ಎಡಪಂಥೀಯ ಗೇಬ್ರಿಯಲ್ ಬೋರಿಕ್ ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷ

ಸ್ಯಾನಿಟಿಗೋ: ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೇಬ್ರಿಯಲ್ ಬೋರಿಕ್ ಚಿಲಿ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿ ಗಳಿಸಿದ್ದಾರೆ.

35 ವರ್ಷದ ಎಡಪಂಥೀಯ ಯುವಕ ಗೇಬ್ರಿಯಲ್ ಬೊರಿಕ್ ಆಯ್ಕೆಗೆ ವ್ಯಾಪಕ ಶುಭಾಶಯಗಳು ಹರಿದು ಬರುತ್ತಿವೆ. ಅವರು ಬಲಪಂಥೀಯನಾದ ಜೋಸ್ ಆಂಟೊನಿಯೊ ಕಾಸ್ಟ್‌ ಅವರನ್ನು ಸೋಲಿಸಿದ್ದಾರೆ.  ಗೇಬ್ರಿಯಲ್ ಶೇ.56ರಷ್ಟು ಮತಗಳನ್ನು ಪಡೆದುಕೊಂಡು ಅಧಿಕಾರದ ಗದ್ದುಗೆ ಏರಿದ್ದಾರೆ. ಗೇಬ್ರಿಯಲ್ ಅತ್ಯಂತ ಕಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ.

ಜೋಸ್ ಆಂಟೋನಿಯೊ ಕಾಸ್ಟ್ ವಿರುದ್ಧ ಗೆಲುವು ಸಾಧಿಸಿರುವ ಗೇಬ್ರಿಯಲ್ ಬೋರಿಕ್ ಅವರು 2022ರ ಮಾರ್ಚ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿಂದಿನ ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿರುವ ಗೇಬ್ರಿಯಲ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇತಿಹಾಸವು ನಮ್ಮಿಂದ ಪ್ರಾರಂಭವಾಗುವುದಿಲ್ಲ ಎಂದು ನನಗೆ ತಿಳಿದಿದೆ” ಎಂದಿರುವ ಗೇಬ್ರಿಯಲ್, ನಾನು ವಿವಿಧ ಸ್ಥಳಗಳಲ್ಲಿ ದಣಿವರಿಯದೆ ಸಾಮಾಜಿಕ ನ್ಯಾಯ ಹುಡುಕುತ್ತಿರುವವರ ದೀರ್ಘ ಪಥದ ವಾರಸುದಾರನಂತೆ ಭಾಸವಾಗುತ್ತಿದೆ ಎಂದು ಹೇಳುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಎಂಡಪಂಥೀಯ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.

ಇದನ್ನೂ ಓದಿ : ಹೊಂಡುರಸ್ ನಲ್ಲಿ ಮಹಿಳಾ ಎಡ ಅಧ್ಯಕ್ಷರ ಆಯ್ಕೆ: ಲ್ಯಾಟಿನ್ ಅಮೆರಿಕದಲ್ಲಿ ಮತ್ತೆ ಎಳೆಗೆಂಪು ಅಲೆ ಬೀಸುತ್ತಿದೆ

ಗೇಬ್ರಿಯಲ್ ಬೋರಿಕ್‌ ಕಿರು ಪರಿಚಯ :  ಬೋರಿಕ್ 1986ರಲ್ಲಿ ಪಂಟಾ ಅರೆನಾಸ್‍ನಲ್ಲಿ ಜನಿಸಿದ್ದು,  2011ರ ಬಳಿಕ ಬೊರಿಕ್ ಅವರು ಯಾವಾಗಲೂ ಪ್ರತಿಭಟನೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಬೋರಿಕ್ ಶಿಕ್ಷಣ ವ್ಯವಸ್ಥೆಯ ದನಿಯಾಗಿದ್ದರು. ಈ ಮೂಲಕ ಹಲವು ಯುವ ನಾಯಕರನ್ನು ಹುಟ್ಟಿಹಾಕಿತು. ಅವರೆಲ್ಲರೂ ಬೋರಿಕ್ ಗೆ ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿದರು.

ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸದ ಗೇಬ್ರಿಯಲ್ ಬೋರಿಕ್ 2013ರಲ್ಲಿ ಚಿಲಿಯ  ಚುನಾವಣೆಯಲ್ಲಿ ಜಯಶೀಲರಾದರು ಮತ್ತು ಎರಡು ಅವಧಿಗೆ ಉಪನಾಯಕರಾಗಿ ಸೇವೆ ಸಲ್ಲಿಸಿದರು.  ಇಗ ನಡೆದ ಚುನಾವಣೆಯಲ್ಲಿ 56% ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸವನ್ನು ನಿರ್ಮಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *