ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಲೆಕ್ಚರ್​​ ಬಂಧನ

ಉತ್ತರ ಪ್ರದೇಶ: ರಾಜ್ಯದ ಪ್ರಯಾಗ್‌ರಾಜ್‌ನಲ್ಲಿ ಅನೇಕ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ‌ ಕಾಲೇಜು ಲೆಕ್ಚರರ್​​ನನ್ನು ಬಂಧಿಸಿದ್ದಾರೆ. ಬಂಧಿತ ಪ್ರಾಧ್ಯಪಕನನ್ನು ರಜನೀಶ್​ ಕುಮಾರ್​ (50) ಎಂದು ಗುರುತಿಸಲಾಗಿದೆ.

ಈತ ಡಿಗ್ರಿ ಕಾಲೇಜಿನಲ್ಲಿ ಭೂಗೋಳಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೂ,  ಆತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಮಾರು 72 ಗಂಟೆಗಳ ಕಾಲ ಆತ ತಲೆಮರೆಸಿಕೊಂಡಿದ್ದ. ಅಲ್ಲದೆ, ನಿರೀಕ್ಷಣಾ ಜಾಮೀನು ಪಡೆಯಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿರುವಾಗಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ತಾನು ಎಷ್ಟು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದೇನೆಂಬುದು ನನಗೆ ನೆನಪಿಲ್ಲ ಎಂದು ಆರೋಪಿ ರಜನೀಶ್​ ನೀಡಿರುವ ಹೇಳಿಕೆ ಪೊಲೀಸರನ್ನೇ ದಂಗಬಡಿಸಿದೆ. ಪೊಲೀಸರ ಶೋಧ ಕಾರ್ಯಾಚರಣೆ ಸಮಯದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಲುಗೆಯಿಂದ ಇರುವ 59 ವಿಡಿಯೋಗಳನ್ನು ಆತನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: 32 ತಿಂಗಳಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ರೂ. ಖರ್ಚು!

ಕೆಲವು ವರ್ಷಗಳ ಹಿಂದೆಯೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದೆ. ಆದರೆ, ಅದಕ್ಕೂ ಮೊದಲು ಸಾಕಷ್ಟು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದೇನೆ ಎಂದು ಆರೋಪಿ ರಜನೀಶ್​ ಕುಮಾರ್​ ಪೊಲೀಸರಿಗೆ ತಿಳಿಸಿದ್ದಾನೆ.

ಹುಡುಗಿಯರ ಪಾಲಕರು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಮತ್ತು ಅವರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಲು ನನಗೆ ಲಂಚ ನೀಡುತ್ತಿದ್ದರು. ಇದೇ ಹುಡುಗಿಯರಿಗೆ ಹತ್ತಿರವಾಗಲು ಮತ್ತು ಲೈಂಗಿಕ ಕ್ರಿಯೆಗೆ ಒತ್ತಾಯಿಸಲು ಕಾರಣವಾಯಿತು. ಅವರಲ್ಲಿ ಹೆಚ್ಚಿನವರು ತಮ್ಮ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಹಾಸಿಗೆಯನ್ನು ಹಂಚಿಕೊಂಡರು ಎಂದು ರಜನೀಶ್​ ಹೇಳಿದ್ದಾನೆ.

ಒಮ್ಮೆ ನನ್ನ ಕೊಠಡಿಯಲ್ಲಿರುವ ಕಂಪ್ಯೂಟರ್‌ನ ವೆಬ್‌ಕ್ಯಾಮ್‌ನಲ್ಲಿ ವಿದ್ಯಾರ್ಥಿನಿಯೊಂದಿಗಿನ ಲೈಂಗಿಕ ಕ್ರಿಯೆ ರೆಕಾರ್ಡ್ ಆಗಿತ್ತು. ಅದನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಕಂಪ್ಯೂಟರ್ ಅನ್ನು ಪರಿಶೀಲಿಸಿದಾಗ ಆ ದೃಶ್ಯಗಳನ್ನು ನೋಡಿ, ಆನಂತರ ಎಲ್ಲವನ್ನೂ ರೆಕಾರ್ಡ್ ಮಾಡಿ ಸಂಗ್ರಹಿಸಲು ನಿರ್ಧರಿಸಿದೆ. ಸ್ಪಷ್ಟವಾದ ವಿಡಿಯೋಗಳನ್ನು ರೆಕಾರ್ಡ್​ ಮಾಡಲು ಕಂಪ್ಯೂಟರ್‌ನಲ್ಲಿ ವಿಶೇಷ ಸಾಫ್ಟ್‌ವೇರ್ ಅನ್ನು ಸಹ ಇನ್​ಸ್ಟಾಲ್​ ಮಾಡಿದೆ. ಆ ದೃಶ್ಯಗಳನ್ನು ತೋರಿಸುವ ಮೂಲಕ ಹಲವಾರು ಜನರನ್ನು ಬ್ಲ್ಯಾಕ್‌ಮೇಲ್ ಸಹ ಮಾಡಿದ್ದೇನೆ ಎಂದು ಆರೋಪಿ ರಜನೀಶ್​ ಬಾಯ್ಬಿಟ್ಟಿದ್ದಾನೆ.

ಕೆಲವು ದಿನಗಳ ಹಿಂದೆ ಬಂದ ಅನಾಮಧೇಯ ಪತ್ರದ ಮೂಲಕ ರಜನೀಶ್​ ಕಿರುಕುಳದ ಬಗ್ಗೆ ಹೊರಜಗತ್ತಿಗೆ ತಿಳಿದಿದೆ. ಯಾವಾಗ ಈ ಪತ್ರ ಬಂತೋ ಅಂದೇ ರಜನೀಶ್​ ತಲೆಮರೆಸಿಕೊಂಡನು. ಇದಾದ ಒಂದು ದಿನದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

2001ರಲ್ಲಿ ಆತ ಕಾಲೇಜು ಪ್ರಾಧ್ಯಪಕರಾಗಿ ಆಯ್ಕೆಯಾದನು. 2008 ರಿಂದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಕಳೆದ ವರ್ಷ ಆತನಿಗೆ ಕೆಲಸದಲ್ಲಿ ಬಡ್ತಿಯೂ ಸಿಕ್ಕಿತು. ಅಲ್ಲದೆ, ರಜನೀಶ್ ವಿವಾಹಿತ ಕೂಡ. ಆದರೆ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ವಿದ್ಯಾರ್ಥಿನಿಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸದ್ಯ ಪೊಲೀಸ್​ ತನಿಖೆ ಮುಂದುವರಿದಿದೆ.

ಇದನ್ನೂ ನೋಡಿ: ಮಹಾಡ್‌ ಸತ್ಯಾಗ್ರಹ |ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧ‌ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *