ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸಿ ; ಫೈರ್ ಸಂಸ್ಥೆಯಿಂದ ಸಿಎಂಗೆ ಮನವಿ

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಯೂ ನಡೆದಿದ್ದು, ಚಿತ್ರರಂಗದ ಮಹಿಳೆಯರ ರಕ್ಷಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಫೈರ್ ಸಂಸ್ಥೆ ಸದಸ್ಯರು ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ್ದಾರೆ. ಹೇಮಾ

ಫೈರ್ ಸಂಸ್ಥೆಯ ಸದಸ್ಯರು ನಟ ಚೇತನ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ರನ್ನು ಭೇಟಿಯಾಗಿ ಕೇರಳದಲ್ಲಿ ಹೇಮಾ ಸಮಿತಿಯಂತೆ ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚಿಸುವಂತೆ ಮನವಿ ಮಾಡಿದರು. 150ಕ್ಕೂ ಹೆಚ್ಚು ನಟ-ನಟಿಯರು, ತಂತ್ರಜ್ಞರು, ನಿರ್ದೇಶಕರು, ಸಾಹಿತಿಗಳ ಸಹಿಯುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಕನ್ನಡ ಚಿತ್ರರಂಗದಲ್ಲಿಯೂ ಸಮಿತಿ ರಚನೆ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರೋಣ. ಶೀಘ್ರದಲ್ಲಿಯೇ ಈ ಬಗ್ಗೆ ಚರ್ಚೆಗೆ ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಬ್ಬಗಳ ಸೀಸನ್ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ; ಖಾಸಗಿ ಟಿಕೆಟ್ ದರ ಏರಿಕೆ ಶಾಕ್!

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಜಸ್ಟಿಸ್ ಹೇಮಾ ನೇತೃತ್ವದ ಸಮಿತಿ ವರದಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.  ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಕಲಾವಿದರ ಸಂಘದ ಅಧ್ಯಕ್ಷರಿಂದ ಹಿಡಿದು, ಪದದಹಿಕಾರಿಗಳವರೆಗೂ ರಾಜೀನಾಮೆ ಕೊಡುತ್ತಿದ್ದಾರೆ ಎಂಬುದನ್ನು ನಿಯೋಗ ಪ್ರಸ್ಥಾಪಿಸಿದೆ.

ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿಯೂ ಮಹಿಳೆಯರು ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡುವ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ, ಮಹಿಳೆಯರ ಸುರಕ್ಷತೆ ನಿಟ್ಟಿನಲ್ಲಿ ಸಮಿತಿ ರಚಿಸಬೇಕು ಎಂಬುದು ಫೈರ್ ಸಂಸ್ಥೆ ಆಗ್ರಹಿಸಿದೆ. ಈ ವೇಳೆ ನಟ ಚೇತನ್, ನೀತು ಶೆಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಏನಿದು ಹೇಮಾ ಸಮಿತಿ ಶಿಫಾರಸ್ಸು? ಈ ಹಿಂದೆ ಬಂದ ಶಿಫಾರಸ್ಸುಗಳು ಏನಾದವು?? Janashakthi Media

Donate Janashakthi Media

Leave a Reply

Your email address will not be published. Required fields are marked *