ರಾಜ್ಯದಲ್ಲಿ ಈಗಲೂ ನರಬಲಿ ನಡೆಯುತ್ತಿದೆ – ಅಗ್ನಿ ಶ್ರೀಧರ್

ಬೆಂಗಳೂರು: ರಾಜ್ಯದಲ್ಲಿ ನರಬಲಿ ಪದ್ಧತಿ ಇನ್ನೂ ಇದೆ. ಹೆಣ್ಣುಮಕ್ಕಳ ಬಲಿ ಈಗಲೂ ನಡೆಯುತ್ತಿದೆ ಎಂದು ನಿರ್ದೇಶಕ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗ್ನಿಶ್ರೀಧರ್, ರಾಜ್ಯದ ಕೆಲ ರಾಜಕಾರಣಿಗಳು ಇಂದಿಗೂ ನರಬಲಿ ಕೊಡುತ್ತಾರೆ. ಆದರೆ ಅವರು ಇದರಲ್ಲಿ ನೇರವಾಗಿ ಭಾಗಿಯಾಗಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನು ಓದಿ : ರಥಯಾತ್ರೆ ನಡೆಸಿ ದೇಶವ್ಯಾಪಿ ಕೋಮು ಗಲಭೆಗೆ ಕಾರಣರಾದ ಎಲ್‌.ಕೆ. ಅಡ್ವಾನಿಗೆ ಭಾರತ ರತ್ನ!

ಬಡ ಮಕ್ಕಳನ್ನು, ಒಂಟಿ ಹೆಣ್ಣುಮಕ್ಕಳನ್ನು ಹಾಗೂ ಭಿಕ್ಷುಕರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ಕರ್ನಾಟಕದ ಹಲವು ರಾಜಕಾರಣಿಗಳು ನರಬಲಿ ಕೊಡುತ್ತಾರೆ ಎಂದಿದ್ದಾರೆ. ದಂಡುಪಾಳ್ಯ ಸಿನಿಮಾ ಮೇಲೆ ಕೊಲೆ ಆರೋಪ ಮಾಡಿದರು. ಆದರೆ ದಂಡುಪಾಳ್ಯ ಗ್ಯಾಂಗ್ ಆ ಕೊಲೆಗಳನ್ನು ಮಾಡಿರಲಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ತೋರಿಸಿರುವ ಅಂಶಗಳು ನೈಜವಲ್ಲ. ಕ್ರೀಂ ಸಿನಿಮಾದ ಕಥೆ ನರಬಲಿಗೆ ಸಂಬಂಧಿಸಿದೆ ಎಂದು ಹೇಳಿದರು.

ಕ್ರೀಂ ಚಿತ್ರದಲ್ಲಿ ಅಗ್ನಿಶ್ರೀಧರ್ ಕೂಡ ನಟಿಸಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನದ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಎರಡುವರೆ ಸಾವಿರ ಮಹಿಳೆಯರು ನಾನಾಕಾರಣಗಳಿಂದ ಬಲಿಯಾಗುತ್ತಾರೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವ ಕಥೆ ಕೂಡ ಕ್ರೀಂ ಚಿತ್ರದಲ್ಲಿದೆ.

ಇದನ್ನು ನೋಡಿ : ಮೋದಿಯವರ ‘ರೇವ್ಡಿ’ ಪ್ರಪಗಂಡಾದ ಅಸಲಿಯತ್ತೇನು? ಈ ವಾರದ ನೋಟ ಬಿ. ಶ್ರೀಪಾದ ಭಟ್ ಜೊತೆ Janashakthi Media

Donate Janashakthi Media

Leave a Reply

Your email address will not be published. Required fields are marked *