ಮತದಾನದ ಸುಧಾರಣೆಗೆ ಬದಲಿ ಕ್ರಮಕ್ಕೆ ಮುಂದಾದ ಚುನಾವಣಾ ಆಯೋಗ

ಮತದಾನ  ಸುಧಾರಣೆಗೆ  ಬದಲಿ ಕ್ರಮಕ್ಕೆ ಮುಂದಾದ ಚುನಾವಣಾ ಆಯೋಗ

ಬೆಂಗಳೂರು : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸುಧಾರಣೆಯನ್ನು ತರುವುದಕ್ಕಾಗಿ ಬದಲಿ ಕ್ರಮಗಳನ್ನು ಜರುಗಿಸಲು ಚುನಾವಣಾ ಆಯೋಗ ಮುಂದಾಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗ ತಿಳಿಸಿದೆ.

ಅಂಚೆ ಮತದಾನದಿಂದ ಅಕ್ರಮಗಳು ನಡೆಯುವ ಸಾಧ್ಯತೆ ಇದೆ ಎನ್ನುವುದನ್ನು ಚುನಾವಣಾ ಆಯೋಗ ಒಪ್ಪಿಕೊಂಡಿದೆ. ಈ ಮೂಲಕ ಹಲವು ದಶಕಗಳಂದ ಈ ಬಗ್ಗೆ ಇದ್ದ ಅನುಮಾನಗಳಿಗೆ ಪರಿಹಾರ ನೀಡಿರುವ ಆಯೋಗ, ಈ ಬಾರಿ ಆ ರೀತಿಯ ಅಕ್ರಮಗಳನ್ನು ತಡೆಯಲು ಮುಂದಾಗಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿ ನಡೆಯಲಿರುವ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅದನ್ನು ಜಾರಿ ತರಲು ನಿರ್ಧರಿಸಿದೆ. ಎಂಬ ಸುದ್ದಿ ಹರಿದಾಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ಜನಶಕ್ತಿ ಮೀಡಿಯಾ   ಕರ್ನಾಟಕ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚೆಯನ್ನು ನಡೆಸಿತು.  ಇದನ್ನು ನಿರಾಕರಿಸಿದ ಅಧಿಕಾರಿಗಳು ಬದಲಿ ಕ್ರಮ ತರುತ್ತಿರುವುದು ನಿಜ ಆದರೆ ಅಂಚೆ ಮತದಾನದಿಂದ ಅಕ್ರಮವಾಗುತ್ತದೆ ಎಂದು ಚುನಾವಣಾ ಆಯೋಗ ಒಪ್ಪಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

 

ಸಾಂಧರ್ಬಿಕ ಚಿತ್ರ ಕೃಪೆ : ಗೂಗಲ್

ಗ್ರಾಮಪಂಚಾಯ್ತಿ ಚುನಾವಣೆಗಳಿಲ್ಲಿ ಅಂಚೆ ಮತದಾನದ ಸೌಕರ್ಯ ಪಡೆಯಬೇಕಿದ್ದ ಕೋವಿಡ್ ರೋಗಿಗಳು ಆ ಸೌಕರ್ಯದಿಂದ ವಂಚಿತರಾಗಲಿದ್ದು, ಖುದ್ದು ಹಾಜರಾಗಿಯೇ ಮತ ಚಲಾಯಿಸಲು ಆಯೋಗ ಸೂಚಿಸಿದೆ.ಮತದಾನ ದಿನದಂದು ಸೋಂಕಿತರಿಗೆ ಅಂಚೆ ಮತದಾನದ ಬದಲು ಖುದ್ದು ಹಾಜರಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಅಪರ ಕಾರ್ಯದರ್ಶಿಗೆ ಚುನಾವಣಾ ಆಯೋಗ ಪತ್ರದ ಮೂಲಕ ಸೂಚನೆ ನೀಡಿದೆ. ಚುನಾವಣೆಯ  ಆಯೋಗದ ಈ ನಿರ್ಧಾರ ಅಂಚೆ ಮತದಾನದ ಅಕ್ರಮದ ಕಡಿವಾಣಕ್ಕೆ ಸೂಚನೆಯು ಇರಬಹುದು ಎಂದು ರಾಜಕೀಯ ವಿಶ್ಲಷೇಷಕರು ಹೇಳುತ್ತಿದ್ದಾರೆ.

ಮತದಾನ ಪ್ರಕ್ರೀಯೆ ಅಂತಿಮಗೊಳ್ಳುವ ಒಂದು ಗಂಟೆಗೂ ಮೊದಲು ಸೋಂಕಿತರಿಗೆ ಮತದಾನಕ್ಕೆ ಅವಕಾಶ ನೀಡುವುದು. ಹಾಗೂ ಆಸ್ಪತ್ರೆ ಹಾಗೂ ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಅಗತ್ಯ ಕೋವಿಡ್ 19 ಮುನ್ನೆಚ್ಚರಿಕೆ ಕೈಗೊಂಡು ಮತದಾನಕ್ಕೆ ವ್ಯವಸ್ಥೆ ಮಾಡಲು ಆಯೋಗ ತೀರ್ಮಾನಿಸಿದೆ. ಈ ಮಾದರಿಯನ್ನು ಈ ಹಿಂದೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳ ವೇಳೆ ಚುನಾವಣಾ ಆಯೋಗ ಜಾರಿ ತಂದು ಯಶ ಕಂಡಿತ್ತು.

Donate Janashakthi Media

Leave a Reply

Your email address will not be published. Required fields are marked *