ಶ್ರೀಲಂಕಾ ಬಿಕ್ಕಟ್ಟು; ತೀವ್ರಗೊಂಡ ಭಾರೀ ಪ್ರತಿಭಟನೆ-ಮಹಿಂದಾ ರಾಜಪಕ್ಸೆ ಪಲಾಯನ

ಕೊಲಂಬೊ: ಭಾರತದ ನೇರಯ ರಾಷ್ಟ್ರ ಶ್ರೀಲಂಕಾದಲ್ಲಿ ಪ್ರತಿಭಟನೆ ಹೆಚ್ಚಾಗುತ್ತಿದ್ದು. ಪ್ರತಿಭಟನೆಯ ತೀವ್ರತೆಗೆ ಭಯಗೊಂಡು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಅವರ ಕುಟುಂಬವು ಕೊಲಂಬೋದಿಂದ 270 ಕಿಮೀ ದೂರದಲ್ಲಿರುವ ಟ್ರಿಂಕೋಮಲಿ ಯಲ್ಲಿರುವ ನೌಕಾನೆಲೆಯಲ್ಲಿ ಆಶ್ರಯ ನೀಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನು ಓದಿ: ಶ್ರೀಲಂಕಾ ಭಾರೀ ಪ್ರತಿಭಟನೆ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸೆ

ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಗುರಿಯಾಗಿರುವ ಸಾಮಾನ್ಯ ಜನತೆ ತೀವ್ರ ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ಶ್ರೀಲಂಕಾದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಆರ್ಥಿಕ ಬಿಕ್ಕಟ್ಟು ಸರಿದಾರಿಗೆ ಬರುವ ಯಾವುದೇ ಮುನ್ಸೂಚನೆ ಸಿಗದ ಹಿನ್ನಲೆ ಜನಸಾಮಾನ್ಯರು ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಹೀಗಾಗಿ ಮಹಿಂದಾ ರಾಜಪಕ್ಸ ಜೀವ ಭಯದಿಂದ ಕಟುಂಬ ಸಮೇತ ಸ್ಥಳಾಂತರಗೊಂಡು ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ.

ಕೊಲಂಬೋದಲ್ಲಿರುವ ಪ್ರಧಾನಿ ನಿವಾಸದ ಬಳಿ ರಾತ್ರೋರಾತ್ರಿ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು, ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಕನಿಷ್ಠ ಐವರು ಇದುವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ವೇಳೆ ಕನಿಷ್ಠ ಹತ್ತು ಪೆಟ್ರೋಲ್ ಬಾಂಬ್‌ಗಳನ್ನು ಕಾಂಪೌಂಡ್‌ಗೆ ಎಸೆಯಲಾಗಿದೆ. ಕೋಪಗೊಂಡಿದ್ದ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯುಗಳನ್ನು ಪ್ರಯೋಗಿಸಿದರು.

ಇದನ್ನು ಓದಿ: ಶ್ರೀಲಂಕಾದಲ್ಲಿ ಎರಡನೇ ಬಾರಿ ತುರ್ತು ಪರಿಸ್ಥಿತಿ ಜಾರಿ

ಇಂದು ಮುಂಜಾನೆ ಅಲ್ಲಿಗೆ ತೆರಳಿದ ಸೇನಾ ಪಡೆ, ಪ್ರತಿಭಟನಾಕಾರರ ಮಧ್ಯೆ ಮಹಿಂದಾ ರಾಜಪಕ್ಸೆ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಹೆಲಿಕ್ಯಾಪ್ಟರ್ ಮೂಲಕ ಕುಟುಂಬ ಸಮೇತ ಸ್ಥಳಾಂತರಿಸಿದ್ದಾರೆ.

ಹಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಈ ವಿಷಯವಾಗಿ ಜನರ ಆಕ್ರೋಶ ಮುಗಿಲು ಮುಟ್ಟಿದೆ. ಈಗಾಗಲೇ ಎರಡನೇ ಬಾರಿ ತುರ್ತು ಪರಿಸ್ಥಿತಿಯನ್ನು ಸಹ ಘೋಷಣೆ ಮಾಡಲಾಗಿದೆ. ಈ ನಡುವೆ ಆಡಳಿತ ಪಕ್ಷದ ಮೇಲೆ ಒತ್ತಡದ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸೆ ಅನಿವಾರ್ಯವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಾಗದ ಪರಿಸ್ಥಿತಿ ಬಂದಿತು.

ಈ ವೇಳೆ ಅವರ  ಸಹೋದರ ಹಾಗೂ ಅಧ್ಯಕ್ಷ ಗೊಟಬಯ ರಾಜಪಕ್ಷೆ ತಮ್ಮ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಈ ಮೂಲಕ  ದೇಶದ  ಅಧಿಕಾರ ಮತ್ತು ಸೇನಾ ನಿಯಂತ್ರಣ ಅವರ ಕೈಗೆ ಬಂದಿದೆ. ತಮ್ಮ ಅಧಿಕಾರದ  ಅಡಿಯಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡುವಂತೆ ಗೊಟಬಯ ರಾಜಪಕ್ಸೆ ಶ್ರೀಲಂಕಾದ ಮುಖ್ಯ ವಿರೋಧ ಪಕ್ಷಗಳು ಒಳಗೊಂಡ ಸಮಾಗಿ ಜನ ಬಲವೆಗಯಾ (ಎಸ್‌ಜೆಬಿ) ಮನವಿ ಮಾಡಿದ್ದರು. ಆದರೆ ಅವರು, ಗೊಟಬಯ ಅವರ ರಾಜೀನಾಮೆಗೆ ಆಗ್ರಹಿಸಿದೆ.

ಇದನ್ನು ಓದಿ: ಆರ್ಥಿಕ ಅನಿಶ್ಚಿತತೆ: ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಗೋಟಬಯ ರಾಜಪಕ್ಸೆ

ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ತಮ್ಮ ಪರ ಪ್ರತಿಭಟನೆ ಮಾಡುತ್ತಿದ್ದವರನ್ನು ಪ್ರೇರೇಪಿಸಿ ಸರ್ಕಾರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಿಂಸಾಚಾರವೆಸಗಲು ಪ್ರೇರೇಪಿಸಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಈ ನಡುವೆ ಪ್ರತಿಭಟನಾಕಾರರ ಮೇಲೆ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ದಾಳಿ ನಡೆಸಿದ್ದು, ಹಿಂಸಾಚಾರವೂ ನಡೆದಿದೆ. ಶ್ರೀಲಂಕಾ ದೇಶದ ವಿವಿಧ ಭಾಗಗಳಿಂದ ರಾಜಧಾನಿಗೆ ನುಗ್ಗಿದ ರಾಜಪಕ್ಸೆ ಬೆಂಬಲಿಗರು, ಪ್ರತಿಭಟನಾಕಾರರ ಮೇಲೆ ದೊಣ್ಣೆ ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ.

ಕೊಲೊಂಬೊದಲ್ಲಿ ಹಿಂಸಾಚಾರದಿಂದ ಕನಿಷ್ಠ 213 ಜನರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *