ಲಾಲ್‌ ಕೃಷ್ಣ ಅಡ್ವಾಣಿ | ಕೋಮು ಪ್ರಚೋದಕ-in-chief!

ಬಿಜೆಪಿಯ ಪ್ರಮುಖ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ. ಬಾಬರಿ ಮಸೀದಿ ಧ್ವಂಸ ಮತ್ತು ಅದರ ಹಿಂದೆ ಹಾಗೂ ನಂತರ ನಡೆದ ಸಾವಿರಾರು ಭಾರತೀಯರ ಜೀವಗಳನ್ನು ತಿಂದ ದೇಶವ್ಯಾಪಿ ಹಿಂಸಾಚಾರಕ್ಕೆ ಕಾರಣರಾದ ಕರಾಚಿಯಲ್ಲಿ ಜನಿಸಿದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯೆ ಈ ಎಲ್‌ಕೆ ಅಡ್ವಾಣಿ. 90ರ ದಶಕದಲ್ಲಿ ನಡೆದ ದೇಶವ್ಯಾಪಿ ಹಿಂಸಾಚಾರ ಜವಾಬ್ದಾರಿಯನ್ನು ಬೇರೆ ಎಲ್ಲರಿಗಿಂತಲೂ ಹೆಚ್ಚು ಅವರೇ ಹೆಚ್ಚು ಹೊರಬೇಕಾಗುತ್ತದೆ. ಕೋಮು ಪ್ರಚೋದಕ

ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕೇಂದ್ರೀಯ ತನಿಖಾ ಸಂಸ್ಥೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ವಜಾ ಆದ ಅವರ ಮೇಲೆ 2017 ರಲ್ಲಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ನಿರ್ದೇಶನದ ಮೇರೆಗೆ ಮತ್ತೆ ಚಾರ್ಜ್‌ಶೀಟ್ ಮಾಡಲಾಯಿತು. ರಾಮಮಂದಿರ ನಿರ್ಮಾಣಕ್ಕಾಗಿ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಿದ 2019ರ ನವೆಂಬರ್‌ನಲ್ಲಿ ಪ್ರಕಟವಾದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ, ಅವರು ಅನ್ನು ಬಾಬರಿ ದ್ವಂಸವನ್ನು ತಕ್ಷಣವೇ ಸಮರ್ಥಿಸಿಕೊಂಡರು.ಕೋಮು ಪ್ರಚೋದಕ

ಇದನ್ನೂ ಓದಿ: ಸಿಎಎ ಜಾರಿ ಇಲ್ಲ | ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಪುನರುಚ್ಛಾರ

ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು 1980 ರಲ್ಲಿ ಸ್ಥಾಪಿಸಲಾಯಿತು. 1984 ರಲ್ಲಿ ರಾಮ ಜನ್ಮಭೂಮಿ ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡ ಅಡ್ವಾಣಿ 1986 ರಲ್ಲಿ ಪಕ್ಷದ ಅಧ್ಯಕ್ಷರಾದರು. 1989 ರಲ್ಲಿ, ಬಿಜೆಪಿಯು ರಾಮ ಜನ್ಮ ಭೂಮಿಯಲ್ಲಿ ಅದರಲ್ಲೂ 400 ವರ್ಷಗಳಿಂದ ಇರುವ ಬಾಬರಿ ಮಸೀದಿ ಇರುವ ಭೂಮಿಯಲ್ಲೆ ರಾಮ ಮಂದಿರವನ್ನು ನಿರ್ಮಿಸುವುದು ತನ್ನ ಪ್ರಮುಖ ರಾಜಕೀಯ ಅಜೆಂಡಾ ಎಂದು ಘೋಷಿಸಿತು. ಕೋಮು ಪ್ರಚೋದಕ

1990 ರಲ್ಲಿ, ಅಡ್ವಾಣಿಯವರು ಗುಜರಾತಿನ ಸೋಮನಾಥ ದೇವಾಲಯದಿಂದ ಅಯೋಧ್ಯೆಗೆ ರಥಯಾತ್ರೆಯನ್ನು ಪ್ರಾರಂಭಿಸಿದರು. ಈ ಯಾತ್ರೆಯ ಉದ್ದೇಶ ಮಸೀದಿ ಇರುವ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣದ ತಮ್ಮ ಪಕ್ಷದ ಅಜೆಂಡಾಗೆ ಬೆಂಬಲ ಪಡೆಯುವುದಾಗಿತ್ತು. ಸೋಮನಾಥದಲ್ಲಿ ಯಾತ್ರೆಯನ್ನು ಆರಂಭಿಸಿ ಅಯೋಧ್ಯೆಯಲ್ಲಿ ಕೊನೆಗೊಳ್ಳುವ ಅಡ್ವಾಣಿಯವರ ಈ ಆಯ್ಕೆಯು ಉದ್ದೇಶಪೂರ್ವಕವಾಗಿತ್ತು. ಹಲವಾರು ಬಾರಿ ವಿದೇಶಿಯರ ದಾಳಿಗೆ ಒಳಗಾದ ಸೋಮನಾಥ ದೇವಾಲಯವನ್ನು ಶಕ್ತಿಶಾಲಿ ಸಂಕೇತವನ್ನಾಗಿ ಬಳಸಲಾಯಿತು. ಇದನ್ನು ಅಡ್ವಾಣಿ ತನ್ನ 2008 ರ ಪುಸ್ತಕ ಮೈ ಕಂಟ್ರಿ ಮೈ ಲೈಫ್‌ನಲ್ಲಿ ಕೂಡಾ ಬರೆದಿದ್ದಾರೆ. ಯಾತ್ರೆಯ ಆರಂಭ ಬಿಂದುವಾಗಿ ಸೋಮನಾಥ ದೇವಾಲಯದ ಆಯ್ಕೆಯು ಪ್ರಬಲ ಸಾಂಕೇತಿಕ ಮೌಲ್ಯವನ್ನು ಹೊಂದಿತ್ತು ಎಂದು ಅವರು ಹೇಳಿದ್ದಾರೆ.

ಅಡ್ವಾಣಿ ಪ್ರಾರಂಭಿಸಿದ ಈ ರಥಯಾತ್ರೆಯು ತಾನು ಶಾಂತಿ ಸಂದೇಶವನ್ನು ಹೊತ್ತು ತರುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ತ್ರಿಶೂಲ, ಕೊಡಲಿ, ಖಡ್ಗ ಮತ್ತು ಬಿಲ್ಲು-ಬಾಣವನ್ನು ಹೊತ್ತಿರುವ ಚಿತ್ರಗಳೂ ಪತ್ರಿಕೆಗಳಲ್ಲಿ ಪ್ರಕಟವಾದವು. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ದುಷ್ಕರ್ಮಿಗಳು ಉದ್ದೇಶಿತ ಮಂದಿರ ಯಾತ್ರೆಯ ಮಾರ್ಗದಲ್ಲಿ ಮುಸ್ಲಿಮರ ‘ದ್ರೋಹ’ದ ಪೋಸ್ಟರ್‌ಗಳನ್ನು ಅಂಟಿಸಿದರು. ಯಾತ್ರೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಗಲಭೆ ಮತ್ತು ಹತ್ಯೆಗಳು ನಡೆದವು. ಅಂತಿಮವಾಗಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಬಿಹಾರ ಸರ್ಕಾರವು ಅಕ್ಟೋಬರ್ 1990 ರಲ್ಲಿ ಸಮಸ್ತಿಪುರದಲ್ಲಿ ಅಡ್ವಾಣಿ ಮತ್ತು ಅವರ ಸಹಚರರನ್ನು ತಡೆದು ಬಂಧಿಸಿತು.

ಇದನ್ನೂ ಓದಿ: ಬರ ಪರಿಹಾರ, ಕೇಂದ್ರದ ತಾರತಮ್ಯ ನೀತಿ| ದೆಹಲಿಯಲ್ಲಿ ಫೆಬ್ರವರಿ 7 ರಂದು ಕಾಂಗ್ರೆಸ್‌ ಪ್ರತಿಭಟನೆ

ಅಡ್ವಾಣಿಯ ಬಂಧನದ ನಂತರವೂ, ಸಾವಿರಾರು ಆರೆಸ್ಸೆಸ್ ದುಷ್ಕರ್ಮಿಗಳು ಅಯೋಧ್ಯೆಗೆ ತಲುಪುವಲ್ಲಿ ಯಶಸ್ವಿಯಾದರು. ಅಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 20 ಮಂದಿ ಸಾವನ್ನಪ್ಪಿದರು. ಇದಾಗಿ ಎರಡು ವರ್ಷಗಳ ನಂತರ, ಡಿಸೆಂಬರ್ 6, 1992 ರಂದು ಅಡ್ವಾಣಿ ನೇತೃತ್ವದ ಬಿಜೆಪಿ ನಾಯಕರ ಕೂಟದ ನೇತೃತ್ವದ ಕರಸೇವಕರ ಗುಂಪು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತು.

ಹಲವಾರು ವರದಿಗಳು ಬಾಬರಿ ಮಸೀದಿ ದ್ವಂಸದಲ್ಲಿ ಅವರ ಪಾತ್ರವು ಪ್ರಮುಖವಾಗಿತ್ತು ಎಂದು ಸೂಚಿಸಿವೆ. ಜಮಾಯಿಸಿದ ಆರೆಸ್ಸೆಸ್ ದುಷ್ಕರ್ಮಿಗಳು ಮಸೀದಿಯನ್ನು ಒಡೆಯುವ ಮುನ್ನ ಅಡ್ವಾಣಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಡಿಸೆಂಬರ್ 6ರಂದು ಅಡ್ವಾಣಿ ಅವರೊಂದಿಗಿದ್ದ ಪೊಲೀಸ್ ಅಧಿಕಾರಿ ಅಂಜು ಗುಪ್ತಾ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.

“ಡಿಸೆಂಬರ್ 6, 1992 ರಂದು ವಿವಾದಿತ ಸ್ಥಳದಿಂದ ಕೇವಲ 150-200 ಮೀಟರ್ ದೂರದಲ್ಲಿರುವ ರಾಮ್ ಕಥಾ ಕುಂಜ್ ಮಂಚ್‌ನಿಂದ ಅಡ್ವಾಣಿ ಪ್ರಚೋದನಕಾರಿ ಭಾಷಣವನ್ನು ಮಾಡಿದರು ಮತ್ತು ಇದು ಜನರನ್ನು ಉದ್ರಿಕ್ತರನ್ನಾಗಿ ಮಾಡಿತು. ಅದೇ ಸ್ಥಳದಲ್ಲಿ ಮಂದಿರ ನಿರ್ಮಿಸಲಾಗುವುದು ಎಂದು ಅವರು ಪದೇ ಪದೇ ಹೇಳಿದ್ದರು” ಎಂದು ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನ್ಯಾಷನಲ್ ಕಾಲೇಜು | ದಲಿತ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಅವಮಾನ

ಆರೆಸ್ಸೆಸ್ ದುಷ್ಕರ್ಮಿಗಳು ಬಾಬರಿ ಮಸೀದಿಯನ್ನು ಕೆಡವಲು ಆರಂಭಿಸಿದಾಗ ಅಡ್ವಾಣಿ ಸೇರಿದಂತೆ ಅಲ್ಲಿದ್ದ ಯಾವೊಬ್ಬ ಬಿಜೆಪಿ ನಾಯಕರೂ ಅವರನ್ನು ತಡೆಯುವ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ. ಗುಪ್ತಾ ಅವರ ಹೇಳಿಕೆಯ ಪ್ರಕಾರ ಮಸೀದಿ ಕೆಡವಿದಾಗ, ಬಿಜೆಪಿ ನಾಯಕರು ಸಿಹಿ ಹಂಚಿದ್ದರು. 2017 ರಲ್ಲಿ ದಿ ವೈರ್‌ನೊಂದಿಗೆ ಮಾತನಾಡಿದ್ದ ಗುಪ್ತಾ ಅವರು ಅವರು, ಮಸೀದಿಯನ್ನು ಕೆಡವಿದ ಗುಂಪಿನ ಭಾಗವಾಗಿದ್ದ ಕೆಲವು ಕರಸೇವಕರು ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾಭಾರತಿ ಸೇರಿದಂತೆ ಬಿಜೆಪಿ ನಾಯಕರು ಅದನ್ನು ಕೆಡವಲು ಹೇಳಿದರು ಎಂದು ಹೇಳಿದ್ದಾರೆ.ಕೋಮು ಪ್ರಚೋದಕ

“ಎಲ್‌ಕೆ ಅಡ್ವಾಣಿ, ಎಂಎಂ ಜೋಶಿ, ಉಮಾಭಾರತಿ ಮತ್ತು ಇತರ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ನಾಯಕರ ಸೂಚನೆಯ ಮೇರೆಗೆ ನಾವು ಅಲ್ಲಿ ಜಮಾಯಿಸಿದ್ದೆವು. ಅವರು 500 ವರ್ಷಗಳ ಗುಲಾಮಗಿರಿಯ ಚಿಹ್ನೆಯನ್ನು ಅಳಿಸಬೇಕು ಎಂದು ಹೇಳಿದರು. ನಾವು ಬಾಬರಿ ಮಸೀದಿಯನ್ನು ಕೆಡವಬೇಕು ಎಂದು ಅವರು ನಮಗೆ ಹೇಳಿದರು ಮತ್ತು ನಾವು ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಅವರಲ್ಲಿ ಒಬ್ಬರು ಹೇಳಿದರು” ಎಂದು ಗುಪ್ತಾ ಹೇಳಿದ್ದಾರೆ.

ಡಿಸೆಂಬರ್ 6 ರ ಕರಸೇವೆಯು ಕೇವಲ ಭಜನೆ ಮತ್ತು ಕೀರ್ತನೆ ಎಂದರ್ಥವಲ್ಲ, ಶ್ರೀರಾಮ ಮಂದಿರ ನಿರ್ಮಾಣವನ್ನೂ ಒಳಗೊಂಡಿರುತ್ತದೆ ಎಂದು ಅಡ್ವಾಣಿ ಹೇಳಿರುವುದನ್ನು ಸಿಬಿಐ ಚಾರ್ಜ್‌ಶೀಟ್ ಉಲ್ಲೇಖಿಸಿದೆ. ಧ್ವಂಸವು ಸ್ವಯಂಪ್ರೇರಿತ ಕೃತ್ಯವಲ್ಲ ಮತ್ತು ಬಿಜೆಪಿ ನಾಯಕ ವಿನಯ್ ಕಟಿಯಾರ್ ಅವರ ನಿವಾಸದಲ್ಲಿ ಅಡ್ವಾಣಿ ಭಾಗವಹಿಸಿದ್ದ ರಹಸ್ಯ ಸಭೆಯಲ್ಲಿ ಬಾಬರಿ ಮಸೀದಿಯನ್ನು ಕೆಡವುವ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ರಥಯಾತ್ರೆ ನಡೆಸಿ ದೇಶವ್ಯಾಪಿ ಕೋಮು ಗಲಭೆಗೆ ಕಾರಣರಾದ ಎಲ್‌.ಕೆ. ಅಡ್ವಾಣಿಗೆ ಭಾರತ ರತ್ನ!

ಬಾಬರಿ ದ್ವಂಸದ ನಂತರ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು. 2001 ರಲ್ಲಿ ಅಲಹಾಬಾದ್ ಹೈಕೋರ್ಟ್ ಕ್ರಿಮಿನಲ್ ಪಿತೂರಿಯ ಆರೋಪವನ್ನು ಕೈಬಿಟ್ಟಿತು. ಆದರೆ 2017 ರಲ್ಲಿ ಸುಪ್ರೀಂ ಕೋರ್ಟ್ ಈ ಆರೋಪವನ್ನು ಮರುಸ್ಥಾಪಿಸಿ, ಮಸೀದಿಯನ್ನು ಕೆಡವಿದ್ದು ‘ಸಂವಿಧಾನದ ಜಾತ್ಯತೀತ ಸಂರಚನೆ’ಯನ್ನು ಅಲುಗಾಡಿಸಿದ ಅಪರಾಧ ಎಂದು ವಿವರಿಸಿದೆ.ಕೋಮು ಪ್ರಚೋದಕ

1998 ರಿಂದ ಅಡ್ವಾಣಿ ಸ್ಪರ್ಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಲ್ಲಿ 2019 ರಲ್ಲಿ ಅಮಿತ್ ಶಾ ಅವರಿಗೆ ಟಿಕೆಟ್ ನೀಡಿ, ಅವರನ್ನು ಕಡೆಗಣಿಸಲಾಯಿತು. ತಮ್ಮ ಮಾಜಿ ಸಹಾಯಕ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿ ಅಡ್ವಾಣಿಯನ್ನು ‘ಮಾರ್ಗದರ್ಶಕ ಮಂಡಲಿ’ಗೆ ಸೇರಿಸಿಕೊಂಡಿದೆ. ಅಲ್ಲಿಂದ ಅವರು ಚುನಾವಣಾ ರಾಜಕೀಯ ನಿವೃತ್ತಿಯ ಜೀವನ ಸಾಗಿಸುತ್ತಿದ್ದಾರೆ. ಕೋಮು ಪ್ರಚೋದಕ

lಇನ್‌ಪುಟ್: ದಿ ವೈರ್

ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್‌ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *