ಕಲಬುರಗಿ: ಮೋದಿ ದೇಶದ ಪ್ರಧಾನಿಯಾಗಿ ಸುಳ್ಳುಗಳನ್ನು ಮಾರುಕಟ್ಟೆ ಮಾಡುತ್ತಿದ್ದಾರೆ. ಸುಳ್ಳುಗಳ ಪ್ರಚಾರ ಮಾಡುತ್ತಿದ್ದಾರೆ. ಮತಗಳಿಗೋಸ್ಕರ ಮತಗಳ ಧೃವೀಕರಣ ಮಾಡಿರುವುದು ಕೀಳುಮಟ್ಟದ ರಾಜಕಾರಣ ಎಂದು ಸಿಎಂ ಸಿದ್ದರಾಮುಯ್ಯ ಒತ್ತಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಖಾಸಗಿ ಹೊಟೇಲ್‌ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದುಳಿದವರಿಗೆ ಕೊಟ್ಟಿರುವ ಮೀಸಲಾತಿಯನ್ನು ಕೊಟ್ಟು ಮುಸಲ್ಮಾನರಿಗೆ ಕೊಡುತ್ತಾರೆ ಎಂಬುದು ಅಪ್ಪಟ ಸುಳ್ಳು. ಮತಗಳ ಧೃವೀಕರಣಕ್ಕೆ ದೇಶದ ಪ್ರಧಾನಿಯಾಗಿದ್ದಂತವರು ಸುಳ್ಳು ಹೇಳಿಕೆ ನೀಡುವುದು ಪ್ರಧಾನಿ ಮಂತ್ರಿ ಖುರ್ಚಿಗೆ ಭೂಷಣವಲ್ಲ. ಸಂವಿಧಾನಬದ್ಧವಾಗಿ ನಡೆದುಕೊಳ್ಳುವುದು ಮತ್ತು ಅದಕ್ಕೆ ಬದ್ಧರಾಗಿ ನಡೆಯುವುದು, ಎಲ್ಲಾ ಭಾರತೀಯರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡುವುದು ಈ ದೇಶದ ಪ್ರಧಾನಿಯ ಹಕ್ಕು. ತಮ್ಮ ಈ ಮಾತುಗಳೆಲ್ಲವೂ ವಾಸ್ತವ ಎಂದರು.
ಮೊದಲಿನಿಂದಲೂ ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಮಂಡಲ್ ಕಮಿಷನ್ ವರದಿ ವಿರೋಧಿಸಿ,ಅರ್ಜುನ್ ಸಿಂಗ್ ಅವರು, ಮಾನವ ಅಭಿವೃದ್ಧಿ ಸಚಿವರಾಗಿದ್ದರು. ಅರ್ಜುನ್ ಸಿಂಗ್ ಉನ್ನತ ಕೋರ್ಸುಗಳಲ್ಲಿ ಮೀಸಲಾತಿಯನ್ನು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಜಾರಿ ಮಾಡಿದರು. ನಂತರ ರಾಜೀವ್ ಗಾಂಧಿ ಪ್ರಧಾನಿಯಾದಾಗ ಸಂವಿಧಾನ 73-74 ಅಮೆಂಡೆಂಟ್‌ಗಳನ್ನು ಮಾಡಿದರು.ಸಂವಿಧಾನದ 73ಅಮೆಂಡ್ಮೆಂಟ್ ಮೂಲಕ ಜಿ.ಪಂ. ತಾ.ಪಂಗಳಲ್ಲಿ ಹಿಂದುಳಿದ ಮಹಿಳಾ ಮೀಸಲಾತಿ ತಂದರು.
ಇವು ರಾಜೀವ್ ಗಾಂಧಿ ಕಾಲದಲ್ಲಿ ಜಾರಿಯಾಗದೇ ನರಸಿಂಹರಾವ್ ಕಾಲದಲ್ಲಿ ಜಾರಿಯಾದವು. ಕರ್ನಾಟಕದಲ್ಲಿ ಹಿಂದುಳಿದ ವರ್ಗ ಎ ಮತ್ತು ಬಿ ಪ್ರವರ್ಗ ಮಾಡಲಾಯಿತು. ಮಹಿಳೆಯರಿಗೆ 33% ಮೀಸಲಾತಿ. 26.4% ಬಿಸಿಎಂ ಎ, ಮಾಡಿ ಅದರಲ್ಲಿ ಮುಸಲ್ಮಾನ್‌ರನ್ನು ಸಹ ಸೇರಿಸಲಾಯಿತು. 1994-95 ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ ಜಾರಿಯಾಗಿತ್ತು. ಅಂದಿನಿಂದ ಇಂದಿನವರೆಗೆ ಮುಸ್ಲಿಂರನ್ನು ಬಿಸಿಎಂ ಎ-ನಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕ | ಮೊದಲ ಹಂತದ ಮತದಾನ ಮುಕ್ತಾಯ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ
ಓಬಿಸಿ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನ್ ಸಮುದಾಯದವರಿಗೆ ನೀಡುತ್ತಾರೆಂಬ ಪ್ರಧಾನಿ ಮೋದಿ ಹೇಳಿಕೆ ಅಪ್ಪಟ ಸುಳ್ಳಾಗಿದ್ದು, ಮುಸ್ಲಿಂರಿಗೆ ಈ ಹಿಂದಿನಿಂದಲೂ ನೀಡುತ್ತಿರುವ 4% ಮುಂದುವರೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಆರ್ಥಿಕವಾಗಿ ಹಿಂದುಳಿದವರೆಂಬುದು ಸಂವಿಧಾನದಲ್ಲಿ ಇಲ್ಲ. ಆದರೂ ಸಂವಿಧಾನವನ್ನು ಬಿಜೆಪಿಯವರು ತಿದ್ದುಪಡಿ ಮಾಡಿ ಮೀಸಲಾತಿ ನೀಡಿದ್ದಾರೆ. ಸುಪ್ರಿಂಕೋರ್ಟಿನ ಸಂವಿಧಾನ ಪೀಠ 1992 ರಲ್ಲಿ ಮಂಡಲ್ ಆಯೋಗದ ವರದಿಯ ಶಿಫಾರಸ್ಸುಗಳನ್ನು ಒಪ್ಪಿ, ಮೀಸಲಾತಿಯೆಷ್ಟಿರಬೇಕೆಂದು ಹೇಳಿದೆ. ಮೀಸಲಾತಿ 50% ಗಿಂತ ಹೆಚ್ಚಿರಬಾರದು ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದಲ್ಲಿ ಹೀಗೆ ಹೇಳಿದ್ದರೂ ಕೇಂದ್ರದ ಬಿಜೆಪಿ ಸಂವಿಧಾನವನ್ನೇ ಬದಲಾಯಿಸಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರಬೇಕೆಂದು ಹೇಳಲಾಗಿದ್ದು, ಮಂಡಲ್ ಕಮಿಷನ್ ವರದಿ ಜಾರಿಯಾದಾಗ ಮೀಸಲಾತಿಯನ್ನು ಬಿಜೆಪಿ ವಿರೋಧಿಸಿತ್ತು. ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳನ್ನು ಮಂಡಲ್ ಕಮಿಷನ್ ವರದಿಯ ವಿರುದ್ಧ ಎತ್ತಿಕಟ್ಟಿ ಆತ್ಮಹತ್ಯೆಗೂ ಬಿಜೆಪಿ ಪ್ರೇರೇಪಿಸಿದೆ.
ಅದಕ್ಕೋಸ್ಕರವೇ ರಥಯಾತೆಯನ್ನು ಮಾಡಿತ್ತು. ಸುಪ್ರೀಂಕೋರ್ಟಿನಲ್ಲಿ ಚರ್ಚೆಯಾಗಿ, ಅಂದು ಮಾಡಿದ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಇದೆಲ್ಲ ಗೊತ್ತಿದ್ದರೂ ಕೂಡ ಮತಗಳಿಗಾಗಿ ಹತಾಶರಾಗಿ ಮೋದಿಯವರು ಇಂತಹ ಹೇಳಿಕೆ ನೀಡಿದ್ದಾರೆ.ಮೋದಿಯ ಧೋರಣೆ ಖಂಡನೀಯ.
ಕೆಪಿಸಿಸಿ ಅಧ್ಯಕ್ಷರಿಗೆ ಸುಳ್ಳು ಜಾಹೀರಾತು ನೀಡಿರುವ ಬಗ್ಗೆ ಎಲೆಕ್ಷನ್ ಕಮೀಷನ್‌ಗೆ ದೂರು ನೀಡಬೇಕೆಂದು ಹೇಳಿದ್ದೇನೆ. ಜನರಿಗೆ ತಪ್ಪು ಮಾಹಿತಿ ನೀಡುವುದು ಅಕ್ಷಮ್ಯ ಅಪರಾಧವೆಂದು ಸಿಎಂ ಬಿಜೆಪಿಯನ್ನು ತೀವ್ರವಾಗಿ ಖಂಡಿಸಿದರು.
ಇದನ್ನೂ ನೋಡಿ: “ಶೃತಿ ಮೆಡಂ ಶಕ್ತಿ ಯೋಜನೆ ನಮಗೆ ಬಲ ತಂದಿದೆ” ಬಾಯಿ ಇದೆ ಅಂತ ಹೆಂಗೆಂಗೊ ಮಾತಾಡಿದ್ರೆ ಹೇಗೆ ಮೆಡಂ” – ಮಹಿಳೆಯರ ಆಕ್ರೋಶ