪೋಲಿಸರು ಥಳಿಸಿದ್ದಾರೆ. ಆತನು ನಿರಪರಾಧಿ ಆತನ ಬಿಡುಗಡೆಗಾಗಿ ನಾವು ಧ್ವನಿ ಎತ್ತಬೇಕೆಂದು ಜನರನ್ನು ಕೇಳುತ್ತೇನೆ ಎಂದರು.