ಮೋದಿಯವರ ಬ್ರಿಗೇಡ್‍ “ಜೋಷ್‍” ಹರಡಿಸಲು ಎಡರಂಗದ ರ‍್ಯಾಲಿಗೇ ಶರಣು!

ಮೇಲಿನದ್ದು ವಿಧಾನಸಭಾ ಚುನಾವಣೆಯ ಪ್ರಕಟಣೆಯ ನಂತರ ಪ್ರಧಾನಮಂತ್ರಿಯವರು ಕೊಲ್ಕತಾದ ಬ್ರಿಗೇಡ್‍ ಮೈದಾನದಲ್ಲಿ ಮಾಡಿದ ಮೊದಲ ಪ್ರಚಾರ ಭಾಷಣದ ಎ.ಎನ್‍.ಐ. ಫೋಟೋಗಳು. ಆದರೆ ಅವರ ಪಕ್ಷದ ಹಲವು ಮುಖಂಡರ, ಬೆಂಬಲಿಗರ, ಭಕ್ತರ ಸಾಮಾಜಿಕ ಮಾಧ್ಯಮಗಳ ಪ್ರಚಾರದಲ್ಲಿ ಇದ್ದದ್ದು ಈ ಕೆಳಗಿನ ಫೋಟೋ.

 

 

#ಮೋದೀರ್‍ ಸಾಥೇ ಬ್ರಿಗೇಡ್‍ ಹ್ಯಾಷ್‍ ಟ್ಯಾಗ್‍ನಲ್ಲಿ “ಹೌಸ್ ದಿ ಜೋಷ್!!!’ (ಹೇಗಿದೆ ಉತ್ಸಾಹ) ನೊಂದಿಗೆ ಹಾಕಿರುವ ಚಿತ್ರವನ್ನೇ ಬಿಜೆಪಿ ತಮಿಳುನಾಡು, ಬಿಜೆಪಿ ಪಂಜಾಬ್, ಪರಮ ಪ್ರಚಾರಕರಾದ ತೇಜಿಂದರ್‍ ಬಗ್ಗ, ಎಸ್‍.ಜಿ.ಸೂರ್ಯ, ಭಾನು ಜಾಲಾನ್, ಮುಂತಾದವರು, ಅಷ್ಟೇ ಏಕೆ, ನಯವಂತಿಕೆಯ ಪತ್ರಕರ್ತ-ಚಿಂತಕ ಬೆಂಬಲಿಗ ಸ್ವಪನ್‍ ದಾಸ್‍ ಗುಪ್ತ ಕೂಡ ಹಾಕಿಕೊಂಡಿದ್ದಾರೆ.

 

ಇದು 2019ರ ಫೆಬ್ರುವರಿ 3ರಂದು ಅದೇ ಮೈದಾನದಲ್ಲಿ ನಡೆದ ಎಡರಂಗದ ಬೃಹತ್‍ ಬ್ರಿಗೇಡ್‍ ರ‍್ಯಾಲಿಯ ಫೋಟೋ ಎಂದು ಆಲ್ಟ್ ನ್ಯೂಸ್‍ ಖಚಿತಪಡಿಸಿದೆ.

 

 

ಏಕೆ ಈ ಫೇಕಾಟ? ಈ ಕೆಳಗಿನ ಫೋಟೋದಲ್ಲಿ ಉತ್ತರ ಸಿಗುತ್ತದೆ. ಇದು ಮಾರ್ಚ್‍ 8ರಂದು ಸ್ಕ್ರಾಲ್‍.ಇನ್ ನಲ್ಲಿ ಪ್ರಕಟವಾಗಿರುವ ಸೋಐಬ್ ದಾನಿಯಲ್‍ ರವರ ಲೇಖನದ ಜತೆಗಿರುವ ಮಾರ್ಚ್ 7ರ ಮೋದಿ ಬ್ರಿಗೇಡ್‍ ರ‍್ಯಾಲಿಯ ಇನ್ನೊಂದು ಚಿತ್ರ.

ಪಶ್ಚಿಮ ಬಂಗಾಲದಲ್ಲಿ  ಬಿಜೆಪಿಗೆ ಇರುವ ದೊಡ್ಡ ಸವಾಲಿನ ಹಿನ್ನೆಲೆಯಲ್ಲಿ ಮಾರ್ಚ್ 7ರ ಮೋದಿ ರ‍್ಯಾಲಿಯಲ್ಲಿ ಭಾರೀ ಪ್ರಚಾರದ ನಂತರವೂ ಬ್ರಿಗೇಡ್‍ ಮೈದಾನ ಅರ್ಧದಷ್ಟೂ ತುಂಬಿರಲಿಲ್ಲ. ರ‍್ಯಾಲಿಯಲ್ಲಿ ಭಾಗವಹಿಸಿದವರ ಸಂಖ್ಯೆ ಎಷ್ಟು ಕಡಿಮೆಯಿತ್ತೆಂದರೆ ಬಿಜೆಪಿ ಮೋದಿಯವರ ಸಭೆಗಳಿಗೆ ಸಂಬಂಧಪಟ್ಟಂತೆ ತಪ್ಪದೇ ತೋರಿಸುವ ಡ್ರೋನ್‍ ಪೂಟೇಜ್‍ ಗಳನ್ನು ತೋರಿಸಲಿಲ್ಲ, ವೇದಿಕೆಯ ಮತ್ತು ಜನರುಗಳ ಲೋ-ಆಂಗಲ್‍ ಶಾಟ್‍ ಗಳನ್ನಷ್ಟೆ ತೋರಿಸಿತು. ಅಂತಿಮವಾಗಿ, ಒಂದು ಮುಖವುಳಿಸಿಕೊಳ್ಳುವ ಕ್ರಮವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಮಂದಿ 2019ರ ಎಡರಂಗದ ನಿಜವಾಗಿಯೂ ಬೃಹತ್ತಾಗಿದ್ದ ರ‍್ಯಾಲಿಯ ಫೋಟೋಗಳನ್ನು ಹಾಕಿಕೊಂಡರು ಎನ್ನುತ್ತಾರೆ ಈ ಲೇಖಕರು.

ಆದರೆ ಬಿಜೆಪಿ ಇದರಿಂದೇನೂ ಎದೆಗುಂದುವುದಿಲ್ಲ. ಹಾಗೆ ನೋಡಿದರೆ 2019ರ ಮೋದಿ ಬ್ರಿಗೇಡ್‍ ರ‍್ಯಾಲಿಯೂ ಹೀಗೆಯೇ ಇತ್ತು. ಆದರೆ ಲೋಕಸಭಾ ಮತದಾನದಲ್ಲಿ ಅದರ ಮತಪಾಲು ಎಡರಂಗಕ್ಕಿಂತ ಎಷ್ಟೋ ಹೆಚ್ಚಿತ್ತು, ಏಕೆಂದರೆ ಪಶ್ಚಿಮ ಬಂಗಾಲದಲ್ಲಿಯೂ ರಾಜಕೀಯ ಪ್ರಚಾರ ಬೀದಿಗಳಿಂದ ಸಾಮಾಜಿಕ ಮಾಧ್ಯಮಗಳತ್ತ ತಿರುಗಿದೆ ಮತ್ತು ಎಲ್ಲರಿಗೂ ತಿಳಿದಿರುವಂತೆ ಬಿಜೆಪಿ ಇದರಲ್ಲಿ ಇತರೆಲ್ಲ ಪಕ್ಷಗಳಿಗಿಂತ ಬಹಳ ಮುಂದಿದೆ ಎನ್ನುತ್ತಾರೆ ಈ ಲೇಖಕರು. ತಮ್ಮ ಪಕ್ಷ ಯಾವುದೇ ಸುದ್ದಿಯನ್ನು, ಅದು ನಿಜವಿರಲಿ, ಸುಳ್ಳಿರಲಿ, ಕ್ಷಣಾರ್ಧದಲ್ಲಿ ವೈರಲ್‍ ಮಾಡಬಲ್ಲದು ಎಂದವರು ಈಗ ದೇಶದ ಗೃಹಮಂತ್ರಿಗಳು ಎಂಬುದನ್ನೂ ಅವರು ನೆನಪಿಸುತ್ತಾರೆ.

ಆದರೆ ವಿಪರೀತ ಬಳಕೆಯಾಗಿರುವ ಈ ತಂತ್ರ ಹಿಂದಿನಷ್ಟೇ ಪರಿಣಾಮಕಾರಿಯಾಗಿ ಉಳಿದಿದೆಯೇ, ಈಗ ಸವಕಲಾಗಿಲ್ಲವೇ? ಅದೂ ದಿಲ್ಲಿ ಗಡಿಗಳಲ್ಲಿ 100 ದಿನಗಳ ನಂತರವೂ ಗಟ್ಟಿಯಾಗಿ ಕೂತಿರುವ ರೈತರನ್ನು ಎಬ್ಬಿಸಲು ಇದೇ ಗೃಹಮಂತ್ರಿಗೆ ಇನ್ನೂ ಸಾಧ್ಯವಾಗದಿರುವಂತಹ ಸನ್ನಿವೇಶ ನಿರ್ಮಾಣವಾಗಿರುವಾಗ? ಇದೀಗ ಹಲವರು ಕೇಳುತ್ತಿರುವ ಪ್ರಶ್ನೆ. ಉತ್ತರಕ್ಕೆ ಇನ್ನೆರಡು ತಿಂಗಳು ಕಾಯಬೇಕು.

Donate Janashakthi Media

One thought on “ಮೋದಿಯವರ ಬ್ರಿಗೇಡ್‍ “ಜೋಷ್‍” ಹರಡಿಸಲು ಎಡರಂಗದ ರ‍್ಯಾಲಿಗೇ ಶರಣು!

Leave a Reply

Your email address will not be published. Required fields are marked *