ಯುದ್ಧದ ಲೈವ್ ಕವರೇಜ್ ಮಾಡದಂತೆ ಮಾಧ್ಯಮಗಳಿಗೆ ಸೂಚನೆ

ವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆಯ ಉದ್ವಿಗ್ನತೆ ಇದೀಗ ಹೆಚ್ಚಾಗಿ,ದ್ದೂ ಇಂತಹ ಯುದ್ಧದ ಕಾರ್ಯಾಚರಣೆಯನ್ನು ಲೈವ್ ಕವರೇಜ್ ಮಾಡದಂತೆ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಸಂಬಂಧ ಕೇಂದ್ರ ರಕ್ಷಣಾ ಇಲಾಖೆ ಮಾಧ್ಯಮಗಳಿಗೆ ಸೂಚನೆ ಹೊರಡಿಸಿದ್ದು, ಪಾಕಿಸ್ತಾನ ವಿರುದ್ಧದ ಭಾರತೀಯ ಸೇನಾ ಕಾರ್ಯಾಚರಣೆಯ ನೇರ ಪ್ರಸಾರವನ್ನು ಮಾಡದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಎಲ್ಲ ವಾಸ್ತವ ಸಂಗತಿಗಳನ್ನು ಜನರ ಮುಂದಿಟ್ಟು, ತಪ್ಪು ಮಾಹಿತಿಗಳು ಹರಡುವುದನ್ನು ತಡೆಯಬೇಕು – ಜಾನ್‍ ಬ್ರಿಟ್ಟಾಸ್

ಭಾರತೀಯ ಸುದ್ದಿ ವಾಹಿನಿಗಳು ಸೇನಾ ಕಾರ್ಯಾಚರಣೆಯನ್ನು ಲೈವ್ ಕರವರೇಜ್ ಮಾಡುವುದನ್ನು ನಿಲ್ಲಿಸಬೇಕು. ಈ ಹಿಂದಿನ ಸೇನಾ ಕಾರ್ಯಾಚರಣೆಯಲ್ಲಿ ಆದಂತ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ನೇರ ಪ್ರಸಾರ ಮಾಡದಂತೆ ಟಿವಿ ಮಾಧ್ಯಮಗಳಿಗೆ ತಿಳಿಸಲಾಗಿದೆ.

ಇದನ್ನೂ ನೋಡಿ: ಕಾರ್ಲ್ ಮಾರ್ಕ್ಸ್ ಜನ್ಮದಿನದ ವಿಶೇಷ :ಮಾರ್ಕ್ಸರವರ ಜೀವನ ಮತ್ತು ಚಿಂತನೆವಿಶ್ಲೇಷಣೆ ಡಾ. ಬಿ.ಆರ್. ಮಂಜುನಾಥ

Donate Janashakthi Media

Leave a Reply

Your email address will not be published. Required fields are marked *