ಲೋಕಸಭಾ ಚುನಾವಣೆಯ ಮತಗಟ್ಟೆವಾರು  ಮತದಾನದ ಅಂಕಿ ಅಂಶವನ್ನು ಪ್ರಕಟಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಣೆ

ನವದೆಹಲಿ: ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲೋಕಸಭಾ ಚುನಾವಣೆಯ ಮತಗಟ್ಟೆವಾರು  ಮತದಾನದ ಅಂಕಿ ಅಂಶವನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಚುನಾವಣೆ

ಈ ಕಾರ್ಯಕ್ಕಾಗಿ ಸಿಬ್ಬಂದಿ ನೇಮಕ ಮಾಡುವುದು ಚುನಾವಣಾ ಆಯೋಗಕ್ಕೆ ದುಸ್ತರವಾಗಲಿದೆ. ಐದು ಹಂತಗಳ ಮತದಾನ ಈಗಾಗಲೇ ನಡೆದಿದ್ದು, ಇನ್ನು ಎರಡು ಹಂತಗಳ ಮತದಾನ ಬಾಕಿ ಇರುವುದದರಿಂದ ಆ ರೀತಿಯ ನಿರ್ದೇಶನ ನೀಡಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ರಜಾ ಕಾಲದ ವಿಭಾಗೀಯ ಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸಾಮಾನ್ಯ ಕಲಾಪದ ಅವಧಿಗೆ ಮುಂದೂಡಿದೆ.

ಇದನ್ನು ಓದಿ : ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಹೋಗುತ್ತಿದ್ದವರು-ಹೋಗಿದ್ದು ಮಸಣಕ್ಕೆ

ಮತದಾನ ನಡೆದು 48 ಗಂಟೆಗಳೊಳಗಾಗಿ ಮತಗಟ್ಟೆವಾರು ಫಾರ್ಮ್ 17ಸಿ ಅಂಕಿ ಅಂಶವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆ ಆದೇಶ ನೀಡಿದೆ.

ಮೇ 17ರಂದು ಎಡಿಆರ್‌ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಕುರಿತಂತೆ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಎಲ್ಲ ಮತಗಟ್ಟೆಗಳ ಮತದಾನದ ನಂತರ ಕೂಡಲೇ ಫಾರ್ಮ್ 17ಸಿ(ಮತದಾನದ ದಾಖಲು) ಪ್ರತಿಗಳ ಸ್ಕ್ಯಾನ್ ಕಾಪಿಯನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಎಡಿಆರ್ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ಇದನ್ನು ನೋಡಿ : ಪ್ರಜ್ವಲ್ ರೇವಣ್ಣ ಲೈಂಗಿಕ ಹತ್ಯಾಕಾಂಡ ಗೊತ್ತಿದ್ದು ಬಿಜೆಪಿ ಯಾಕೆ ಟಿಕೆಟ್ ನೀಡಿತು? ವಿಡಿಯೋ ಹಂಚಿದವರಿಗೂ ಶಿಕ್ಷೆಯಾಗಲಿ

Donate Janashakthi Media

Leave a Reply

Your email address will not be published. Required fields are marked *