ಫ್ಯಾಕ್ಟ್‌ಚೆಕ್ | ಅಮೆರಿಕದ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದರು ಎಂಬುದು ಸುಳ್ಳು

ಅಮೆರಿಕದಲ್ಲಿ ಲಕ್ಷಾಂತರ ಕ್ರೈಸ್ತರು ತಮ್ಮ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂದು ಪ್ರತಿಪಾದಿಸಿ, ಜನರ ಗುಂಪೊಂದು ಭಜನೆ ಮಾಡುವ ವಿಡಿಯೊವೊಂದನ್ನು ವೈರಲ್ ಮಾಡಲಾಗುತ್ತಿದೆ. ಈ ವಿಡಿಯೊವನ್ನು ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲಿಗರು ವೈರಲ್ ಮಾಡುತ್ತಿದ್ದಾರೆ. ಫೇಸ್‌ಬುಕ್, ಟ್ವಿಟರ್ ಮತ್ತು ಇನ್ಸ್‌ಟಾಗ್ರಾಂಗಳಲ್ಲಿ ಈ ವಿಡಿಯೊವನ್ನು ವೈರಲ್ ಮಾಡಲಾಗುತ್ತಿದೆ.

ಬಿಜೆಪಿ ಶಿವಮೊಗ್ಗ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ,”ಸತ್ಯ ಸಾಕ್ಷಾತ್ಕಾರಕ್ಕಾಗಿ ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಅಭಿನಂದನೆಗಳು” ಎಂಬ ಸಂದೇಶದೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೂರಾರು ಜನರು ಹಂಚಿಕೊಂಡಿದ್ದಾರೆ. ಇಷ್ಟೆ ಅಲ್ಲದೆ, ಪುತ್ತೂರ ಮುತ್ತು, Ajith Kunigal Ajith Kunigal, Prabhugoud Sarkar ಎಂಬ ಬಲಪಂಥೀಯ ಖಾತೆಗಳು ಸೇರಿದಂತೆ ಹಲವಾರು ಫೇಸ್‌ಬುಕ್ ಖಾತೆಗಳು ಇದನ್ನು ಹಂಚಿಕೊಂಡಿವೆ.

ಇಷ್ಟೆ ಅಲ್ಲದೆ, ಟ್ವಿಟರ್‌, ಇನ್ಸ್‌ಟಾಗ್ರಾಂಗಳಲ್ಲಿನ ಬಲಪಂಥೀಯ ಖಾತೆಗಳು ಇದೇ ಪ್ರತಿಪಾದನೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ವಾಟ್ಸಪ್‌ನಲ್ಲಿ ಹಂಚಲಾಗುತ್ತಿದ್ದು, ಇದನ್ನು ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್‌ ವಾಟ್ಸಪ್‌ ಗ್ರೂಪ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್ ಮಾಡಿ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪಾಕಿಸ್ತಾನ ಧ್ವಜ ವಿವಾದ; ಸುಳ್ಳು ಸುದ್ದಿ ಹರಡಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌!

ಫ್ಯಾಕ್ಟ್‌ಚೆಕ್‌:

ಸೂಕ್ಷ್ಮವಾಗಿ ಗಮನಿಸಿದಾಗ ವಿಡಿಯೊದಲ್ಲಿರುವ ಇರುವ ಜನರು “ಹರೇ ಕೃಷ್ಣ” ಎಂದು ನೃತ್ಯ ಮಾಡುತ್ತಾ ಭಜನೆ ಮಾಡುವುದು ನಮ್ಮ ಗಮನಕ್ಕೆ ಬರುತ್ತದೆ. ಈ ರೀತಿಯಾಗಿ ಭಜನೆ ಮಾಡುತ್ತಾ ನೃತ್ಯ ಮಾಡುವ ಕಾರ್ಯಕ್ರಮವನ್ನು “ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಸಿಯಸ್‌ನೆಸ್(ಇಸ್ಕಾನ್) ಎಂಬ ಸಂಸ್ಥೆ ಆಯೋಜಿಸುತ್ತದೆ. ಇಸ್ಕಾನ್ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ಮಾಹಿತಿಯ ಎಳೆಯನ್ನು ಹಿಡಿದು ನಾವು ಮತ್ತಷ್ಟು ಹುಡುಕಿದಾಗ, ವಿಡಿಯೊ ಇಸ್ಕಾನ್‌ ಸಂಸ್ಥೆಯದ್ದೇ ಕಾರ್ಯಕ್ರಮ ಎಂದು ನಮಗೆ ಖಚಿತವಾಗಿದೆ.

ವೈರಲ್ ಸಂದೇಶದಲ್ಲಿ ಹೇಳಿದಂತೆ ಈ ವಿಡಿಯೊ ಅಮೆರಿಕಾದ್ದಲ್ಲ, ಬದಲಾಗಿ ಇಂಗ್ಲೇಂಡ್‌ನದ್ದಾಗಿದೆ. ವಿಡಿಯೊವನ್ನು ಸೂಕ್ಷವಾಗಿ ಗಮನಿಸಿದರೆ ದೂರದ ಕಟ್ಟಡವೊಂದರಲ್ಲಿ, ಇಂಗ್ಲೇಂಡ್‌ನ ಧ್ವಜವೊಂದು ಹಾರಾಡುತ್ತಿರುವುದನ್ನು ನೋಡಬಹುದಾಗಿದೆ.

Janashakthi Media Fact Check - ಜನಶಕ್ತಿ ಮೀಡಿಯಾ ಫ್ಯಾಕ್ಟ್‌ಚೆಕ್

ಇಂಗ್ಲೇಂಡ್‌ ಧ್ವಜವನ್ನು ಕಂಡ ನಂತರ ನಾವು ಇಸ್ಕಾನ್‌ನ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ನಮಗೆ 2023ರ ಜುಲೈ 30ರಂದು ಲಂಡನ್ ಹೈಡ್ ಪಾರ್ಕ್‌ನಿಂದ ಪಿಕ್ಯಾಡಿಲಿ ಮೂಲಕ ಚಲಿಸಿ ಟ್ರಾಫಲ್‌ಗರ್‌ ಸ್ಕ್ವೇರ್‌ನಲ್ಲಿ ಕೊನೆಗೊಂಡ ರಥಯಾತ್ರೆ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದೂಗಳಿಂದ ಚಪ್ಪಲಿ ಕ್ಲೀನ್ ಮಾಡಿಸುತ್ತೇನೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆನ್ನುವುದಕ್ಕೆ ಆಧಾರಗಳಿಲ್ಲ!

ಇದರ ಆಧಾರದಲ್ಲಿ ನಾವು ಮತ್ತಷ್ಟು ಹುಡುಕಾಡಿದ್ದು ಈ ಕಾರ್ಯಕ್ರಮದ ಹಲವು ವಿಡಿಯೊಗಳು ನಮಗೆ ಯೂಟ್ಯೂನ್‌ನಲ್ಲಿ ಲಭ್ಯವಾಗಿದೆ. ವಾಸ್ತವದಲ್ಲಿ ನಮಗೆ ವೈರಲ್ ವಿಡಿಯೊ ಒರಿಜಿನಲ್ ಕ್ಲಿಪ್‌ ಸಿಕ್ಕಿಲ್ಲವಾದರೂ, ವೈರಲ್ ವಿಡಿಯೊದಲ್ಲಿ ಕಂಡು ಬರುವ ಜನರೇ ಇರುವ ಮತ್ತೊಂದಷ್ಟು ವಿಡಿಯೊ ನಮಗೆ ಲಭ್ಯವಾಗಿದೆ.

naik78 ಎಂಬ ಯೂಟ್ಯೂಬ್ ಚಾನೆಲ್ ಈ ಕಾರ್ಯಕ್ರಮದ ಎರಡು ವಿಡಿಯೊವನ್ನು ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಒಂದು ವಿಡಿಯೊ 14:6 ನಿಮಿಷ ಇದ್ದು, ಮತ್ತೊಂದು ವಿಡಿಯೊ 01:01 ಗಂಟೆ ಇದೆ. ಆ ವಿಡಿಯೊದಲ್ಲಿ ವೈರಲ್ ಕ್ಲಿಪ್‌ನಲ್ಲಿ ಇರುವ ವ್ಯಕ್ತಿಗಳನ್ನು ಕಾಣಬಹುದಾಗಿದೆ.

ವೈರಲ್ ವಿಡಿಯೊದಲ್ಲಿ ಕಂಡು ಬರುವ ಜನರು 14:6 ನಿಮಿಷ ಇರುವ ವಿಡಿಯೊದಲ್ಲಿ 04:21 ವೇಳೆ ಕಾಣುತ್ತಾರೆ. ಮತ್ತು 01:01 ಗಂಟೆಯ ವಿಡಿಯೊದಲ್ಲಿ ಅವರು 19:46 ನಿಮಿಷ ಆಗುವಾಗ ಗೋಚರಿಸುತ್ತಾರೆ. ಅಲ್ಲದೆ ಕಾರ್ಯಕ್ರಮದ ಹಲವು ವಿಡಿಯಗಳಲ್ಲಿ ಅವರು ಇರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ವೈರಲ್ ವಿಡಿಯೊ ಕ್ಲಿಪ್‌ನ ಘಟನೆಯು ಇಂಗ್ಲೇಂಡ್‌ನಲ್ಲಿ ಆಗಿದ್ದೆ ಹೊರತು, ಅಮೆರಿಕಾದಲ್ಲಿ ಅಲ್ಲ ಎಂಬುವುದನ್ನು ನಾವು ಖಚಿತಪಡಿಸಬಹುದು.

ಈ ವಿಡಿಯೊ ಜೊತೆಗೆ ಪ್ರತಿಪಾದಿಸಿ ಮತ್ತೊಂದು ವಿಚಾರವೆಂದರೆ, “ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ” ಎಂಬುವುದಾಗಿದೆ. ಈ ಬಗ್ಗೆ ನಾವು ಮತ್ತೆ ಇಂಟರ್ನೆಟ್‌ನಲ್ಲಿ ಹುಡುಕಾಡಿದಾಗ, ವಿಶ್ವದಾಖಲೆಯಾದ ಯಾವುದೆ ವರದಿಗಳು ನಮಗೆ ಲಭ್ಯವಾಗಿಲ್ಲ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ವಿಪಕ್ಷಗಳ ನಾಯಕರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹರಡುತ್ತಿರುವ ಬಿಜೆಪಿ ಬೆಂಬಲಿಗರು

ಈ ಬಗ್ಗೆ ನಾವು ಅಂಕಿ ಅಂಶಗಳನ್ನು ಹುಡುಕಾಡಿದಾಗ ಅಮೆರಿಕಾದಲ್ಲಿ 25 ಲಕ್ಷ ಹಿಂದೂಗಳಿದ್ದಾರೆ ಎಂಬ ಬಗ್ಗೆ ವರದಿಯಿದೆ. ಒಂದು ವೇಳೆ 7 ಲಕ್ಷ ಜನರು ಹಿಂದೂ ಧೆರ್ಮಕ್ಕೆ ಮತಾಂತರವಾಗಿದ್ದರೆ ಅದು ಭಾರಿ ಸುದ್ದಿಯಾಗಬೇಕಿತ್ತು. ಆದರೆ ಅಂತಹ ಯಾವುದೆ ಸುದ್ದಿಗಳು ನಮಗೆ ಲಭ್ಯವಾಗಿಲ್ಲ.

ಆಧಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಒಟ್ಟಿನಲ್ಲಿ ಹೇಳುವುದಾದರೆ, “ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ” ಎಂದು ಪ್ರತಿಪಾದಿಸಿ ವೈರಲ್ ಆಗಿರುವ ವಿಡಿಯೊ ಲಂಡನ್‌ ನಗರದ್ದಾಗಿದೆಯೆ ಹೊರತು, ಅಮೆರಿಕಾದ್ದಲ್ಲ. ಜೊತೆಗೆ ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂಬ ಹೇಳಿಕೆ ಕೂಡಾ ಆಧಾರರಹಿತವಾಗಿದ್ದು, ಈ ಬಗ್ಗೆ ಯಾವುದೆ ವರದಿಗಳು ಇಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಚಾರ ಸುಳ್ಳಾಗಿದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ʼಹೊರಗುತ್ತಿಗೆʼ ಎಂಬ ಜೀತ ಪದ್ದತಿಯಿಂದ ಮುಕ್ತಿಗೊಳಿಸಿ ಹಾಸ್ಟೆಲ್‌ ಅಡುಗೆದಾರರಿಂದ ಅನಿರ್ದಿಷ್ಟ ಮುಷ್ಕರ

Donate Janashakthi Media

Leave a Reply

Your email address will not be published. Required fields are marked *