ಮಹಾರಾಷ್ಟ್ರ ರಾಜ್ಯ ಕಿಸಾನ್‍ಸಭಾ  ಕಾರ್ಯದರ್ಶಿಗೆ ಸಂಘಿಗಳ ಸಾವಿನ ಬೆದರಿಕೆ

ದಿಲ್ಲಿಯ  ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳಿಸುವ ಹುನ್ನಾರ

ದೆಹಲಿ ;ಜ.30: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತಂದಿರುವ ರೈತ-ವಿರೋಧಿ ಕಾಯ್ದೆಗಳ ವಿರುದ್ಧ ದೇಶದ ರಾಜಧಾನಿಯ ಗಡಿಗಳಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ ಎಂದು ಅಖಿಲ ಭಾರತ ಕಿಸಾನ್‍ ಸಭಾ (ಎ.ಐ.ಕೆ.ಎಸ್‍.) ಖಂಡಿಸಿದೆ. ಅತ್ಯಂತ ಆಕ್ರೋಶಕಾರೀ ರೀತಿಯಲ್ಲಿ ಕಿಸಾನ್‍ ಸಭಾದ ಮುಖಂಡರ ಮೇಲೆ ಸಾವಿನ ಬೆದರಿಕೆಗಳನ್ನು ಹಾಕುತ್ತಿದೆ. ಎ.ಐ.ಕೆ.ಎಸ್‍.ನ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಡಾ. ಅಜಿತ್‍ ನವಲೆಯವರನ್ನು ಸಾಯಿಸುವ ಬೆದರಿಕೆ ಹಾಕಿರುವುದನ್ನು ಅದು ಖಂಡಿಸಿದೆ. ಬಿಜೆಪಿ ಸರಕಾರದ ವಿರುದ್ಧ ಹೋರಾಟ ಮುಂದುವರೆಸಿದರೆ ಅವರನ್ನು ಸಾಯಿಸುವುದಾಗಿ  ಸಂಘಿ ಸೈಬರ್‍ ಗೂಂಡಾಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎ.ಐ.ಕೆ.ಎಸ್‍. ಆಗ್ರಹಿಸಿದೆ. ಇಂತಹ ಹೇಡಿ ಬೆದರಿಕೆಗಳಿಂದಾಗಲೀ, ಪೋಲೀಸ್‍ ಕ್ರಮದ ಬೆದರಿಕೆಗಳಿಂದಾಗಲೀ ಯಾವ ರೈತ ಮುಖಂಡರನ್ನೂ ಮಣಿಸುವುದು ಸಾಧ್ಯವಿಲ್ಲ ಎಂದು ಎ.ಐ.ಕೆ.ಎಸ್‍. ಹೇಳಿದೆ.

ಸಿಂಘು ಗಡಿಯಲ್ಲಿ ಆಳುವ ಪಕ್ಷವನ್ನು ಬೆಂಬಲಿಸುವ ಗೂಂಡಾಗಳು ಹಿಂಸಾಚಾರ ಸಂಘಟಿಸಲು ಯೋಜಿಸುತ್ತಿದ್ದಾರೆ. ಉತ್ತರಪ್ರದೇಶ ಮತ್ತು ಹರ್ಯಾಣ ಪೊಲಿಸ್‍ ಶಾಮೀಲಿನೊಂದಿಗೆ ಗಾಜೀಪುರ, ಪಲ್ವಲ್ ಮತ್ತು ಶಾಹಜಹಾನ್‍ ಪುರದಲ್ಲಿ ಹಿಂಸಾಚಾರಿ ಗುಂಪುಗಳನ್ನು ಒಟ್ಟುಗೂಡಿಸಿದ್ದಾರೆ ಎಂಬುದನ್ನು ತಾನು ಗಮನಿಸಿರುವದಾಗಿ ಹೇಳಿರುವ ಎ.ಐ.ಕೆ.ಎಸ್‍., ಇದು ನಾಗರಿಕರ ನಡುವೆ ಕಲಹದ ಸನ್ನಿವೇಶವನ್ನು ಕಲ್ಪಿಸುವುದಕ್ಕಾಗಿ ಎಂದು ಹೇಳಿದೆ. ಬಿಜೆಪಿ ಸರಕಾರ ಮತ್ತು ಪೋಲೀಸ್‍ ಸಮಾಜ-ವಿರೋಧಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಗಣತಂತ್ರ ದಿನದಂದು ಹಿಂಸಾಚಾರವನ್ನು ಪ್ರಚೋದಿಸಲು ಕಾರಣರಾಗಿದ್ದಾರೆ. ರೈತ ಚಳುವಳಿಯ ಹೆಸರುಗೆಡಿಸುವ ಈ ಆಟವನ್ನು ಜನರು ಈಗ ಅರಿತುಕೊಂಡಿದ್ದಾರೆ ಎಂದು ಎ.ಐ.ಕೆ.ಎಸ್‍. ಜನವರಿ 29ರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ  ಸರಕಾರ ಮತ್ತು ಪಾರ್ಪೊರೇಟ್‍ ಮಾಧ್ಯಮಗಳು ದ್ವೇಷ ಹುಟ್ಟಿಸುವ ಪ್ರಚಾರ ಮತ್ತು ಇಂತಹ ಹೇಡಿತನದ ಕೃತ್ಯಗಳನ್ನು ನಡೆಸಿದರೂ ರೈತರ ಹೋರಾಟದ ಬಲ ಹೆಚ್ಚುತ್ತಿರುವುದನ್ನು ಕಂಡು ಆಳುವ ವರ್ಗಗಳು ತಬ್ಬಿಬ್ಬಾಗಿವೆ. ಇಂತಹ ಹಿಂಸಾಚಾರಿ ಗ್ಯಾಂಗ್‍ ಗಳು ಮತ್ತು ಅವರ ಯಜಮಾನರುಗಳನ್ನು ಪ್ರತ್ಯೇಕಿಸಲು ಹಾಗೂ ರೈತರನ್ನು ಬೆಂಬಲಿಸಲು ಮುಂದೆ ಬರಬೇಕು ಎಂದು ಪ್ರಜಾಪ್ರಭುತ್ವವಾದೀ ವಿಭಾಗಗಳಿಗೆ ಎ.ಐ.ಕೆ.ಎಸ್‍.ನ ಅಧ್ಯಕ್ಷ ಡಾ.ಅಶೋಕ ಧವಳೆ ಮತ್ತು ಪ್ರಧಾನ ಕಾರ್ಯದರ್ಶಿ ಹನ್ನನ್‍ ಮೊಲ್ಲ  ಈ ಹೇಳಿಕೆಯ ಮೂಲಕ ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *