ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 7 : ‘ಅದಾನಿ ಹಗರಣ’

ಅನುವಾದ : ಅಬ್ದುಲ್ ರಹಮಾನ್ ಪಾಷಾ

ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ.  ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ,ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ,  ಭಾಗ 4ರಲ್ಲಿ ‘ಅನುಚ್ಛೇದ ೩೭೦ರ ರದ್ದತಿ’,  ಭಾಗ 5ರಲ್ಲಿ ‘ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ’, ಭಾಗ 6ರಲ್ಲಿ ‘ಮೋದಿ ಬಹಳ ill informed, BBC’ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 7ರಲ್ಲಿ ‘ಅದಾನಿ ಹಗರಣ’ ಕುರಿತ ಸಂದರ್ಶನದ ಭಾಗ (ಇತರ ಭಾಗ ಮುಂದಿನ ಕೊನೆಯ ಕಂತಿನಲ್ಲಿ) 

ಕರಣ್: ಅದಾನಿ ಹಗರಣವು ನಮ್ಮ ದೇಶದಲ್ಲಿ ಯಾವತ್ತಿಗೂ ನಡೆಯದೇ ಇದ್ದ ಒಂದು ಅತ್ಯಂತ ಕೆಟ್ಟ ಹಗರಣವಾಗಿದೆ. ಇದರ ಬಗ್ಗೆ ನಮ್ಮ ಪ್ರಧಾನಿಯವರು ದಟ್ಟ ಮೌನವನ್ನು ವಹಿಸಿದ್ದಾರೆ. ಸರಕಾರವೂ ಮೌನವಾಗಿದೆ. ಪ್ರಧಾನಿಯಂತೂ ಸಂಪೂರ್ಣ ಮೌನವಾಗಿದ್ದಾರೆ. ಅವರು ಅದಾನಿ ಹಗರಣವನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ?

ಮಲಿಕ್: ಖಂಡಿತ ಇಲ್ಲ. ಇದೇ ಸ್ಥಾನದಲ್ಲಿ ನಾನಿದ್ದಿದ್ದರೆ ಮೊದಲ ದಿನವೇ ನಾನು ಕೈಬಿಡಿಸಿಕೊಂಡು ಬಿಡುತ್ತಿದ್ದೆ. ಬಹಳ ಡ್ಯಾಮೇಜ್ ಆಗಿದೆ. ಇದು ಕೆಳ ಮಟ್ಟದ ವರೆಗೆ ಹೋಗಿಬಿಟ್ಟಿದೆ. ನಾನು ಯುಟ್ಯೂಬ್‌ನಲ್ಲಿ ಒಂದು ಹಾಡನ್ನು ಕೇಳಿಸಿಕೊಳ್ಳುತ್ತಿದ್ದೆ. ಒಬ್ಬ ದಲಿತ ಹುಡುಗಿ, ಪ್ರಭಾ ಮೌರೆ ಅಂತಿರಬೇಕು ಆಕೆ ಹೆಸರು. ಆಕೆ ಹಾಡುತ್ತಿದ್ದಾಳೆ, ‘ನ ಎ ಚಾಯ್‌ವಾಲಾ ಹೈ ನ ಗಾಯ್‌ವಾಲಾ ಹೈ, ಅಂಬಾನಿ, ಅದಾನಿಕ ಎ ಲಗತಾ ಕ್ಯಾ ಸಾಲಾ ಹೈ, ಇಸ್‌ನೇ ದೇಶ್ ಬೇಚ್‌ಡಾಲಾ ಹೈ’, ಈ ಭಾಷೆ ಸ್ಥಳೀಯ ಉಪಭಾಷೆಯ ಮಟ್ಟಕ್ಕೆ ಹೋಗಿ ಬಿಟ್ಟಿದ್ದರೆ ಹಾನಿ ಆಗಿದೆಯೇ ಇಲ್ಲವೇ ಅಂತ ಯೋಚನೆ ಮಾಡಿ.

ಕರಣ್: ೧೯೮೯ರಲ್ಲಿ ವಿಪಿ ಸಿಂಗ್ ನೀವು ಅವರ ನಿಕಟ ಇದ್ದಿರಿ, ಅವರು ಬೋಫೋರ್ಸನ್ನು ಒಂದು ಚುನಾವಣಾ ಸಮಸ್ಯೆಯನ್ನಾಗಿ ಮಾಡಿದರು, ರಾಜೀವ್ ಗಾಂಧಿಯವರನ್ನು ಸೋಲಿಸಿದ್ದರು. ೨೦೨೪ರಲ್ಲಿ ಅದಾನಿಯವರು ಚುನಾವಣಾ ಸಮಸ್ಯೆ ಆಗುತ್ತಾರೆಯೇ?

ಮಲಿಕ್: ಖಂಡಿತ. ಇವರು ಈಗಲೇ ಈ ಹಗರಣವನ್ನು ಸುಧಾರಿಸದೇ ಇದ್ದರೆ ಅದಾನಿ ಇವರನ್ನು ಮುಗಿಸಿಬಿಡುತ್ತಾನೆ. ಎಷ್ಟೊಂದು ಕಡಿಮೆ ಸಂಖ್ಯೆ ಬರುತ್ತೆ ಇವರದು ಎಂದರೆ, ಇವರು ಇದ್ದರಾ ಎನ್ನುವುದನ್ನು ಗುರುತು ಹಿಡಿಯಲು ಸಾಧ್ಯ ಇರುವುದಿಲ್ಲ.

ಇದನ್ನೂ ಓದಿ : ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 6 : ‘ಮೋದಿ ಬಹಳ ill informed, BBC’

ಕರಣ್:  ಅಂದರೆ, ಪ್ರಧಾನಿಯವರು ಮೌನವಹಿಸುವ ಮೂಲಕ ಅಪಾಯದ ಜೊತೆ ಆಟವಾಡುತ್ತಿದ್ದಾರೆ ಅಂದ ಹಾಗಾಯಿತು.

ಮಲಿಕ್: ಅಫ‍್ ‌ಕೋರ್ಸ್, ಗೊತ್ತಿಲ್ಲ ಅವರಿಗೆ ಯಾರಾದರು ಸಲಹೆ ನೀಡುತ್ತಾರೋ ಇಲ್ಲವೋ, ನೀವು ಅಪಾಯದಲ್ಲಿದ್ದೀರಿ, ದಯವಿಟ್ಟು ನೀವು ಅದಾನಿಯ ಜೊತೆ ಕೈ ಬಿಡಿಸಿಕೊಳ್ಳಿ ಎಂದು ಯಾರೂ ಹೇಳಿಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ.

ಕರಣ್; ಪ್ರಧಾನಿಯವರು ಅವರ ಹತ್ತಿರದವರು.

ಮಲಿಕ್: ನನ್ನನ್ನು ಒಂದು ದಿನ ಕರೆಸಿಕೊಂಡರೆ ಹೀಗೆ ಹೀಗೆ ಮಾಡಬೇಕು ಎಂದು ಹೇಳಿಕೊಡುತ್ತೇನೆ.

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಕರಣ್: ರಾಹುಲ್ ಗಾಂಧಿ ಈ ೨೦ ಸಾವಿರ ಕೋಟಿಯ ಆರೋಪವನ್ನು ಹೊರಿಸುವ ಪ್ರಯತ್ನ ನಡೆಸಿದ್ದಾರಲ್ಲ,

ಮಲಿಕ್: ಅದರ ಉತ್ತರವನ್ನು ಕೊಡೋದಕ್ಕೂ ಇವರಿಗೆ ಆಗುತ್ತಿಲ್ಲ.

ಕರಣ್: ಇದು ಮೋದಿ ಸಾಹೇಬರ ತಪ್ಪು ಎಂದು ನಿಮಗೆ ಅನ್ನಿಸುತ್ತದೆಯೇ?

ಮಲಿಕ್: (ನಸುನಕ್ಕು) ಇದನ್ನು ನನ್ನ ಕೈಲಿ ಹೇಳಿಸ ಬೇಡಿ. ಜನರ ನಡುವೆ ಬಹಳ ಕೆಟ್ಟ ಕೆಟ್ಟ ಮಾತುಗಳು ನಡೆಯುತ್ತಿವೆ.

ಕರಣ್: ಇದರ ಅರ್ಥ ಜನ ಇದನ್ನು ನಂಬ ತೊಡಗಿದ್ದಾರೆ?

ಮಲಿಕ್: ಜನರು, ಅದಾನಿಯವರ ಹಣಕಾಸಿನ ಇನ್‌ವಾಲ್ವ್ಮೆಂಟಿನಲ್ಲಿ ಮೋದಿಯವರ ಆಸಕ್ತಿ ಇದೆ ಎಂದು ನಂಬತೊಡಗಿದ್ದಾರೆ.

ಕರಣ್: ಆಸಕ್ತಿ ಇದೆ ಎಂದ ಮೇಲೆ ಲಾಭನೂ ಇರಬಹುದು.

ಮಲಿಕ್: ಸಹಜವಾಗಿಯೇ.

ಕರಣ್: ಲಾಭ ಆಗುತ್ತೆ ಎನ್ನುವುದಾದರೆ ಇವರ ಬಳಿ ಹಣವೂ ಇದೆ ಅಂದ ಹಾಗಾಯ್ತು.

ಮಲಿಕ್: ಖಂಡಿತ.

ಕರಣ್: ಮೂರೂ ವಿಚಾರಗಳನ್ನು ನೀವು ಒಪ್ಪಿಕೊಂಡಿರಿ…

ಮಲಿಕ್: ನೋಡಿ, ರಾಜ್ಯ ಸರಕಾರ ಭ್ರಷ್ಟವಾಗಿದ್ದರೆ, ನಾನು ಬೆರಳುಗಳ ಮೇಲೆ ಎಣಿಸಬಲ್ಲೆ ಯಾರು ಯಾರು ಎಂದು, ಅಲ್ಲಿನ ಹಣ ಮುಖ್ಯ ಮಂತ್ರಿಗಳು ತಾವೇ ಎಲ್ಲವನ್ನು ತಿನ್ನುತ್ತಿಲ್ಲ. ಅದು ಇಲ್ಲಿಗೂ ಬರುತ್ತಿದೆ. ಇಲ್ಲಿಂದ ಇನ್ನೆಲ್ಲಿಗಾದರೂ ಹೋಗುತ್ತಿರಬಹುದು. ಅದಾನಿಗೂ ಹೋಗುತ್ತಾ ಇರಬಹುದು. ಜನ ಈ ತರ ಚರ್ಚೆ ಮಾಡ್ತಾ ಇದ್ದಾರೆ.

ಕರಣ್: ಈಗ ಮತ್ತೊಮ್ಮೆ ಭ್ರಷ್ಠಾಚಾರ ವಿಚಾರ ಮುಂದೆ ಬಂದಿದೆ, ಗೋವಾದ ವಿಚಾರ ಮಾತಾಡ್ತಾ ಇದ್ದಾಗ ಇದರ ಪ್ರಸ್ತಾಪ ಬಂತು, ನೀವಂದಿರಿ ಈ ಪ್ರಧಾನಿಗೆ ಭ್ರಷ್ಟಾದಾರದ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು, ಈಗ ಅದಾನಿಯ ವಿಚಾರದಲ್ಲಿ ಅನ್ನಿಸ್ತಾ ಇದೆ ಇವರಿಗೆ ಫಾಯ್ದೆ ಇದೆ.

ಮಲಿಕ್: ನೋಡಿ, ಸಂಸತ್ತಿನಲ್ಲಿ ಈ ಕುರಿತು ಒಂದೇ ಒಂದು ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿದೆಯೇ ಪ್ರಧಾನಿಯವರಿಗೆ? (ಎದೆಯನ್ನು ತಟ್ಟಿಕೊಳ್ಳುತ್ತಾ) ಈ ನಾನು ಒಬ್ಬನೇ ಎಂದು ಎದೆ ತಟ್ಟಿಕೊಳ್ಳುತ್ತಿದ್ದರು. ಸ್ವಾಮಿ, ಇದರಿಂದ ಕೆಲಸ ಆಗುವುದಿಲ್ಲ. ಆಗಿದ್ದೇನು ಅಂತ ಹೇಳಿಬಿಡಿ. ಅವರು ತಮ್ಮ ರಕ್ಷಣೆಯಲ್ಲಿ ಒಂದೇ ಒಂದು ಪದವನ್ನೂ ಉಚ್ಚರಿಸಲಿಲ್ಲ.

ಕರಣ್: ಇದನ್ನು ಕೇಳಿಸಿಕೊಂಡು ಅವರು ನಿಮ್ಮ ಮೇಲೆ ಬಹಳ ಸಿಟ್ಟಾಗುವರು. ನೆನಪಿರಲಿ.

ಮಲಿಕ್: ಏನು ಮಾಡಲು ಸಾಧ್ಯ. ನನ್ನನ್ನು ಹತ್ಯೆ ಮಾಡಿಸಲು ಸಾಧ್ಯವಿಲ್ಲ. ಟಫ್ಸ್ ನನ್ನವೂ ಹೆಚ್ಚಿವೆ. ನನ್ನ ಸಮುದಾಯವೂ ಬಹಳ ದೊಡ್ಡದಿದೆ. ಛೇಡಿಸಲು ಸಾಧ್ಯವಿಲ್ಲ. ಇವರದು ದುರ್ಗತಿ ಅಗಿಬಿಡುತ್ತದೆ. ಮತ್ತು ನನ್ನ ಸಮುದಾಯದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತಾಡಿದ ನಂತರ ನನ್ನ ಕುರಿತು ಎಷ್ಟೊಂದು ಅನುಕಂಪ ಇದೆ ಎಂದರೆ, ಇವರು ನನ್ನ ಸಹವಾಸಕ್ಕೇನಾದರೂ ಬಂದರೆ, ಇವರನ್ನು ನೋಡಿಕೊಳ್ಳುವರು, ಇವರು ಸಾರ್ವಜನಿಕ ಸಭೆಗಳನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೇ, ನನ್ನ ಹತ್ತಿರ ಏನೂ ಇಲ್ಲ ನಾನು ಒಬ್ಬ ಫಕೀರ್ ಆದ್ಮಿ. ಬಾಡಿಗೆ ಮನೆಯಲ್ಲಿದ್ದೇನೆ. ಸ್ವತ್ತನ್ನು ನಾನು ಗಳಿಸಿಲ್ಲ. ನಾನು ರಾಜಕರಣದಲ್ಲಿ ಬಂದು ತಂದೆ, ತಾತಂದಿರ ಜಮೀನನ್ನೂ ಮಾರಿಕೊಂಡುಬಿಟ್ಟೆ.

Donate Janashakthi Media

Leave a Reply

Your email address will not be published. Required fields are marked *