ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತ ಸಾಧ್ಯತೆಯನ್ನು ಅಂದಾಜಿಸಿರುವ ಹಲವು ತಂತ್ರಜ್ಞಾನ ಆಧಾರಿತ ದೊಡ್ಡ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು, ವೆಚ್ಚ ಕಡಿತದ ಭಾಗವಾಗಿ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಶೇರ್‌ಚಾಟ್ ಸಂಸ್ಥೆ ಶೇ. 20ರಷ್ಟು ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ.
ಬಂಡವಾಳ ಹೂಡಿಕೆದಾರರು ಶೇರು ಮಾರುಕಟ್ಟೆ ಮೌಲ್ಯವು ಅನಿಶ್ಚಿತವಾಗಿರುವ ಹಿನ್ಜನೆಲೆಯಲ್ಲಿ ಹಲವು ಸಂಸ್ಥೆಗಳು ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಗೂಗಲ್ ಹಾಗೂ ಟೆಮಾಸೆಕ್ ಬೆಂಬಲ ಹೊಂದಿರುವ ಸಾಮಾಜಿಕ ಮಾಧ್ಯಮ ಶೇರ್‌ಚಾಟ್ ಸಹ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಇದನ್ನು ಓದಿ: ಲಾಭದಲ್ಲಿ ಕುಸಿತ; ಗೂಗಲ್ ಮಾತೃಸಂಸ್ಥೆಯ 10000 ಉದ್ಯೋಗಿಗಳ ವಜಾಕ್ಕೆ ಸಿದ್ದತೆ
ಬಂಡವಾಳ ಲಭ್ಯತೆ ಮೇಲೆ ಪರಿಣಾಮ ಬೀರಲಿರುವ ಹಲವಾರು ಬಾಹ್ಯ ಆರ್ಥಿಕ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲಲು ಇಂತಹ ಕ್ರಮಗಳು ಅನಿವಾರ್ಯವೆಂದು ಸಂಸ್ಥೆಯು ಪ್ರಕಟಿಸಿದೆ.
ಬೆಂಗಳೂರು ಮೂಲದ ಮೊಹಲ್ಲಾ ಟೆಕ್ ಪ್ರೈ. ಲಿ. ಮಾಲೀಕತ್ವದ ಶೇರ್‌ಚಾಟ್ ಹಾಗೂ ಅದರ ಕಿರುಚಿತ್ರಗಳ ತಂತ್ರಾಂಶ ಮೋಜ್ ಸಂಸ್ಥೆಗಳು 500 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ. ಸಂಸ್ಥೆಯ ಒಟ್ಟು ಮೌಲ್ಯವು 5 ಶತಕೋಟಿ ಡಾಲರ್ ಆಗಿದ್ದು, 2200ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆಯ ವಕ್ತಾರರೊಬ್ಬರು, “ಒಂದು ಕಂಪನಿಯಾಗಿ ನಾವು ನಮ್ಮ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ನೋವಿನ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ನಮ್ಮ ನವೋದ್ಯಮ ಕಂಪನಿಯು ಪ್ರಾರಂಭವಾದಂದಿನಿಂದ ನಮ್ಮೊಂದಿಗಿದ್ದ ಶೇ. 20ರಷ್ಟು ಅದ್ಭುತ, ಪ್ರತಿಭಾವಂತ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿ: 1 ಕೋಟಿ ಉದ್ಯೋಗ ನಷ್ಟ–ಶೇ.97ರಷ್ಟು ಕುಟುಂಬಕ್ಕೆ ಕಡಿಮೆಯಾದ ಆದಾಯ: ಸಿಎಂಐಇ
ಡಿಸೆಂಬರ್, 2022ರಲ್ಲಿ ತನ್ನ ಆನ್‌ಲೈನ್ ಮೋಜಿನ ಕ್ರೀಡಾ ವೇದಿಕೆಯಾದ ಜೀತ್ 11 ಅನ್ನು ಸ್ಥಗಿತಗೊಳಿಸಿದ ಬೆನ್ನಿಗೇ ಮೊಹಿಲ್ಲಾ ಟೆಕ್ ಈ ದೊಡ್ಡ ನಿರ್ಧಾರವನ್ನು ಪ್ರಕಟಿಸಿದೆ. ಆಗ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ