ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ – ಸಚಿವ ಶ್ರೀರಾಮಲು

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ, ಹಿಂದುಳಿದವರ ಪರ ಕಾಳಜಿಯುಳ್ಳ ನಾಯಕ. ಅವರ ಪೋಟೋವನ್ನು ಕಾಂಗ್ರೆಸ್ ಪ್ರಚಾರ ವಾಹನದ ಮೇಲೆ ಹಾಕಿಲ್ಲ. ಅಂಥ ನಾಯಕನಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಸಚಿವ ಶ್ರೀರಾಮುಲು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ರೇಖಲಗೆರೆ ಗ್ರಾಮದಲ್ಲಿ ಕೋಟಿ ವೃಕ್ಷ ಸಂವರ್ಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಶ್ರೀರಾಮುಲು ಅವರನ್ನ ಡಿಸಿಎಂ ಮಾಡುವ ವಿಚಾರದಲ್ಲಿ ಹೈ ಕಮಾಂಡ್ ಕೊಟ್ಟ ಮಾತಿನಂತೆ ನಡೆಯುತ್ತದೆ. ಸಮಯಕ್ಕಾಗಿ ಕಾಯೋಣ, ರಾಜಕಾರಣದಲ್ಲಿ ಕಾಯುವುದೇ ಪರೀಕ್ಷೆ ಎಂದು ಹೇಳಿದ್ದಾರೆ. ಮುಂಬರುವ 2023 ಚುನಾವಣೆಯಲ್ಲಿ ಸಿಎಂ ಆಗಲು ಕಾಂಗ್ರೆಸ್ ನಲ್ಲಿ ಪೈಪೋಟಿ ನಡೆಯುತ್ತಿದೆ.

ಅದೊಂದು ವೈರಸ್ ರೀತಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಅಂಟಿದೆ. ಈ ವೈರಸ್ ಗೆ ತಕ್ಷಣವೇ ಲಸಿಕೆ ಕೊಡಬೇಕಿದೆ. ಸಿಎಂ ಆಗಬೇಕು ಎಂದು ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರಲ್ಲಿ ಪೈಪೋಟಿ ಆಗುತ್ತಿದೆ. ಸಿಎಂ ಸ್ಥಾನದ ವೈರಸ್ ಗೆ ದೆಹಲಿಯ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು ಎಂದು ಕೈ ನಾಯಕರ ಕುರ್ಚಿ ಕಿತ್ತಾಟದ ವಿಷಯ ಪ್ರಸ್ತಾಪ ಮಾಡಿ ಕಾಲೆಳೆದಿದರು.

ಇದನ್ನೂ ಓದಿ : ಕಾಂಗ್ರೆಸ್ ‌ಮತ್ತೆ ಅಧಿಕಾರಕ್ಕೆ ಬರಲ್ಲ – ಕೆ.ಎಸ್‌. ಈಶ್ವರಪ್ಪ

ಇನ್ನೂ ಬಿಜೆಪಿ 2023 ಚುನಾವಣೆಯಲ್ಲಿ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪ್ರಚಾರ ವಾಹನದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಫೋಟೋ ಹಾಕಿಲ್ಲೆಂದು ಪತ್ರಿಕೆಯಲ್ಲಿ ದೆ. ದಲಿತರ, ಹಿಂದುಳಿದವರ ಪರ ಕಾಳಜಿಯುಳ್ಳ ನಾಯಕ ಸಿದ್ದರಾಮಯ್ಯ. ಅಂಥ ದಲಿತ, ಹಿಂದುಳಿದ ನಾಯಕನಿಗೆ ಅಲ್ಲಿ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಕಚ್ಚಾಟ ರಂಪಾಟ ಆಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಶ್ರೀ ರಾಮುಲು ಡಿಸಿಎಂ ಸ್ಥಾನದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಲ್ಲಿ ಮುಂಚೆಯಿಂದ ಸಂಪ್ರಾದಾಯವಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ದಲಿತರಿಗೆ ಅವಕಾಶ ಕೊಟ್ಟಿದೆ. ಹಾಗಾಗಿ ಇನ್ನೂ ಕೂಡ ಕಾಲಾವಕಾಶ ಮೀರಿಲ್ಲ. ನಮ್ಮ ಹೈಕಮಾಂಡ್ ಅವಕಾಶ ಬರುವುದನ್ನು ಕಾಯುತ್ತಾ ಇರುತ್ತಾರೆ. ಸದ್ಯ ಗೋವಿಂದ ಕಾರಜೋಳ ಅವರನ್ನ ಡಿಸಿಎಂ ಮಾಡಿದ್ದಾರೆ. ರಾಮುಲು ಅವರನ್ನೂ ಡಿಸಿಎಂ ಮಾಡಬೇಕು ಎಂಬ ವಿಚಾರ ಬಂದಾಗ ಸಮಯಕ್ಕಾಗಿ ಕಾಯುತ್ತಿದ್ದಾರೆ. ಆ ಸಮಯಕ್ಕಾಗಿ ನಾವೂ ಕಾಯೋಣ, ರಾಜಕಾರಣದಲ್ಲಿ ಕಾಯುವುದೇ ಪರೀಕ್ಷೆ, ಅಂದು ಕೊಟ್ಟ ಮಾತಿನಂತೆ ಹೈಕಮಾಂಡ್ ನಡೆಯುತ್ತದೆ. ಬಿಜೆಪಿ ಯಲ್ಲಿ ಮೇಲೆ ಬಿದ್ದು ಹೋಗಿ ಹೀಗೆ ಆಗಬೇಕು ಎಂದ್ರೆ ನಮ್ಮ ನಾಯಕರು ಒಪ್ಪಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *