ಯಾದಗಿರಿ| ಮಾದಿಗ ಸಮುದಾಯದ ಹಿರಿಯರ ಮೇಲೆ ಬೆಂಕಿ ಹಚ್ಚಿದ ಯುವಕ

ಯಾದಗಿರಿ: ಮಾದಿಗ ಸಮಾಜದ ಹಿರಿಯರಾದ ನರಸಪ್ಪ ಎನ್ನುವವರ ಮೇಲೆ ಅದೇ ಗ್ರಾಮದ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಗುರುಮಠಕಲ್ ತಾಲೂಕಿನ ಫುಟಪಾಕ್ ಗ್ರಾಮದಲ್ಲಿ ನಡೆದಿದೆ. ಯಾದಗಿರಿ

ಈ ದಾಳಿಯ ಪರಿಣಾಮವಾಗಿ ನರಸಪ್ಪ ರಿಗೆ ಗಂಭೀರ ಗಾಯಗಳಾಗಿದ್ದು, ಅವರು ಜೀವಮರಣದ ಹೋರಾಟ ನಡೆಸುತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ನಾರಾಯಣಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಕಟ್ಟಡ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಏ. 2 ರಂದು ಉದ್ಘಾಟನೆ”

ಘಟನೆ ಕುರಿತು ಮಾಹಿತಿ ಪಡೆದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಅವರು ಸ್ಥಳಕ್ಕೆ ಭೇಟಿ ನೀಡಿ, ನರಸಪ್ಪ ಅವರ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅವರೋಂದಿಗೆ ಮಾತನಾಡಿದ ವಾಸು, ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದರು.

ಈ ಘಟನೆಯು ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದು, ಸ್ಥಳೀಯರು ಆರೋಪಿಯ ಬಂಧನ ಹಾಗೂ ಈ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

ಇದನ್ನೂ ನೋಡಿ: ನಾಟಿ ಹಸು, ಮಿಶ್ರತಳಿ ಹಸು, ಎಮ್ಮೆ ಮತ್ತು ವೈಜ್ಞಾನಿಕ ಸತ್ಯಗಳು – ಡಾ: ಎನ್.ಬಿ.ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *