ಮ್ಯಾನ್ಮಾರ್‌ ನಲ್ಲಿ ಸೇನೆಯಿಂದ ವಾಯುಧಾಳಿ : ಥಾಯ್ಲೆಂಡ್‌ ನತ್ತ ಸಾವಿರಾರು ಜನ ವಲಸೆ

ಮ್ಯಾನ್ಮಾರ್‌ : ಆಗ್ನೇಯ ಪ್ರದೇಶದಲ್ಲಿ ಸಶಸ್ತ್ರ ಜನಾಂಗೀಯ ಗುಂಪೊಂದು ಕರೆನ್ ನ್ಯಾಷನಲ್ ಯೂನಿಯನ್ (ಕೆಎನ್‌ಯು) ನೊಂದಿಗೆ ವಶದಲ್ಲಿರುವ ಪ್ರದೇಶಗಳಾದ ಪಪುನ್ ಜಿಲ್ಲೆಯ ಡೇ ಪು ನೊ ಮೇಲೆ ಜೆಟ್‌ ವಿಮಾನಗಳ ಮೂಲಕ ವಾಯುದಾಳಿ ನಡೆದಿದೆ. ಇದರಿಂದ ಮಹಿಳೆಯರು ಮಕ್ಕಳು ಸೇರಿದಂತೆ ಹತ್ತಾರು ಜನರ ಹತ್ಯೆಯಾಗಿದೆ.

ಈ ಪ್ರದೇಶದಲ್ಲಿ ಮಿಲಿಟರಿ ತುಕಡಿಯ ಐದು ಪಡೆಗಳ ವಶದಲ್ಲಿದ್ದು, ನೆನ್ನೆ ರಾತ್ರಿ 8 ಗಂಟೆ ಸುಮಾರಿಗೆ ಗ್ರಾಮಸ್ಥರು ಪಲಾಯನ ಮಾಡುವಂತೆ ಸೇನೆ ಬಲವಂತದಿಂದ ಒತ್ತಾಯಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನು ಓದಿ : ಅಮೆರಿಕ ಹಿತಾಸಕ್ತಿಗಳ ರಕ್ಷಣೆ, ಭಾರತದ ಸಾರ್ವಭೌಮತ್ವದ ಬಲಿ

ಕಳೆದ ತಿಂಗಳಿನಿಂದ ಮುಂದುವರೆದಿರಿವ ಮಿಲಿಟರಿ ದಂಗೆಯು ಅಂತರ್ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ ಮ್ಯಾನ್ಮಾರ್‌ ಸೇನೆ ಥಾಯ್‌ ಗಡಿ ಸಮೀಪದ ಹಳ್ಳಿಯೊಂದರಲ್ಲಿ ಶನಿವಾರ ವಾಯುದಾಳಿ ನಡೆಸಿದ್ದವು.

ಅವರು ಆ ಪ್ರದೇಶದ ಮೇಲೆ ಬಾಂಬ್‌ ದಾಳಿ ನಡೆಸಿದರು ಮತ್ತು ಇಬ್ಬರು ಸತ್ತಿದ್ದು, ಮತ್ತಿಬ್ಬರಿಗೆ ಗಾಯವಾಗಿದೆ ಎಂಬ ವಿಚಾರ ಆ ಪ್ರದೇಶದ ಗ್ರಾಮಸ್ಥರಿಂದ ತಿಳಿದುಬಂದಿದೆ ಎಂದು ನಾಗರಿಕ ಸಮಾಜದ ಗುಂಪಿನ ಕರೆನ್‌ ಶಾಂತಿ ಪಾಲನೆ ಬೆಂಬಲಿತ ತಂಡದ ವಕ್ತಾರರು ಹೇಳಿದ್ದಾರೆ. ದೂರದ ಪ್ರದೇಶಗಳಿಗೆ ಸಂವಹನ ಕಷ್ಟಕರವಾಗಿದ್ದು, ಹೆಚ್ಚಿನ ಸಾವುನೋವುಗಳು ಸಂಭವಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

2015ರಲ್ಲಿ ಕೆಎನ್‌ಯು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಫೆಬ್ರವರಿ 1 ರಿಂದ ಸೇನೆಯು ಆಂಗ್‌ ಸಾನ್‌ ಸೂಕಿ ನೇತೃತ್ವದ ಸರಕಾರವನ್ನು ಉರುಳಿಸಿದ ನಂತರ ಮತ್ತೆ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ನಡೆದ ವಾಯುದಾಳಿಯು ಅತ್ಯಂತ ಭೀಕರವಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ಸಿಪಿಐ(ಎಂ) ಪಕ್ಷ ಮಸುಕಾಗದೆ ಉಳಿದಿದೆ – ಜನರಲ್ಲಿ ಭರವಸೆ ಮೂಡಿದೆ : ಮೀನಾಕ್ಷಿ ಮುಖರ್ಜಿ

ಜುಂಟಾ ತನ್ನ ಸಶಸ್ತ್ರ ಪಡೆಗಳ ದಿನದಂದು ರಾಜಧಾನಿ ನಾಯ್‌ಪಿಟಾವ್‌ನಲ್ಲಿ ಮೆರವಣಿಗೆ ನಡೆಸಿದ್ದರು. ಇದೇ ಸಂದರ್ಭದಲ್ಲಿ 5 ಪಡೆಗಳ ಸೇನೆಯ ತುಕಡಿಗಳು ನೆಲೆಗಳನ್ನು ಆಕ್ರಮಿಸಿವೆ. ಭೀಕರ ದಾಳಿಯಲ್ಲಿ ನೂರಕ್ಕೂ ಹೆಚ್ಚಿನ ಜನತೆ ಸಾವನ್ನಪ್ಪಿದ್ದಾರೆ.

ಹೆಚ್ಚುತ್ತಿರುವ ಹಿಂಸಾಚಾರದ ನಡುವೆಯೇ ಮಧ್ಯ ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ನೂರಾರು ಜನರು ಥಾಯ್ಲೆಂಡ್‌ ಸಮೀಪದ ಹಳ್ಳಿಯಲ್ಲಿ ಆಶ್ರಯ ಪಡೆದಿರುವ ಗಡಿ ಪ್ರದೇಶವಾಗಿತ್ತು. ದಂಗೆಯ ನಂತರದ ರಕ್ತಸಿಕ್ತ ಪ್ರತಿಭಟನೆಯೊಂದರಲ್ಲಿ ಜುಂಟಾದ ಪಡೆಗಳು ಶನಿವಾರ ಮಕ್ಕಳನ್ನು ಒಳಗೊಂಡಂತೆ ಹತ್ತಾರು ಜನರನ್ನು ಕೊಂದವು ಎಂಬ ಸುದ್ದಿ ವರದಿಗಳು ಮತ್ತು ಸಾಕ್ಷ್ಯಗಳಿಂದ ತಿಳಿದುಬಂದಿದೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆ ವಿರುದ್ಧ ಜನತೆಯ ಪ್ರತಿಭಟನೆಯನ್ನು ದಮನ ಮಾಡಲು ಸೇನೆಯು ವೈಮಾನಿಕ ದಾಳಿ ನಡೆಸಿದೆ. ಇದರಿಂದ ಕರೆನ್‌ ಜನಾಂಗದವರು ಥಾಯ್ಲೆಂಡ್‌ನತ್ತ ಪಲಾಯನ ಮಾಡುವ ಸ್ಥಿತಿ ಉದ್ಭವಿಸಿದ್ದು, ಇದನ್ನು ನಿಯಂತ್ರಿಸಲು ಥಾಯ್ಲೆಂಡ್‌ ಅಧಿಕಾರಿಗಳು ಸಹ ವಾಯವ್ಯ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *