ಬಿಬಿಎಂಪಿ ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಪ್ರಾರಂಭಕ್ಕೆ ಸಚಿವ ಸಂಪುಟ ಒಪ್ಪಿಗೆ

ಸರಕಾರದ ನಿರ್ಧಾರಕ್ಕೆ ಸಿಪಿಐಎಂ ವಿರೋಧ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪಾಲುದಾರಿಕೆಯಲ್ಲಿ ‘ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ’ (ಬಿಎಸ್‌ಡಬ್ಲ್ಯುಎಂಎಲ್‌) ಎಂಬ ಕಂಪನಿಯನ್ನು ಪ್ರಾರಂಭಿಸುವ ಪ್ರಸ್ತಾವಕ್ಕೆ ಬುಧವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ‘ಬಿಬಿಎಂಪಿಯನ್ನು ಕಸ ವಿಲೇವಾರಿ ಕೆಲಸದಿಂದ ಮುಕ್ತಗೊಳಿಸುವ ಉದ್ದೇಶದಿಂದ ನೂತನ ಕಂಪನಿಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಬಿಬಿಎಂಪಿಯ ಶೇ 51ರಷ್ಟು ಮತ್ತು ರಾಜ್ಯ ಸರ್ಕಾರದ ಶೇ 49ರಷ್ಟು ಪಾಲುದಾರಿಕೆಯೊಂದಿಗೆ ಕಂಪನಿ ಆರಂಭವಾಗಲಿದೆ’ ಎಂದರು. ಬಿಎಸ್‌ಡಬ್ಲ್ಯುಎಂಎಲ್‌ ಅಧ್ಯಕ್ಷರಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಹ ಅಧ್ಯಕ್ಷರಾಗಿ ಬಿಬಿಎಂಪಿ ಆಯುಕ್ತರು ಕಾರ್ಯನಿರ್ವಹಿಸುತ್ತಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಹುದ್ದೆಗೆ ಸಮನಾದ ಅರ್ಹತೆಯುಳ್ಳ ವ್ಯಕ್ತಿಯನ್ನು ಆಡಳಿತ ಮಂಡಳಿಯು ನೇಮಕ ಮಾಡುತ್ತದೆ. ಪಾಲಿಕೆಯಿಂದ ಇಬ್ಬರು, ರಾಜ್ಯ ಸರ್ಕಾರದಿಂದ ಮೂವರು ಪದನಿಮಿತ್ತ ನಿರ್ದೇಶಕರು ಇರಲಿದ್ದು, ಕಸ ನಿರ್ವಹಣೆಯಲ್ಲಿ ತಜ್ಞರಾಗಿರುವ ಇಬ್ಬರು ನಿರ್ದೇಶಕರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನಕ್ಕೆ 5000 ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತಿದೆ. ಸಂಪೂರ್ಣ ಕಸ ಸಂಗ್ರಹ, ಸಾಗಣೆ, ವಿಲೇವಾರಿ ಎಲ್ಲವನ್ನೂ ಕಂಪನಿಯೇ ನಿರ್ವಹಿಸುತ್ತದೆ. ರಾಜ್ಯ ಸರ್ಕಾರ ಒದಗಿಸುವ ಅನುದಾನ, ಬಳಕೆದಾರರ ಶುಲ್ಕ ಮತ್ತು ಬಿಬಿಎಂಪಿ ನಿಧಿಯಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತದೆ. ಕಸ ನಿರ್ವಹಣೆಯನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಕಂಪನಿ ಆರಂಭಿಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಿಬಿಎಂಪಿ ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಜನರ ದೋಚುವ ನಯವಂಚಕ ಕ್ರಮ : ಸಿಪಿಐ(ಎಂ)

ಬಿಜೆಪಿ ರಾಜ್ಯ ಸಕಾ೯ರವು ಬಿಬಿಎಂಪಿ ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸಲು ಕೈಗೊಂಡಿರುವ ತೀಮಾ೯ನವು ಮಹಾನಗರದ ಜನತೆಯನ್ನು ಕಸ ನಿರ್ವಹಣೆ ಬಳಕೆದಾರರ ಶುಲ್ಕದ ಹೆಸರಿನಲ್ಲಿ ದೋಚಲು ಮಾಡಿರುವ ನಯವಂಚಕ ಕ್ರಮವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಮಹಾನಗರ ಪಾಲಿಕೆಯ ಪ್ರಧಾನ ಹಾಗು ಮೂಲ ಕೆಲಸವೇ ಕಸ ನಿರ್ವಹಣೆ ಮುಂತಾದ ನಾಗರೀಕ ಸೌಲಭ್ಯಗಳನ್ನು ಒದಗಿಸುವುದಾಗಿದೆ. ಅಂತೆಯೇ ಈ ಎಲ್ಲಾ ಸ್ಥಳೀಯ ಆಡಳಿತದಲ್ಲಿ ನಾಗರೀಕರನ್ನು ಒಳಗೊಂಡು ಮಹಾನಗರದ ನಿವ೯ಹಣೆಯನ್ನು ಪ್ರಜಾಪ್ರಭುತ್ವೀಯ ರೀತಿಯಲ್ಲಿ ನಿವ೯ಹಿಸುವುದಾಗಿದೆ. ಆದರೆ ರಾಜ್ಯ ಬಿಜೆಪಿ ಸಕಾ೯ರವು ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಿ ಅದರಲ್ಲಿ ಮತ್ತು ಇತ್ತೀಚೆಗೆ ಬಿಡುಗಡೆ ಮಾಡಿರುವ ಬೆಂಗಳೂರು ಮಿಷನ್ 2022 ರಲ್ಲಿ ಸ್ವಚ್ಛ ಬೆಂಗಳೂರು ಉಪಕ್ರಮದಲ್ಲಿ ಕಸ ನಿರ್ವಹಣೆಗೆ ಪ್ರತ್ಯೇಕ ಸಾಂಸ್ಥಿಕ ರೂಪ ನೀಡುವ ಪ್ರಸ್ತಾಪದಂತೆ ಸದರಿ ಕಂಪನಿಯ ಸ್ಥಾಪನೆಗೆ ಸಕಾ೯ರ ಮುಂದಾಗಿದೆ. ಕಸ ನಿರ್ವಹಣೆ ಬಳಕೆದಾರರ ಶುಲ್ಕದ ಪ್ರಸ್ತಾಪ ಕೂಡ ಈ ಹಿನ್ನೆಲೆಯಲ್ಲೆ ತರಲಾಗಿತ್ತುಆ ಪ್ರಸ್ತಾಪಗಳು ಬಂದಾಗಲೆ ಸಿಪಿಐ(ಎಂ) ಮತ್ತಿತರರು ಅದನ್ನು ವಿರೋಧಿಸಿ ಪ್ರತಿಭಟಿಸಿದ್ದೆವು. ಆದ ಕಾರಣ ಕಸ ನಿರ್ವಹಣೆ ಬಳಕೆದಾರರ ಶುಲ್ಕದ ಪ್ರಸ್ತಾವನೆ ಮುಂದೂಡಲಾಗಿತ್ತು. ಇದೀಗ ಪ್ರತ್ಯೇಕ ಕಂಪನಿ ಸ್ಥಾಪನೆ ಹೆಸರಲ್ಲಿ ಆ ಅಂಶಗಳನ್ನು ಪರೋಕ್ಷವಾಗಿ ಜಾರಿಗೆ ತರಲಾಗುತ್ತಿದೆ ಎಂದು ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.‌ ಉಮೇಶ್‌ ಆರೋಪಿಸಿದ್ದಾರೆ.

ವಾಷಿ೯ಕ ರೂ.940 ಕೋಟಿ ರೂಪಾಯಿ ವ್ಯವಹಾರದ ಬಿಬಿಎಂಪಿ ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸುವ ಮೂಲಕ ಆರಂಭದಲ್ಲಿ ಸಕಾ೯ರದ ಕಂಪನಿ ಎಂದು ಬಿಂಬಿಸಿ ನಿಧಾನಕ್ಕೆ ಅದನ್ನು ಖಾಸಗಿ ಕಾಪೋ೯ರೇಟ್ ಗಳಿಗೆ ವಹಿಸಿ ಜನರ ಸುಲಿಗೆಗೆ ಅನುವುಗೊಳಿಸುವ ಹುನ್ನಾರ ರಾಜ್ಯ ಸಕಾ೯ರದಾಗಿದೆ. ಗುತ್ತಿಗೆ ಕಾಮಿ೯ಕರು ಇರುವುದಿಲ್ಲ ಎಂಬ ಅಂಶವು ಹಾಲಿ 25 ಸಾವಿರ ಬಿಬಿಎಂಪಿ ಗುತ್ತಿಗೆ ಮುನ್ಸಿಪಲ್ ಕಾಮಿ೯ಕರ ಬದುಕನ್ನು ಕಸಿಯಲಿದೆ ಎಂದು ಸಿಪಿಐ(ಎಂ) ಪ್ರತ್ಯೇಕ ಕಂಪನಿ ಸ್ಥಾಪನೆಯನ್ನು ವಿರೋಧಿಸಿದೆ.

Donate Janashakthi Media

Leave a Reply

Your email address will not be published. Required fields are marked *