ಗದಗ : ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಕಳೆದ ಐದು ವರ್ಚಗಳಲ್ಲಿ ಸಾಕಷ್ಟು ಜನಪರವಲ್ಲದ ಯೋಜನೆಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಲಾಗದ ಬಿಜೆಪಿ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಹೇಗಾದರೂ ಮಾಡಿ ನೆಲೆ ಕಂಡುಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಮತ ಗಿಟ್ಟಿಸಲೇಂದು ಪಕ್ಷರ ರಾಷ್ಟ್ರ ನಾಯಕರನ್ನು ಕರೆಸಿ ಮಾಡುವ ಪ್ರತಿ ಕಾರ್ಯಕ್ರಮದಲ್ಲೂ ಕೂಡ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ.
ಈ ನಡುವೆ ನೆನ್ನೆ ದಿನ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಪ್ರಚಾರ ಕಾರ್ಯಕ್ರಮ ಹಿನ್ನೆಲೆ ಸುಡು ಬಿಸಿಲೆನ್ನದೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಆದರೆ ಬಿಸಿಲಿನ ಬೇಗೆಗೆ ಬೆಂದ ಜನರು ಬಾಯಾರಿಕೆಯಿಂದ ಬಳಲುತ್ತಿದ್ದರು. ಈ ವೇಳೆ ಒಂದು ತಂಪು ಪಾನೀಯ ಮಾರಾಟದ ವ್ಯಾನ್ ಆಗಮಿಸಿದೆ. ಕಾರ್ಯಕ್ರಮಕ್ಕೆ ವ್ಯಾನ್ ಆಗಮಿಸುತ್ತಿದ್ದಂತೆ ವ್ಯಾನ್ ಮೇಲೆ ಮುಗಿಬಿದ್ದ ಜನರು ನೀರು, ಜ್ಯೂಸ್ ಕೊಂಡೊಯ್ದಿದ್ದಾರೆ. ನೀರಿನ ಬಾಟಲು ಕಿತ್ತಕೊಂಡು ಹೋಗಿದ್ದಕ್ಕೆ ಕಂಗಾಲಾದ ವ್ಯಾಪಾರಿ ಶರೀಫ್ ಕಣ್ಣೀರು ಹಾಕಿದ್ದಾರೆ. ಇಷ್ಟಕ್ಕೂ ಇಲ್ಲಿ ನಡೆದಿದ್ದೇನೆಂದರೆ, ಕಾರ್ಯಕ್ರಮ ಆಯೋಜಕರೇ ನೀರಿನ ವ್ಯವಸ್ಥೆ ಮಾಡಿದ್ದಾರೆಂದು ಭಾವಿಸಿ ಜನರು ವ್ಯಾನ್ ಮೇಲೆ ಮುಗಿಬಿದ್ದು ನೀರು, ಜ್ಯೂಸ್ ಕೊಂಡೊಯ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಜನರನ್ನ ಗಾಡಿಯಿಂದ ಕೆಳಗಿಸಿ ಆತನನ್ನು ಸಮಾಧಾನ ಮಾಡಿ ಕಳುಹಿಸಿರುವ ಘಟನೆ ನಡೆದಿದೆ.
ಸದ್ಯ, ವ್ಯಾಪಾರಿ ಶರೀಫ್ ಕಣ್ಣೀರು ಹಾಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪಕ್ಷ ತನ್ನ ಸ್ವಂತ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿಲ್ಲದ ಬಗ್ಗೆ ಹಾಗೂ ವ್ಯಾಪಾರಿ ಶರೀಫ್ ಕಣ್ಣೀರಿ ಸಾಕಷ್ಟು ಮರುಕ ಪಟ್ಟಿದ್ದಾರೆ. ಒಂದಷ್ಟು ಜನ ವ್ಯಾಪಾರಿಗಾದ ಅನ್ಯಾಯಕ್ಕೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಶಶಿಕರ ಪಾತೂರು ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ನಿನ್ನೆ ಗದಗದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿತ್ತು. ವೇದಿಕೆಯಲ್ಲಿದ್ದಿದ್ದು ಗೃಹಮಂತ್ರಿ ಅಮಿತ್ ಶಾ. ಆದರೆ ಗದಗ ಎಂದ ಮೇಲೆ ಬಿಸಿಲು ಧಗ ಧಗ ಎಂದು ಹೇಳಬೇಕಿಲ್ಲ. ಜನ ಬಾಯಾರಿದ್ದರು. ಬ್ಲೂಜೆಪಿ ದುಡ್ಡುಕೊಡುವುದಾಗಿ ಹೇಳಿ ಕರೆಸಿತ್ತು. ಆದರೆ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿರಲಿಲ್ಲ.
ಶರೀಫ ಎಂಬ ಎಳೆಯ ಹುಡುಗ ತಂಪು ಪಾನೀಯ ಮಾರಾಟ ಮಾಡಲೆಂದು ಇಲ್ಲಿಗೆ ಬಂದಿದ್ದಾನೆ. ಕೂಲ್ ಡ್ರಿಂಕ್ಸ್ ವಾಹನ ಈ ಜಾಗಕ್ಕೆ ತಲುಪಿದ್ದೇ ತಡ ಜನ ಮಂಗಗಳಂತೆ ಛಂಗನೆ ವಾಹನದ ಮೇಲೆಯೇ ನೆಗೆದಿದ್ದಾರೆ. ಕೈಗೆ ಸಿಕ್ಕಷ್ಟು ಬಾಟಲಿಗಳನ್ನು ಬಾಚಿದ್ದಾರೆ. ಜನರ ಪ್ರಕಾರ ಇದು ಬಿಜೆಪಿ ಉಚಿತವಾಗಿ ವಿತರಿಸಿರುವ ತಂಪು ಪಾನೀಯ! ಆದರೆ ಶರೀಫನ ವ್ಯಾಪಾರಕ್ಕೆ ಆಗಿದ್ದು ಭಾರೀ ನಷ್ಟ.
ಇದನ್ನೂ ಓದಿ : ಮೋದಿ ರೋಡ್ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!
ಭಯಭೀತಗೊಂಡ ಶರೀಫ ಅತ್ತೇ ಬಿಟ್ಟಿದ್ದಾನೆ. ಪೊಲೀಸರು ಆತನನ್ನು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಮಾಡಿದ್ದಾರೆ. ಲಕ್ಷಾಂತರ ಮಂದಿ ಸೇರುವ ಸಭೆಯಲ್ಲಿ ಒಬ್ಬ ವ್ಯಾಪಾರಿಗೆ ನ್ಯಾಯ ಒದಗಿಸಲಾಗದವರು. ಲಾಭ ಬೇಡ; ತಮ್ಮಿಂದ ಆದ ನಷ್ಟಕ್ಕೆ ಪರಿಹಾರ ಕೊಡಿಸಲಾಗದವರು ರಾಜ್ಯದ ಪ್ರಜೆಗಳ ಕಷ್ಟವನ್ನೇನು ನೋಡಿಕೊಳ್ಳುತ್ತಾರೆ?!! ಈ ಹುಡುಗನ ಕಣ್ಣೀರು ಬ್ಲೂಜೆಪಿ ಪಾಲಿಗೆ ಬರೀ ಟೀಸರ್ ಮಾತ್ರ. ಈ ಪಕ್ಷ ಗೆದ್ದರೆ ಜನರ ಕಣ್ಣೀರೇ ಕರ್ನಾಟಕದ ಸಿನಿಮಾವಾಗಲಿರುವುದು ಖಚಿತ.