ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ಎರಡು ಬೇರೆ ಬೇರೆ ಲಿಂಕ್‌ಗಳು ಇರುವ ಸಂದೇಶವೊಂದು ವೈರಲ್ ಆಗಿದೆ. ರೀಚಾರ್ಜ್ ಸಿಗುತ್ತದೆ ಎಂಬ ಆಸೆಗೆ ಹಲವರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.
ವಾಟ್ಸಪ್‌ನಲ್ಲಿ ವೈರಲ್ ಆಗಿರುವ ಈ ಎರಡು ಲಿಂಕ್‌ಗಳ ಜೊತೆಗೆ, “2024 ರ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಜನರು ಬಿಜೆಪಿಗೆ ಮತ ಹಾಕಲು ಮತ್ತು ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ” ಎಂಬ ಸಂದೇಶವೂ ಇಂಗ್ಲಿಷ್‌ನಲ್ಲಿ ಇದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಭಾರತ್ ಮಾತಾ ಕಿ ಜೈ’ ಎಂದಿದ್ದಕ್ಕೆ ಮುಸ್ಲಿಮರು ಥಳಿಸಿದರು ಎಂಬುದು ಸುಳ್ಳು
3 ತಿಂಗಳ ಉಚಿತ ರೀಚಾರ್ಜ್ ಪಡೆಯಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ವೈರಲ್ ಮೆಸೇಜ್‌ನಲ್ಲಿ ಹೇಳಲಾಗಿದ್ದು, ಲಿಂಗ್ ಕೂಡಾ ನೀಡಲಾಗಿದೆ. ಜೊತೆಗೆ, “ಕೊನೆಯ ದಿನಾಂಕ – 31 ಅಕ್ಟೋಬರ್ 2023” ಎಂದು ಕೂಡಾ ಅದರಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖವಾಗಿ ಈ ವೈರಲ್ ಸಂದೇಶ ಬಿಜೆಪಿಯ ಐಟಿ ಸೆಲ್‌ಗಳು ನಡೆಸುವ ವಾಟ್ಸಪ್ ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದು, ಅದನ್ನು ಪದೇ ಪದೇ ಹಂಚಿಕೊಳ್ಳಲಾಗುತ್ತಿದೆ. ಇಷ್ಟೆ ಅಲ್ಲದೆ, ಹಲವಾರು ಜನರು ಫೇಸ್‌ಬುಕ್‌ನಲ್ಲಿ ಕೂಡಾ ಇದನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ನೋಡಬಹುದು.
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಕೂಡಾ ಹಲವಾರು ಜನರು ಇದನ್ನು ಹಂಚಿಕೊಂಡಿದ್ದು, ಹಲವಾರು ಜನರು ಇದು ನಿಜವೇ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು!
@narendramodi @PMOIndia @PTI_News @htTweets @aajtak @CNNnews18 *PM Narendra Modi* is giving *3 Months Free recharge* to all *Indian users* so that more and more people can vote for *BJP* in the *2024 elections* and *BJP government* can be formed again.
E— Santosh Kumar (@Wiseguy2inKumar) October 24, 2023
ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್ ನಂಬರ್ (+916361984022)ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಫ್ಯಾಕ್ಟ್‌ಚೆಕ್
ವಾಟ್ಸಾಪ್ ಫಾರ್ವರ್ಡ್‌ನಲ್ಲಿ ಒದಗಿಸಲಾದ ಲಿಂಕ್ ಅನ್ನು ನಾವು ಪರಿಶೀಲಿಸಿದ್ದು, ಅಲ್ಲಿ ಕ್ಲಿಕ್ ಮಾಡಿದಾಗ ಒಂದು ವೆಬ್‌ಸೈಟ್ ತೆರೆದುಕೊಂಡಿದ್ದು, ಅದರಲ್ಲಿ “ಬಿಜೆಪಿ ಉಚಿತ ರೀಚಾರ್ಜ್ ಯೋಜನೆ” ಮತ್ತು “ಉಚಿತ ರೀಚಾರ್ಜ್ ಪಡೆಯಿರಿ” ಎಂದು ಬರೆದಿದೆ. ಈ ವೆಬ್‌ಸೈಟ್ ನಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ.
ಇಷ್ಟೆ ಅಲ್ಲದೆ, ಹಲವಾರು ಜನರು ಯೋಜನೆ ಚೆನ್ನಾಗಿದೆ ಎಂಬಂತೆ ಕಮೆಂಟ್ ಮಾಡಿರುವುದು ಕೂಡಾ ಕಾಣಸಿಗುತ್ತದೆ. ವಾಸ್ತವದಲ್ಲಿ ಇದು ಫೇಕ್ ಕಮೆಂಟ್ ಆಗಿದೆ.
“ಬಿಜೆಪಿ ಉಚಿತ ರೀಚಾರ್ಜ್ ಯೋಜನೆ” ಎಂಬ ಕೀವರ್ಡ್ ಹಾಕಿ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ, ಇಂತಹ ಯಾವುದೆ ಯೋಜನೆಯನ್ನು ಬಿಜೆಪಿಯಾಗಲಿ, ಬಿಜೆಪಿ ಸರ್ಕಾರವಾಗಲಿ ಘೋಷಿಸಿರುವ ಬಗ್ಗೆ ವಿಶ್ವಾಸಾರ್ಹ ಸುದ್ದಿಗಳು ನಮಗೆ ಸಿಕ್ಕಿಲ್ಲ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಅಮೆರಿಕದ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದರು ಎಂಬುದು ಸುಳ್ಳು
ಅಲ್ಲದೆ ಬಿಜೆಪಿಯ ಅಧಿಕೃತ ವೆಬ್‌ಸೈಟ್ ಅಲ್ಲಿ ಕೂಡಾ ಇಂತಹ ಯಾವುದೇ ಯೋಜನೆ ಇರುವುದು ನಮಗೆ ಕಂಡಿಲ್ಲ. ಆದರೆ ಅವುಗಳ ಬಗ್ಗೆ ಹಲವಾರು ವೆಬ್‌ಸೈಟ್‌ಗಳು ಫ್ಯಾಕ್ಟ್‌ಚೆಕ್ ನಡೆಸಿರುವ ಲೇಖನಗಳು ನಮಗೆ ಇಂಟರ್‌ನೆಟ್‌ನಲ್ಲಿ ಸಿಕ್ಕಿವೆ.
ಬಿಜೆಪಿಯ ಅಧಿಕೃತ ವೆಬ್‌ಸೈಟ್ ವಿಳಾಸ, https://www.bjp.org/ ಎಂದಾಗಿದೆ. ಆದರೆ ವಾಟ್ಸಪ್‌ನಲ್ಲಿ ವೈರಲ್ ಆಗಿರುವ ಈ ಸಂದೇಶದಲ್ಲಿ ನೀಡಲಾಗಿರುವ ವೆಬ್‌ಸೈಟ್ ವಿಳಾಸ, https://[email protected]/ ಮತ್ತು https://[email protected] ಇವೆ. ವೈರಲ್ ಸಂದೇಶದ ಈ ಲಿಂಕ್ ಅನುಮಾನಾಸ್ಪದವಾಗಿದೆ.
ಅನುಮಾನಾಸ್ಪದವಾಗಿರುವ ಹಿನ್ನೆಲೆ ಈ ವೆಬ್‌ಸೈಟ್ ಬಗ್ಗೆ ನಾವು ಸ್ಕ್ಯಾಮ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ, crazyoffer.xyz ವೆಬ್‌ಸೈಟ್ ವಿವಾದಾತ್ಮಕ, ಅಪಾಯಕಾರಿ, ಕೆಂಪು ಫ್ಲಾಗ್ ಎಂದು ಫಲಿತಾಂಶ ನೀಡಿದೆ. “mangafinic.com” ವೆಬ್‌ಸೈಟ್ ಬಗ್ಗೆ, “ಅನುಮಾನಾಸ್ಪದ, ಮಧ್ಯಮ ಅಪಾಯ ಮತ್ತು ಎಚ್ಚರಿಕೆ” ಎಂದು ಫಲಿತಾಂಶ ನೀಡಿದೆ.
ಇಂತಹ ಲಿಂಕ್‌ಗಳಿಗೆ ಕ್ಲಿಕ್ ಮಾಡುವುದರಿಂದ ಪಾಸ್‌ವರ್ಡ್‌ಗಳು, ಹಣ ಸೇರಿದಂತೆ ಹಲವಾರು ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಅವಕಾಶ ಇರುತ್ತದೆ. ಇದನ್ನೂ ಓದಿ:ಫ್ಯಾಕ್ಟ್‌ಚೆಕ್ | ಪಾಕಿಸ್ತಾನ ಧ್ವಜ ವಿವಾದ; ಸುಳ್ಳು ಸುದ್ದಿ ಹರಡಿದ ಏಷ್ಯಾನೆಟ್ ಸುವರ್ಣ ನ್ಯೂಸ್!
ಈ ಬಗ್ಗೆ ಜನಶಕ್ತಿ ಮೀಡಿಯಾ ಬಿಜೆಪಿ ವಕ್ತಾರ ರಾಮಾಚಾರಿ ಅವರ ಜೊತೆಗೆ ಮಾತನಾಡಿದ್ದು, “ಈ ರೀತಿಯಾದ ಯಾವುದೆ ಯೋಜನೆ ಇಲ್ಲ. ಉಚಿತ ರೀಚಾರ್ಜ್ ನೀಡುವುದು ಅಥವಾ ಬಿಡುವುದು ಆಯಾ ಟೆಲಿಕಾಂ ಕಂಪೆನಿಗಳಾಗಿವೆ. ಬಿಜೆಪಿ ಇಂತದ್ದೊಂದು ಯೋಜನೆಯನ್ನು ಪರಿಚಯಿಸಿಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಒಟ್ಟಿನಲ್ಲಿ ಹೇಳಬಹುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವಾಟ್ಸಪ್‌ನಲ್ಲಿ ವೈರಲ್ ಆಗಿರುವ ಎರಡು ಲಿಂಕ್‌ಗಳ ಕ್ಲಿಕ್ ಮಾಡಿದರೆ ಪಾಸ್‌ವರ್ಡ್‌ಗಳು, ಹಣ ಸೇರಿದಂತೆ ಹಲವಾರು ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಅವಕಾಶ ಇರುತ್ತದೆ.
ಈ ರೀತಿಯ ಯಾವುದೆ ಯೋಜನೆ ಬಿಜೆಪಿಯಾಗಲಿ, ಸರ್ಕಾರವಾಗಲಿ ಘೋಷಣೆ ಮಾಡಿಲ್ಲ. ವೈರಲ್ ಸಂದೇಶದಲ್ಲಿ ಇರುವ ಮಾಹಿತಿ ಸುಳ್ಳಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಬನ್ನಿ ಮರದ ಮಹತ್ವ ಗೊತ್ತೆ ? ಬನ್ನಿ ಮರ ನಮ್ಮ ಬದುಕಿನ ಬಂಗಾರ!
Jai BJP