ದಲಿತ ಕುಟುಂಬವನ್ನು ಕಂಬಕ್ಕೆ ಕಟ್ಟಿ ಹಾಕಿ, ಕ್ರೂರವಾಗಿ ಥಳಿಸಿದ ಗ್ರಾಮಸ್ಥರು

ಚಂದ್ರಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವಾನಿ (ಖುರ್ದ್) ಗ್ರಾಮದಲ್ಲಿ ಎರಡು ದಲಿತ ಕುಟುಂಬಗಳ ಏಳು ಮಂದಿಯನ್ನು ಮರದ ಕಂಬಗಳಿಗೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ಅವರನ್ನು ರಕ್ಷಿಸುವವರೆಗೂ ಊರಿನ ಗ್ರಾಮಸ್ಥರು ಥಳಿಸುತ್ತಿದ್ದರು. ಕಂಬಗಳಿಗೆ ಕಟ್ಟಿದ್ದ ಕೈಗಳನ್ನು ಬಿಚ್ಚದೆ ಹಾಗೆ ನಿಲ್ಲಿಸಿದ್ದರು. ಶನಿವಾರ ಇಡೀ ರಾತ್ರಿ ಹಾಗೂ ಭಾನುವಾರ ಸಂಜೆಯವರೆಗೆ ಇದೇ ಪರಿಸ್ಥಿತಿಯಲ್ಲಿ ಈ ಕುಟುಂಬಗಳು ಇದ್ದವು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಏಳು ಮಂದಿಯಲ್ಲಿ ಐವರು, ಏಕನಾಥ ಹುಕ್, 75, ಶಿವರಾಜ್ ಕಾಂಬಳೆ, 70, ಪ್ರಯಾಗ್‌ಬೈ ಹುಕ್, 65, ಶಾಂತಾಬಾಯಿ ಕಾಂಬಳೆ, 65, ಪಂಚಫುಲಾ ಹುಕ್, 55, ಸಾಹೇಬ್ರಾವ್ ಹುಕ್, 45, ಮತ್ತು ಧಮ್ಮಶಿಲಾ ಹುಕ್, 38 – ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸೇರಿಸಲಾಗಿದೆ ಚಂದ್ರಾಪುರ ಆಸ್ಪತ್ರೆಗೆ ಸೇರಿಸಲಾಗಿದೆ.

ಭಾನುವಾರ ಸಂಜೆಯವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಮಾಹಿತಿ ಲಭ್ಯವಾದ ಮೇಲೂ ಪೊಲೀಸರು ಯಾಕೆ ಮೌನ ವಹಿಸಿದ್ದರು. ತಡವಾಗಿ ಯಾಕೆ ಆಗಮಿಸಿದರೂ ಎಂದು ಹುಕ್ ಕುಟುಂಬದ ಸದಸ್ಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳಿಂದ ಕಾಂಬಳೆ ಮತ್ತು ಹುಕ್ ಕುಟುಂಬಗಳ ವಿರುದ್ಧ ಊರಿನ ಜನ ವಿನಾಕಾರಣ ಆರೋಪ ಮಾಟುತ್ತಿದ್ದರು. ಹಿಂಸೆ ಮಾಡುವುದು, ಅವಮಾನಿಸುವ ಕೆಲಸಗಳನ್ನು ಊರಿನ ಗ್ರಾಮಸ್ಥರು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೆಲ್ಲ ಆ ಕುಟುಂಬಗಳು ಸಹಿಸಿಕೊಂಡು ಗಲಾಟೆಗಳ ಗೊಡವೆಗೆ ಹೋಗದೆ ಮೌನವಾಗಿದ್ದರು.

ಇದನ್ನೆ ಲಾಭವಾಗಿಸಿಕೊಂಡ ಊರಿನ‌ ಮೇಲ್ಜಾತಿಯ ಕೆಲ ಹಿರಿಯರು ಈ ಕುಟುಂಬಗಳ ಮೇಲೆ ಮಾಟ ಮಂತ್ರ ಮಾಟುತ್ತಿದ್ದಾರೆ ಎಂದು ಆರೋಪಿಸಿ ಪಂಚಾಯತಿಯನ್ನು ಸೇರಿಸಿದ್ದರಂತೆ. ಪಂಚಾಯತಿಗೆ ಬರುವಂತೆ ಊರಿನ ಜನರ ಮುಂದು ತಪ್ಪು ಒಪ್ಪಿಕೊಳ್ಳುವಂತೆ ಈ ಕುಟುಂಬಗಳ ಮೇಲೆ ಒತ್ತಡ ಹಾಕಿದ್ದರಂತೆ.

“ಗ್ರಾಮಸ್ಥರು ಶುಕ್ರವಾರ ರಾತ್ರಿ ಸಭೆ ನಡೆಸಿದರು ಮತ್ತು ನಮ್ಮ ವಿರುದ್ಧ ಯೋಜನೆ ರೂಪಿಸಿದರು. ಒಂದು ಗುಂಪಿನವರು ಶನಿವಾರ ಬೆಳಿಗ್ಗೆ ನಮ್ಮ ಮನೆಗೆ ತೆರಳಿದರು, ಹಳ್ಳಿಯ ಮುಖ್ಯ ಚೌಕವನ್ನು ತಲುಪಲು ನಮ್ಮನ್ನು ಕೇಳಿದರು. ನಾವು ಯಾವ ತಪ್ಪು ಮಾಡಿಲ್ಲ ಆದರೂ ಇಷ್ಟೊಂದು ಹಿಂಸೆಯಾಕೆ ಕೊಡುತ್ತೀರಿ ಎಂದು ನಾವು ಪ್ರತಿಭಟಿಸಿದೆವು. ತಪ್ಪು ಮಾಡಿಲ್ಲ ಎನ್ನುವುದಾದರೆ ಊರ ಜನರ ಮುಂದೆ ಬಂದು ಹೇಳಿ ಎಂದು ಒತ್ತಡ ಹೇರಿದರು. ನಾವು ತಪ್ಪು ಮಾಡದಿದ್ದ ಕಾರಣ ಊರಿನ ಜನ ಸೇರಿದ್ದ ಚೌಕಕ್ಕೆ ಹೋಗುವಂತೆ. ನಮ್ಮ ಕುಟುಂಬಗಳ ಮೇಲೆ ಹಲ್ಲೆ ನಡೆಸಿದರು. ಮರಕ್ಕೆ ಕಟ್ಟಿ ಹಾಕಿದ್ದರು ಎಂದು ಸಂತ್ರಸ್ತೆ ಪ್ರಯಾಗಬಾಯಿ ಹುಕ್ ಘಟನೆಯನ್ನು ವಿವರಿಸಿದ್ದಾರೆ.

ಅಫ್ಘಾನಿಸ್ತಾನ ಸ್ಥಾನದಲ್ಲಿ ನಡೆದ ಹಿಂಸೆಗೆ ಮರುಕ ಪಡುವ ನಾವು ನಮ್ಮ ಪ್ರದೇಶಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿ ನಡೆಯುವ ಅನ್ಯಾಯಗಳನ್ನು ಪ್ರಶ್ನಿಸುವುದೆ ಇಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದ ದಲಿತ ಸಮುದಾಯದ ಹುಕ್ ಮತ್ತು ಕಾಂಬಳೆ ಸಮುದಾಯಗಳ ಮೇಲೆ ನಡೆದ ಹಲ್ಲೆ ಖಂಡನೀಯ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಜನಪರ ಸಂಘಟನೆಗಳು ಒತ್ತಾಯಿಸಿವೆ.

Donate Janashakthi Media

Leave a Reply

Your email address will not be published. Required fields are marked *