ಕೃಷಿಕಾಯ್ದೆ ರದ್ದಾಗುವವರೆಗೂ ನಾವು ಹೋಗುವುದಿಲ್ಲ: ರೈತ ಮಹಿಳೆಯರ ಪ್ರತಿಜ್ಞೆ

ದೆಹಲಿ ಜ 18:  ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ರೈತ ಮಹಿಳೆಯರು ಇಂದು ರೈತ ಮಹಿಳಾ ದಿನಾಚರಣೆಯನ್ನು ದೆಹಲಿಯ ನಾಲ್ಕೂ ಗಡಿಗಳಲ್ಲಿ ಆಚರಿಸಿದರು. ಕೃಷಿ ಕಾಯ್ದೆ ರದ್ದಾಗುವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ರೈತ ಮಹಿಳೆಯರು ಈ ವೇಳೆ ಪ್ರತಿಜ್ಞೆ ಗೈದಿದ್ದಾರೆ.

ರೈತ ಮಹಿಳಾ ದಿನದ ಪ್ರಯುಕ್ತ ದೆಹಲಿಯ ಬೀದಿಗಳಲ್ಲಿ ಮೆರವಣಿಗೆಗಳನ್ನು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 6 ಪ್ರಮುಖ ಮಹಿಳಾ ಸಂಘಟನೆಗಳು ನಡೆಸಿದವು.  ಅಪಾರ ಪ್ರಮಾಣದ ಮಹಿಳೆಯರು ಜಾಥಾದಲ್ಲಿ ಭಾಗವಹಿಸಿದ್ದರು.  ಜನವರಿ 26ರಂದು ನಡೆಸಲು ನಿರ್ಧರಿಸಲು ಟ್ರ್ಯಾಕ್ಟರ್ ಪರೇಡ್​ಗೆ ಬಲ ತುಂಬಲು ಇಂದಿನ ರೈತ ಮಹಿಳಾ ದಿನದ ಆಚರಣೆ ಸಹಕಾರಿಯಾಗಿದೆ ಎಂದು ಮಹಿಳಾ  ಸಂಘಟನೆಗಳು ಆಗ್ರಹಿಸಿವೆ.   ಸಾವಿರಾರು ಯುವತಿಯರು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸಲು ಟ್ರ್ಯಾಕ್ಟರ್ ಚಾಲನೆ ಕಲಿತಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.

ನಮ್ಮದು ಸಾತ್ವಿಕ ಸಂಘರ್ಷ. ಆದರೆ ರಾಜಿರಹಿತ ಸಂಘರ್ಷವೆಂಬ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಜೊತೆಗೆ ಬಲಿಷ್ಟ ಮಹಿಳಾ ಚಳುವಳಿಯನ್ನು ಮುನ್ನಡೆಸುತ್ತಿರುವ ಆರು ಮಹಿಳಾ ಸಂಘಟನೆಗಳು ನಾವಿದ್ದೇವೆಂಬ ಬೆಂಬಲ ವ್ಯಕ್ತಪಡಿಸಿದೆ. ಇದು ಸುಮ್ಮನೆ ಕರೆಯಲ್ಲ. ಅನ್ನದಾತರನ್ನು ಅವಮಾನಿಸುವ, ಆಹಾರ ಸ್ವಾವಲಂಬನೆಯನ್ನು ಕಸಿದು ಅದಾನಿ ಅಂಬಾನಿಗಳ ಕೈಗೆ ಮುಫತ್ತಾಗಿ ಕೊಡುತ್ತಿರುವ ಅನ್ನದ್ರೋಹಿ ಕೆಲಸದ ವಿರುದ್ಧ ರಣಕಹಳೆಯಿದು ಎಂದು ಘೊಷಣೆಗಳು ಮೊಳಗಿದವು

 

ಜನವರಿ 18 : ರೈತ ಮಹಿಳೆಯರ ದಿನ : ಎಲ್ಲೆಲ್ಲೂ ಇದ್ದೂ. . .ಎಲ್ಲೂ ಕಾಣದವರು..

ಕೇರಳ ಮತ್ತು ತಮಿಳುನಾಡಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ  ರಾಜಭವನಕ್ಕೆ, ಮುತ್ತಿಗೆ ಹಾಕಲಾಯಿತು. ಜೈಪುರ, ವಿಜಯವಾಡ ದಲ್ಲೂ ಪ್ರತಿಭಟನೆಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.  ಉತ್ತರ ಪ್ರದೇಶದಿಂದ ದೆಹಲಿಯವರೆಗೆ  ಎಐಡಿಡಬ್ಲೂಎ ಸಂಘಟನೆಯ ರಾಷ್ಟ್ರಾಧ್ಯಕ್ಷರಾದ ಸುಭಾಷಿಣಿ ಅಲಿಯವರ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿದರು.  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಳೆ ಸೇರಿದಂತೆ ಸಾವಿರಾರು ಮಹಿಳೆಯರು ಸಿಂಗು ಗಡಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದರು. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬೈಕ್ ಜಾಥಾ ನಡೆಸಿದರು.

ರೈತ ಮಹಿಳಾ ದಿನಾಚರಣೆಯಲ್ಲಿ ಭಾರತೀಯ ಮಹಿಳಾ ಒಕ್ಕೂಟ,  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘಟನೆ,  ಅಖಿಲ ಭಾರತ ಮಹಿಳಾ ಪ್ರಗತಿಶೀಲ ಸಂಘ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಗಳು ಭಾಗಿಯಾಗಿದ್ದವು.

ರೈತ ಮಹಿಳಾ ದಿನಾಚರಣೆಯ ಇತರ ಫೋಟೊಗಳು

 

Donate Janashakthi Media

Leave a Reply

Your email address will not be published. Required fields are marked *