ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್: ಕೋರ್ಟ್‌ಗೆ ಹಾಜರಾಗದಿರಲು ನಿರ್ಧಾರ

ನವಲಗುಂದ: ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಸರ್ಕಾರ ಹಿಂದಕ್ಕೆ ಪಡೆದಿದ್ದರೂ ಸಹ ಹೋರಾಟಗಾರರಿಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು ಸಮನ್ಸ್ ಅನ್ವಯ ಇಂದು ಹೋರಾಟಗಾರರು ವಿಚಾರಣೆಗೆ ಕೋರ್ಟ್​ನಲ್ಲಿ ಹಾಜರಾಗಬೇಕಿತ್ತು. ಆದರೆ ಅವರು ಯಾರೂ ಕೋರ್ಟ್​ಗೆ ಹಾಜರಾಗದೆ, ದೂರವುಳಿದಿದ್ದಾರೆ.

ಕುಡಿಯುವ ನೀರಿಗಾಗಿ ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡ ರೈತರ 2015ರಲ್ಲಿ ನಡೆದಿದ್ದ ಮಹದಾಯಿ ಹೋರಾಟದ ಸಂದರ್ಭದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ 13ಕ್ಕೂ ಹೆಚ್ಚು ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿತ್ತು. ಆ ವೇಳೆ 187 ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿಯೇ ಹಿಂಪಡೆಯಲಾಗಿದೆ. ಆದರೆ, ಕೆಲವು  ಹೋರಾಟಗಾರರಿಗೆ ನವಲಗುಂದದ ಹಿರಿಯ ದಿವಾಣಿ ನ್ಯಾಯಾಲಯದಿಂದ ಸಮನ್ಸ್ ಬಂದಿದ್ದು, ಡಿ.7ರಂದು ತಪ್ಪದೇ ಹಾಜರಾಗುವಂತೆ ತಿಳಿಸಲಾಗಿದೆ.

ʻನಾವು ಕೋರ್ಟ್‌‌ಗೆ ಹಾಜರಾಗದಿರಲು ನಿರ್ಧರಿಸಿದ್ದೇವೆʼ ಎಂದು ಪ್ರಕರಣದ ಪ್ರಮುಖ ಆರೋಪಿ, ಮಹದಾಯಿ ಹೋರಾಟಗಾರ ಲೋಕನಾಥ ಹೆಬಸೂರ ಪ್ರತಿಕ್ರಿಯೆ ನೀಡಿದ್ದಾರೆ.

ಸಮನ್ಸ್ ಜಾರಿ ಮಾಡಿರುವ ಬಗ್ಗೆ ನಿನ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸಮನ್ಸ್​ ನೀಡಿಕೆಗೆ ನೈಜ ಕಾರಣ ಏನು ಎಂಬುದು ಇದೀಗ ಬಯಲಾಗಿದೆ. ಈ ಮಧ್ಯೆ, ಸಮನ್ಸ್ ಅನ್ವಯ ಇಂದು ಹೋರಾಟಗಾರರು ವಿಚಾರಣೆಗೆ ಕೋರ್ಟ್​ನಲ್ಲಿ ಹಾಜರಾಗಬೇಕಿತ್ತು. ಈ ಹಿಂದೆ ಸರ್ಕಾರವು 56 ಕೇಸ್‌ಗಳ ಪೈಕಿ 51 ಮಾತ್ರವೇ ವಾಪಸ್ ಪಡೆದಿತ್ತು. ಉಳಿದ ಪ್ರಕರಣಗಳ ಬಗ್ಗೆ ಹಾಗೆ ಉಳಿದಿವೆ. ಈ ಐದು ಕೇಸುಗಳು ವಾಪಸ್ಸು ಪಡೆಯದೇ ಹಾಗೆಯೇ ಉಳಿದು ಬಿಟ್ಟಿವೆ. ಅವುಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಗೆ ಸಂಬಂಧಿಸಿದಂತೆ ಈಗ ಸಮನ್ಸ್ ಬಂದಿವೆ.

ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಶಿದ್ದಪ್ಪ ಮುಪೈನವರ ಸಮನ್ಸ್‌ ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಪರಿಶೀಲಿಸಿ, ರೈತರ ರಕ್ಷಣೆ ಧಾವಿಸಬೇಕು ರೈತರಿಗೆ ಅನ್ಯಾಯವಾಗಬಾರದು. ಹಿಂದಿನ ಸರ್ಕಾರ ಹಿಂಪಡೆದ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆʼ ಎಂದು ಎಚ್ಚರಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *