ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 3 : ಫುಲ್ವಾಮಾ ದುರ್ಘಟನೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ

ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ.  ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ ಕುರಿತ ಸಂದರ್ಶನದ ಭಾಗ (ಇತರ ಭಾಗಗಳು ಮುಂದಿನ ಕಂತುಗಳಲ್ಲಿ) 

ಕರಣ್: ನಾವು ಫುಲ್ವಾಮಾ ಬಗ್ಗೆ ಮಾತಾಡೋಣ. ನೀವು ರಾಜ್ಯಪಾಲರಾಗಿದ್ದಾಗ, ವಿಧಾನಸಭೆಯನ್ನು ವಿಸರ್ಜಿಸಿದ ನಂತರ ನಡೆದ ಬಹುದೊಡ್ಡ ಸಂಗತಿ ಅದಾಗಿತ್ತು.

ಮಲಿಕ್:ಸಿಆರ್ ಪಿ ಎಫ್ ನವರು ವಿಮಾನಗಳಿಗಾಗಿ ಕೇಳಿದರು, ಎಕೆಂದರೆ ಇಷ್ಟು ದೊಡ್ಡ ದಳ ರಸ್ತೆಯ ಮಾರ್ಗವಾಗಿ ಹೋಗುವುದಿಲ್ಲ. ಕೇವಲ ಐದು ವಿಮಾನಗಳ ಅಗತ್ಯವಿತ್ತು. ಅವರು ನನಗೆ ಕೇಳಿದ್ದರೆ ನಾನು ವಿಮಾನಗಳನ್ನು ಕೊಡುತ್ತಿದ್ದೆ. ಅವರು ಗೃಹ ಮಂತ್ರಿಯಾಗಿದ್ದ ರಾಜನಾಥ ಅವರನ್ನು ಕೇಳಿದರು. ಅವರು ಕೊಡುವುದಕ್ಕೆ ನಿರಾಕರಿಸಿದರು  ಇದನ್ನು ಅದೇ ದಿನ ಸಂಜೆ ನಾನು ಪ್ರಧಾನಿಗೆ ಹೇಳಿದೆ, ಇದು ನಮ್ಮ ತಪ್ಪಿನಿಂದಾಗಿ ಆಗಿದೆ, ನಾವು ವಿಮಾನಗಳನ್ನು ಕೊಟ್ಟಿದ್ದರೆ ಇದು ಆಗುತ್ತಿರಲಿಲ್ಲ ಎಂದು. ಅದಕ್ಕೆ ಅವರು ನನಗೆ, ನೀಗ ನೀವು ಸುಮ್ಮನಿರಿ ಎಂದು ಹೇಳಿದರು.

ಕರಣ್: ಅಂದರೆ, ಆವು ತಪ್ಪು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಾಗುವುದು ಬೇಡ ಎಂದು ಹೇಳಿದರಾ ಪ್ರಧಾನಿಗಳು.

ಮಲಿಕ್: ನನಗೆ ಅಷ್ಟು ಹೊತ್ತಿಗೆ ಗೊತ್ತಾಗಿ ಹೋಗಿತ್ತು, ಈ ಎಲ್ಲಾ ದೋಷ ಪಾಕಿಸ್ತಾನದ ಕಡೆಗೆ ತಿರುಗಿಸಬೇಕಾಗಿತ್ತು, ಆದ್ದರಿಂದ ನನಗೆ ಮಾತಾಡುವುದು ಬೇಡ ಎಂದು ಹೇಳಲಾಗಿತ್ತು.

ಕರಣ್; ಎಂದರೆ ಇದು ಸರಕಾರದ ಜಾಲೂ ಪಾಲಿಸಿ ಆಗಿತ್ತು, ಪಾಕಿಸ್ತಾನವನ್ನು ದೂಷಿಸಿದರೆ ನಮಗೆ ಕ್ರೆಡಿಟ್ ಸಿಗುತ್ತದೆ. ಅದರಿಂದ ನಮಗೆ ಚುನಾವಣೆಯಲ್ಲಿ ಸಹಾಯಕವಾಗುತ್ತದೆ.

ಮಲಿಕ್:  ನನಗೆ ಚೆನ್ನಾಗಿ ನೆನಪಿದೆ. ಅವರು ಆಗ ನ್ಯಾಷನಲ್ ಕಾರ್ಬೆಟ್ ಪಾರ್ಕಿನಲ್ಲಿ ಶೂಟಿಂಗ್ ಮಾಡಿಸುತ್ತಾ ಇದ್ದರು. ಅಲ್ಲಿ ಫೋನ್ ತಲುಪುತ್ತಿರಲಿಲ್ಲ. ಅದಕ್ಕೆ ಅವರು  ಹೊರಗದೆ ಬಂದು ಒಂದು ಡಾಭಾದಿಂದ ನನಗೆ ಫೋನ್ ಮಾಡಿದ್ದರು. ಸತ್ಪಾಲ್ ಏನಾಯ್ತು ಎಂದು ಕೇಳಿದರು, ನಾನು ಆಗಿರೋದನ್ನು ಹೇಳಿದೆ.  ನಾವು  ವಿಮಾನಗಳನ್ನು ನೀಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದಾಗ, ಅವರು, ಈಗ ನೀವು ಸುಮ್ಮನಿರಿ ಎಂದರು.

ಕರಣ್: ನೀವು ಯುಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನೀವು ಹೇಳಿದಿರಿ: ಸೈನಿಕರು ಸಾಗುವ ಮಾರ್ಗವನ್ನು ಸುರಕ್ಷಿತತೆ ದೃಷ್ಟಿಯಿಂದ ಪರಿಶೀಲಿಸಿರಲಿಲ್ಲ.  ಎಂದು. .

ಮಲಿಕ್: ಹೌದು, ಇಡೀ ಮಾರ್ಗದಲ್ಲಿ ಏಳೆಂಟು  ಲಿಂಕ್  ರೋಡುಗಳು ಸೇರಿಕೊಳ್ಳುತ್ತವೆ. ಮುಖ್ಯವಾಗಿ ಆ ಪ್ರದೇಶದಲ್ಲಿ. ಇಂಥ ಪ್ರತಿಯೊಂದು ಸೇರಿಕೆ ಜಾಗದಲ್ಲಿ ಭದ್ರತೆಯ ವ್ಯವಸ್ಥೆ ಇರಬೇಕು, ಅನಧಿಕೃತರಾದ ಯಾರೂ ಆ ಮಾರ್ಗವನ್ನು ಪ್ರವೇಶಿಸದಂತೆ ಕಾಯಬೇಕು. ಆದರೆ ಇಲ್ಲಿ ಯಾವುದೇ ಅಂಥ್ ಭದ್ರತ ವ್ಯವಸ್ಥೆ ಇರಲಿಲ್ಲ. ಇದು ಬಹುದೊಡ್ಡ ಭದ್ರತಾ ಲೋಪ, ಇದು ನಮ್ಮ ತಪ್ಪಿನಿಂದ ಆಗಿದ್ದು ಎಂದೂ ನಾನು ಅವರಿಗೆ ಹೇಳಿದೆ. ನಾನು ಮಾಹಿತಿಯ ಸರಣಿಯಲ್ಲಿ ಇರಲಿಲ್ಲ. ಸಿ ಆರ್ ಪಿ ಎಫ್ ತನ್ನ ಸ್ವಂತ ಹೊಣೆಯಲ್ಲಿ ಇದನ್ನು ಮಾಡುತ್ತಿತ್ತು.

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಕರಣ್: ನಿಮ್ಮ ಯುಟ್ಯೂಬ್ ಸಂದರ್ಶನದಲ್ಲಿ ಇದರಲ್ಲಿ ಅದಕ್ಷತೆ ಇತ್ತು, ಅಲಕ್ಷ್ಯ ಇತ್ತು ಎಂದಿದ್ದಿರಿ. ಯಾರ ಅದಕ್ಷತೆ, ಯಾರ ಅಲಕ್ಷ್ಯ?

ಮಲಿಕ್: ಗೃಹ ಇಲಾಖೆಯದು, ಮತ್ತು ಸಿ ಆರ್ ಪಿ ಎಫ್ ಇಬ್ಬರದೂ.

ಕರಣ್: ಎಂದರೆ ಇದು ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರ ಕಡೆಗೆ ದೂಷಣೆ ಹೋಗುತ್ತದೆ.  

ಮಲಿಕ್: ನಾನು ಗೃಹ ಸಚಿವನಾಗಿದ್ದರೆ ನನ್ನಿಂದಾದ ಈ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೆ.

ಕರಣ್:ನೀವು ಗೃಹ ಸಚಿವರಾಗಿದ್ದರೆ, ಇದಾದ ನಂತರ ನೀವು ರಾಜೀನಾಮೆ ಕೊಡುತ್ತಿದ್ದಿರಾ?

ಮಲಿಕ್: ಅದು ಒಬ್ಬೊಬ್ಬರದು ಒಂದೊAದು ವಿಧಾನ ಇರುತ್ತದೆ.

ಕರಣ್: ನೀವಾಗಿದ್ದರೆ ಏನು ಮಾಡುತ್ತಿದ್ದಿರಿ ಅದನ್ನು ಹೇಳಿ.

ಮಲಿಕ್: ನಾನಾಗಿದ್ದರೆ ಹುದ್ದೆಯನ್ನು ಬಿಟ್ಟುಬಿಡುತ್ತಿದ್ದೆ. ದೇಶದ ಜೀವನದಲ್ಲಿ ಅದೊ ಅತಿ ದೊಡ್ಡ ದುರಂತ. ನಮ್ಮ ಅದಕ್ಷತೆಯಿಂದಾಗಿ, ೪೦ ಸೈನಿಕರ ಅಮೂಲ್ಯವಾದ ಜೀವಗಳನ್ನು ಬಲಿ ಕೊಟ್ಟಹಾಗಾಯಿತು.

ಕರಣ್: ಪ್ರಧಾನ ಮಂತ್ರಿಯವರು ಮತ್ತು ದೋಗಲ್ ಸಾಹೇಬರು ಈ ಬಗ್ಗೆ ಏನೂ ಮಾತಾಡುವುದು ಬೇಡ ಎಂದು ನಿಮಗೆ ಹೇಳಿದ ನಂತರ, ಅವರು ಈ ಘಟನೆಗೆ ಪಾಕಿಸ್ತಾನವನ್ನು ದೂಷಿಸುವ ಆಲೋಚನೆಯನ್ನು ಮಾಡಿದ್ದರು. ಏಕೆಂದರೆ, ಹಾಗೆ ಮಾಡುವುದು ಅವರ ಚುನಾವಣೆಗೆ ಸಹಾಯಕವಾಗುವುದಿತ್ತು. ಪಾಕಿಸ್ತಾನ, ಅಥವಾ ಪಾಕಿಸ್ತಾನಿ ಉಗ್ರರು ಅಥವಾ ಸೈನ್ಯ ಇದಕ್ಕೆ ವಾಸ್ತವವಾಗಿ ಕಾರಣವೇ, ಅಥವಾ ನಾವು ಈ ರೀತಿ ಕತೆ ಕಟ್ಟುತ್ತಿದ್ದೇವೆಯೇ?

ಮಲಿಕ್:ಆಕ್ರಮಣಕಾರರಿಗೆ ಒದಗಿಸಲಾಗಿದ್ದ ಸುಮಾರು ೩೦೦ ಕಿಲೋ ಆರ್ ಡಿ ಎಕ್ಸ್ ಸ್ಫೋಟಕಗಳ ಪ್ರಮಾಣವನ್ನು ನೋಡುವಾಗ, ಅದನ್ನು ಆಂತರಿಕವಾಗಿ ಅಣಿಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಇದರ ವ್ಯವಸ್ಥೆಯನ್ನು ಮಾಡಿದ್ದು ಪಾಕಿಸ್ತಾನವೇ. ಆದರೆ, ನಾವು ನಾಚಿಕೆಪಟ್ಟುಕೊಳ್ಳಬೇಕಾದ ನಮ್ಮ ತಪ್ಪು ಎಂದರೆ, ಅಷ್ಟು ದೊಡ್ಡ ಮೊತ್ತದ ಆಸ್ಫೋಟಕಗಳನ್ನು ಹೊತ್ತ ಕಾರು ಎಂಟು ಹತ್ತು ಹನ್ನೆರಡು ದಿನಗಳಿಂದ ಕಾಶ್ಮೀರದಲ್ಲಿ ಹತ್ತಿರದ ಗ್ರಾಮಗಳಲ್ಲಿ ಓಡಾಡುತ್ತಲೇ ಇತ್ತು, ಆದರೂ ನಾವು ಅದನ್ನು ಪತ್ತೆ ಹಚ್ಚಲು, ತಡೆಯಲು ನಮ್ಮ ಕೈಯಲ್ಲಿ ಆಗಲಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ.

ಕರಣ್: ಇದು ಬಹು ದೊಡ್ಡ ಭದ್ರತಾ ಲೋಪ ಹಾಗಾದರೆ?

ಮಲಿಕ್: ಹಂಡ್ರೆಡ್ ಪರ್ಸೆಂಟ್. ಈ ಲೋಪ ಭಾರತದ ವ್ಯವಸ್ಥೆಯ ಲೋಪವಾಗಿದೆ, ನಾನು ರಾಜ್ಯದ ಮುಖ್ಯಸ್ಥನಾಗಿದ್ದರಿಂದ ನಾನೂ ಇದಕ್ಕೆ ಹೊಣೆಗಾರನಾಗಿದ್ದೇನೆ. ಎಲ್ಲರೂ ಅದರಲ್ಲಿ ವಿಫಲರಾಗಿದ್ದಾರೆ. ಗೃಹ ಸಚಿವರಿಂದ ಕೆಳಗಿನವರೆಗೆ.

ಕರಣ್: ಫುಲ್ವಾಮಾ ದುರಂತವನ್ನು ಮೋದಿಯವರು ಉದ್ದೇಶಪೂರ್ವಕವಾಗಿ ಚುನಾವಣೆಯ ಪ್ರಯೋಜನಕ್ಕಾಗಿ ಬಳಸುಕೊಂಡರು ಎನ್ನುತ್ತೀರಾ?

ಮಲಿಕ್:ಈ ಕುರಿತು ನಾನು ಏನೂ ಹೇಳುವುದಿಲ್ಲ.

Donate Janashakthi Media

Leave a Reply

Your email address will not be published. Required fields are marked *