ಪೂರ್ವ ಸೂಚನೆಯಿಲ್ಲದೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದಿಲ್ಲ: ಚುನಾವಣಾ ಆಯೋಗ

ಚುನಾವಣಾ ಆಯೋಗ

ನವದೆಹಲಿ: ಪೂರ್ವ ಸೂಚನೆ ಇಲ್ಲದೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ದೃಢಪಡಿಸಿದೆ. ಮತದಾರರ ನೋಂದಣಿ ನಿಯಮಗಳ (1960) ನಿಯಮ ಸಂಖ್ಯೆ 18, ಯಾವುದೇ ವಿಚಾರಣೆಗೆ ಅವಕಾಶವಿಲ್ಲದೆ ಹೆಸರುಗಳನ್ನು ಅಳಿಸಲು ಅನುಮತಿ ನೀಡಿತ್ತು. ಈ ನಿಯಮದ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಯನ್ನು ಮಾಜಿ ಮಾಜಿ ಅಧಿಕಾರಿಗಳಾದ ಎಂ.ಜಿ. ದೇವಸಹಾಯಂ, ಸೋಮಸುಂದರ್ ಬುರ್ರಾ ಮತ್ತು ಅದಿತಿ ಮೆಹ್ತಾ ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮತದಾರರ ನೋಂದಣಿ ನಿಯಮಗಳು-1960 ರ ನಿಯಮ 18 ಯಾವುದೆ ಅಧಿಸೂಚನೆಯಿಲ್ಲದೆ ಅಥವಾ ಮತದಾರರ ವಾದವನ್ನು ಕೇಳಿಸಿಕೊಳ್ಳದೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ನೋಂದಣಿ ಅಧಿಕಾರಿ (ERO) ಗೆ ಅವಕಾಶ ನೀಡಿದೆ ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದರು.

ಇದನ್ನೂ ಓದಿ: ಕೆರೆಯ ಮಣ್ಣನ್ನು ನುಂಗಿದ “ಸರ್ಕಾರಿ ನೌಕರರ ಸಂಘದ ಅಧ್ಯಕ್ಷ”! 71 ಲಕ್ಷರೂ ವಂಚನೆ!!

ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ನಿಯಮ 18 ERO ಯಾವುದೆ ವಿಚಾರಣೆಯಿಲ್ಲದೆ ಆಕ್ಷೇಪಣೆಗಳನ್ನು ಸ್ವೀಕರಿಸಬಹುದು ಮತ್ತು ನಿರಾಕರಿಸಬಹುದು. ಅದು ತಪ್ಪು ಎಂದಾರೆ ಲಿಖಿತವಾಗಿ ಬರೆದು ವಿಚಾರಣೆಗೆ ವಿನಂತಿಸಬಹುದು. ಈ ವಿನಂತಿಯ ಮೇರೆಗೆ ಈ ಸಮಸ್ಯೆಯನ್ನು ಇಆರ್‌ಒ ನಿರ್ವಹಿಸಬೇಕು ಎಂದು ಹೇಳಿದೆ.

ನಕಲಿ ಅಥವಾ ಅನರ್ಹ ಮತದಾರರನ್ನು ತಡೆಯಲು ಹಾಗೂ ಪಾರದರ್ಶಕತೆಗಾಗಿ ಈ ನಿಯಮವನ್ನು ಮಾಡಲಾಗಿದೆ ಎಂದು ಚುನವಣಾ ಆಯೋಗ ಒತ್ತಿಹೇಳಿದೆ. ಅಂತಹ ಸನ್ನಿವೇಶದಲ್ಲಿ, ಆಯೋಗವು ಎಲ್ಲಾ ಆಕ್ಷೇಪಣೆಗಳಿಗೆ ಸಾರ್ವಜನಿಕ ಸೂಚನೆಗಳನ್ನು ನೀಡುತ್ತದೆ, ಹೀಗಾಗಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಹೇಳಿದೆ.

ಚುನಾವಣಾ ಆಯೋಗವು ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್.ವಿ.ಎನ್. ಭಟ್ಟಿ ಅವರ ಪೀಠಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ, ಮತದಾರರಿಗೆ ಮುಂಚಿತವಾಗಿ ನೋಟಿಸ್ ನೀಡದೆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ ಎಂದು ದೃಢವಾಗಿ ಹೇಳಿದೆ. ಇಲಾಖೆಯ ಪ್ರತಿಕ್ರಿಯೆಗಳಿಂದ ತೃಪ್ತರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದಾರೆ.

ವಿಡಿಯೊ ನೋಡಿ: ಸೌಜನ್ಯ ಕೊಲೆ ಪ್ರಕರಣ : ಧರ್ಮಾಧಿಕಾರಿಗಳೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಿರಾ? ಪತ್ರಕರ್ತ ಅಗ್ನಿ ಶ್ರೀಧರ ಪ್ರಶ್ನೆ

Donate Janashakthi Media

Leave a Reply

Your email address will not be published. Required fields are marked *