ಮದ್ಯ ಸೇವನೆಯಿಂದ ಸಾವನ್ನಪ್ಪಿದರೆ ಯಾವುದೇ ವಿಮಾ ಪರಿಹಾರ ಇಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ವಿಪರೀತ ಮದ್ಯಪಾನ ಸೇವಿಸಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರಕ್ಕೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮೃತ ಚೌಕಿದಾರ್ ಓಂಪ್ರಕಾಶ್ ಅವರ ಕುಟುಂಬ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಂ. ಶಾಂತನಗೌಡರ್ ಮತ್ತು ವಿನೀತ್ ಸರನ್ ಅವರ ನ್ಯಾಯಪೀಠವು ರಾಜ್ಯ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಗ್ರಾಹಕ ವೇದಿಕೆಯ ಏಕಕಾಲದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಿಮಾಚಲ ಪ್ರದೇಶದ ಕುಟುಂಬವೊಂದರ ಮನವಿಯನ್ನು ವಜಾ ಮಾಡಿದೆ.

ಮದ್ಯ ಸೇವನೆಯಿಂದಾಗಿ ಸತ್ತರೆ ಆ ಸಾವು ಆಕಸ್ಮಿಕವಲ್ಲ, ಅಪಘಾತದಿಂದಾಗಿ ಸಾವನ್ನಪ್ಪಿದ್ದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ ಆತ ಕಾನೂನು ಬದ್ದವಾಗಿ ವಿಮೆಗೆ ಜವಾಬ್ದಾರನಾಗುತ್ತಾನೆ. ಹಾಗಾಗಿ ಮದ್ಯ ಸೇವನೆಯಿಂದಾಗಿ ಸತ್ತರೆ ನಷ್ಟವನ್ನು ತುಂಬಲು ಶಾಸನಬದ್ದ ಬಾಧ್ಯತೆಗಳಿರುವುದಿಲ್ಲ ಎಂದು ಕೋರ್ಟ್ ವಿವರಣೆಯನ್ನು ನೀಡಿದೆ.

Donate Janashakthi Media

Leave a Reply

Your email address will not be published. Required fields are marked *