ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 1- ಪೀಠಿಕೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ

ವೈರ್ (WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ (ಭಾಗ 1- ಪೀಠಿಕೆ) ಇತರ ಭಾಗಗಳು ಮುಂದಿನ ಕಂತುಗಳಲ್ಲಿ)

(ಕೆಲವು ಮುಖ್ಯಾಂಶಗಳು-ಪೀಠಿಕೆಯ ರೂಪದಲ್ಲಿ)

ಕರಣ್: ನಾವು ಫುಲ್ವಾಮಾ ಬಗ್ಗೆ ಮಾತಾಡೋಣ. ನೀವು ರಾಜ್ಯಪಾಲರಾಗಿದ್ದಾಗ, ವಿಧಾನಸಭೆಯನ್ನು ವಿಸರ್ಜಿಸಿದ ನಂತರ ನಡೆದ ಬಹುದೊಡ್ಡ ಸಂಗತಿ ಅದಾಗಿತ್ತು.

ಮಲಿಕ್:ಸಿಆರ್ ಪಿ ಎಫ್ ನವರು ವಿಮಾನಗಳಿಗಾಗಿ ಕೇಳಿದರು, ಎಕೆಂದರೆ ಇಷ್ಟು ದೊಡ್ಡ ದಳ ರಸ್ತೆಯ ಮಾರ್ಗವಾಗಿ ಹೋಗುವುದಿಲ್ಲ. ಕೇವಲ ಐದು ವಿಮಾನಗಳ ಅಗತ್ಯವಿತ್ತು. ಅವರು ನನಗೆ ಕೇಳಿದ್ದರೆ ನಾನು ವಿಮಾನಗಳನ್ನು ಕೊಡುತ್ತಿದ್ದೆ. ಅವರು ಗೃಹ ಮಂತ್ರಿಯಾಗಿದ್ದ ರಾಜನಾಥ ಅವರನ್ನು ಕೇಳಿದರು. ಅವರು ಕೊಡುವುದಕ್ಕೆ ನಿರಾಕರಿಸಿದರು  ಇದನ್ನು ಅದೇ ದಿನ ಸಂಜೆ ನಾನು ಪ್ರಧಾನಿಗೆ ಹೇಳಿದೆ, ಇದು ನಮ್ಮ ತಪ್ಪಿನಿಂದಾಗಿ ಆಗಿದೆ, ನಾವು ವಿಮಾನಗಳನ್ನು ಕೊಟ್ಟಿದ್ದರೆ ಇದು ಆಗುತ್ತಿರಲಿಲ್ಲ ಎಂದು. ಅದಕ್ಕೆ ಅವರು ನನಗೆ, ನೀಗ ನೀವು ಸುಮ್ಮನಿರಿ ಎಂದು ಹೇಳಿದರು.

ಕರಣ್: ಅಂದರೆ, ಆವು ತಪ್ಪು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಾಗುವುದು ಬೇಡ ಎಂದು ಹೇಳಿದರಾ ಪ್ರಧಾನಿಗಳು.

ಮಲಿಕ್: ನನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ನನಗೆ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು.

 ಕರಣ್; ಎಂದರೆ ಇದು ಸರಕಾರದ ಜಾಲೂ ಪಾಲಿಸಿ ಆಗಿತ್ತು, ಪಾಕಿಸ್ತಾನವನ್ನು ದೂಷಿಸಿದರೆ ನಮಗೆ ಕ್ರೆಡಿಟ್ ಸಿಗುತ್ತದೆ. ಅದರಿಂದ ನಮಗೆ ಚುನಾವಣೆಯಲ್ಲಿ ಸಹಾಯಕವಾಗುತ್ತದೆ.

ಮಲಿಕ್: ಇxಚಿಛಿಣಟಥಿ! ನನಗೆ ಚೆನ್ನಾಗಿ ನೆನಪಿದೆ. ಅವರು ಆಗ ನ್ಯಾಷನಲ್ ಕಾರ್ಬೆಟ್ ಪಾರ್ಕಿನಲ್ಲಿ ಶೂಟಿಂಗ್ ಮಾಡಿಸುತ್ತಾ ಇದ್ದರು. ಅಲ್ಲಿ ಫೋನ್ ತಲುಪುತ್ತಿರಲಿಲ್ಲ. ಅದಕ್ಕೆ ಅವರು  ಹೊರಗದೆ ಬಂದು ಒಂದು ಡಾಭಾದಿಂದ ನನಗೆ ಫೋನ್ ಮಾಡಿದ್ದರು. ಸತ್ಪಾಲ್ ಏನಾಯ್ತು ಎಂದು ಕೇಳಿದರು, ನಾನು ಆಗಿರೋದನ್ನು ಹೇಳಿದೆ.  ನಾವು  ವಿಮಾನಗಳನ್ನು ನೀಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದಾಗ, ಅವರು, ಈಗ ನೀವು ಸುಮ್ಮನಿರಿ ಎಂದರು.

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಭ್ರಷ್ಟಾಚರದ ಕುರಿತು

ಕರಣ್:ಇದರಲ್ಲಿ ಪ್ರಧಾನ ಮಂತ್ರಿಯವರೂ ಒಳಗೊಂಡಿದ್ದರೇ?

ಮಲಿಕ್:ಇಲ್ಲ, ಒಳಗೊಂಡಿದ್ದರು ಎಂದು ಹೇಳಲಾರೆ. ಆದರೆ, ನಾನು ಬಹಳ ವಿಶ್ವಾಸದಿಂದ ಹೇಳಬಲ್ಲೆ, ಪ್ರಧಾನಿಯವರಿಗೆ ಭ್ರಷ್ಟಾಚಾರದ ಕುರಿತು ಯಾವುದೇ ದ್ವೇಷವಿಲ್ಲ.

ಕರಣ್: ನಿಮ್ಮ ಇವತ್ತಿನ ಈ ಹೇಳಿಕೆಯ ನಂತರ ನಿಮ್ಮ ವಿರುದ್ಧ ಸರಕಾರದ ದ್ವೇಷವು ಹೆಚ್ಚಾಗುವುದಿದೆ. ಅವರಿಗೆ ಭ್ರಷ್ಟಾಚಾರದ ಕುರಿತು ದ್ವೇಷವಿಲ್ಲ ಎಂದು ನೀವು ಹೇಳಿದ್ದಕ್ಕೆ ಅವರು ನಿಮ್ಮ ಮೇಲೆ ತುಂಬಾ ಕೋಪಿಸಿಕೊಳ್ಳುತ್ತಾರೆ.

ಮಲಿಕ್:ಅವರು ಎಷ್ಟೇ ಕೋಪಿಸಿಕೊಂಡರೂ, ಸತ್ಯ ಸತ್ಯವೇ ಆಗಿದೆ.ನೋಡಿ, ಮೋದಿಜಿಯವರ ಬಗ್ಗೆ ಇಡೀ ಜಗತ್ತಿನವರು ಇಟ್ಟುಕೊಂಡಿರುವ ಅನಿಸಿಕೆಗಳಿಂದ ಭಿನ್ನವಾದ ಅನಿಸಿಕೆ ನನ್ನದಾಗಿದೆ. ನಾನು ಯಾವಾಗ ಭೇಟಿ ಮಾಡಿದ್ದರೂ, ಅವರಿಗೆ ಕಡಿಮೆ ಮಾಹಿತಿ ಇರುವುದು, ಯಾವುದೇ ತಿಳಿವಳಿಕೆ ಇಲ್ಲದಿರುವುದನ್ನು ಕಂಡಿದ್ದೇನೆ.

ಕರಣ್: ಅಂದರೆ ಅವರು ಅಜ್ಞಾನಿ ಎಂದು ಅರ್ಥವೇ?

ಮಲಿಕ್: ಅಂದರೆ, ಅವರು ತಮ್ಮಷ್ಟಕ್ಕೆ ಮಸ್ತ್ ಆಗಿದ್ದಾರೆ, ಆಗುತ್ತಿರುವುದು ಹಾಳಾಗಿ ಹೋಗಲಿ ಎನ್ನುವ ಧೋರಣೆ.

ಕರಣ್: ೨೦೨೪ರಲ್ಲಿ. ಅದಾನಿ ಚುನಾವಣೆಯ ವಿಷಯ ಆಗುತ್ತಾರೆಯೇ?

ಮಲಿಕ್: ಖಂಡಿತವಾಗಿಯೂ, ಅವರು ಈಗಲೇ ಈ ಪ್ರಕರಣವನ್ನು ಸುಧಾರಿಸದೇ ಇದ್ದರೆ, ಈ ಅದಾನಿ ಇವರನ್ನು ನಾಶ ಮಾಡಿಬಿಡುತ್ತಾರೆ.

ಕರಣ್: ಅಂದರೆ, ಅದಾನಿ ಬಿಜೆಪಿಯನ್ನು ನೆಲಸಮ ಮಾಡುತ್ತಾರೆ ಎನ್ನುತ್ತೀರಾ?

ಮಲಿಕ್: ಇಂಥದೊAದು ಸರಕಾರ ಇತ್ತು ಎಂದು ಗೊತ್ತೇ ಆಗದಷ್ಟರ ಮಟ್ಟಿಗೆ, ಹೌದು. ಇವರದು. ಅಷ್ಟು ಕಡಿಮೆ ಸಂಖ್ಯೆ ಬರುತ್ತೆ.

ನಿಮಗೆ ಅಚ್ಚರಿ ಎನ್ನಿಸಬಹುದು. ರಾಷ್ಟçಪರಿಯವರ ಜೊತೆಯಲ್ಲಿ ನನ್ನದೊಂದು ಸಂದರ್ಶನವಿತ್ತು. ಆಗ ನಾನು ರಾಜ್ಯಪಾಲನಾಗಿದ್ದೆ. ನಾನು ಹೊರಟಿದ್ದೆ, ದಾರಿಯಲ್ಲಿರುವಾಗ ನನಗೆ ರಾಷ್ಟçಪತಿಭವನದಿಂದ ನನಗೆ ಫೋನ್ ಬಂತು. ರಾಷ್ಟಪತಿಯವರು ಅನಿರೀಕ್ಷಿತವಾಗಿ ಸ್ವಲ್ಪ ಬಿಜಿ ಆಗಿದ್ದಾರೆ, ನಿಮ್ಮ ಭೇಟಿ ರದ್ದಾಗಿದೆ ಎಂದು. ನನಗೆ ನಂತರ ಗೊತ್ತಾಯಿತು, ಇವರ ಭೇಟಿಯ ಪಟ್ಟಿಯು ಪಿಎಂಒ-ಗೆ ಹೋಗುತ್ತದೆ, ಅಲ್ಲಿಂದ ಅನುಮೋದನೆಗೊಂಡು ಬರುತ್ತದೆ; ಅದರ ಪ್ರಕಾರ ರಾಷ್ಟçಪತಿಯವರು ಸಂದರ್ಶಕರನ್ನು ಭೇಟಿ ಮಾಡುತ್ತಾರೆ, ಎಂದು.

ಕರಣ್: ನೀವು ರಾಷ್ಟಪತಿ ಮುರ್ಮುಅವರ ಬಗ್ಗೆ ಮಾತಾಡುತ್ತಿದ್ದೀರಿ?

ಮಲಿಕ್: ಹೌದು.

ಕರಣ್: ಅವರು ತಮಗೆ ಯಾರು ಬೇಕೋ ಅವರನ್ನು ಭೇಟಿ ಮಾಡುವಂತಿಲ್ಲ  ಪ್ರಧಾನಿಯವರ ಕಚೇರಿಯಿಂದ ಅನುಮತಿ ಪಡೆದ ಪಟ್ಟಿಯ ಪ್ರಕಾರವೇ ಭೇಟಿಯಾಗಬೇಕೇ?

ಮಲಿಕ್: ಹೌದು.

ಕರಣ್: ಅಂದರೆ, ಅವರು ಪ್ರಧಾನ ಮಂತ್ರಿಯ ಕೈಗೊಂಬೆ ಎಂದತಾಯಿತು?

ಮಲಿಕ್:ಆಫ್ ಕೋರ್ಸ್!

ಕರಣ್: ಇದು ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಮಾಡುವ ಅಗೌರವ.

ಮಲಿಕ್: (ನಗು) ಇಲ್ಲಿ ಯಾವುದೂ ಅಸಾದ್ಯವಲ್ಲ.

ಕರಣ್: ಇದನ್ನೆಲ್ಲಾ ಜನ ಆಲಿಸುವರು, ಇದನ್ನೆಲ್ಲಾ ಸರಕಾರವೂ ಆಲಿಸುವುದು. ಇದು ಪ್ರಧಾನ ಮಂತ್ರಿಯವರ ಕಿವಿಯ ವರೆಗೂ ತಲುಪಬಹುದು.

ಮಲಿಕ್: ಇನ್ನು ಒಂದು ಗಂಟೆ ಒಳಗೆ ತಲುಪುತ್ತದೆ, ಗೊತ್ತು.

ಕರಣ್: ಈ ಬಗ್ಗೆ ನಿಮಗೆ ಏನಾದರೂ ಚಿಂತೆ ಅಥವಾ ಆತಂಕ ಇದೆಯೇ?

ಮಲಿಕ್: ನಾನೊಬ್ಬ ಫಕೀರ್ ಮನುಷ್ಯ, ಏನು ಮಾಡಿಕೊಳ್ತಾರೆ, ಹೆಚ್ಚೆಂದರೆ ಜೈಲಿಗೆ ಕಳಿಸಬಹುದು, ಅಲ್ವೇ? ಹಲವು ಬಾರಿ ಹೋಗಿದ್ದೇನೆ ನಾನು ಜೈಲಿಗೆ. ವಿಶೇಷವಾಗಿ ಕಾಶ್ಮೀರದ ವಿಚಾರವಾಗಿಯಂತೂ ನೀನು ಏನನ್ನೂ ಹೇಳಬಾರದು ಎಂದು ನನಗೆ ಕಟುವಾದ ಸೂಚನೆ ಇತ್ತು. ಅವರು ಒಂದು ದಿನ ಫೋನ್ ಮಾಡಿ ಹೇಳಿದರು, ಅರೆ, ನೀವು ಮತ್ತೆ ಕಾಶ್ಮೀರದ ಬಗ್ಗೆ ಮಾತಾಡಿದ್ದೀರಿ. ನಾನೆಂದರೆ, ಸಾಬ್ ನಾನು ಹೇಳಲಿಲ್ಲ. ಅವರು ಆ ಥರದ ಅಭಿಪ್ರಾಯವನ್ನು ಕಂಡುಕೊAಡರು.ನೀವು ಇನ್ನೊಮ್ಮೆ ಕಾಶ್ಮೀರದ ಬಗ್ಗೆ ಮಾತಾಡಿದರೆ ನಾನು ನಿಮ್ಮೊಂದಿಗೆ ಇನ್ನೆಂದಿಗೂ ಭೇಟಿ ಮಾಡುವುದಿಲ್ಲ. 

(ಇಲ್ಲಿಂದ ಸಂದರ್ಶನವು ಮೊದಲಿನಿಂದ ಆರಂಭವಾಗುತ್ತದೆ. ಮೇಲೆ ಹೇಳಿರುವ ಅಂಶಗಳು ಬಂದಾಗ ಅವುಗಳನ್ನು ಬಿಟ್ಟು ಮುಂದಕ್ಕೆ ಹೋಗಲಾಗುವುದು)

Donate Janashakthi Media

Leave a Reply

Your email address will not be published. Required fields are marked *