ಚಿತ್ರದುರ್ಗ : ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಡಾಂಬರು ರಸ್ತೆ ಒಂದುವರೆ ತಿಂಗಳಲ್ಲಿ ಡ್ಯಾಮೇಜ್ ಆಗಿದ್ದು, ಡಾಂಬರು ರಸ್ತೆಗೆ ಅಧಿಕಾರಿಗಳು ಸಿಮೆಂಟ್ ಮೆತ್ತಿದಿದ್ಧಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳ ರಸ್ತೆಗಳಿಗೆ ಈಗ ಇಂತಹ ಸುಸ್ಥಿತಿ ಎದುರಾಗಿದೆ.
2.5 ಕೋಟಿ ವೆಚ್ಚದ ದೊಡ್ಡಾಲಘಟ್ಟ- ಕೋಣನೂರು ರಸ್ತೆ ಕಳಪೆಯಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸುತ್ತಿರುವ ರಸ್ತೆಯಿದಾಗಿದೆ. ಕಾಂಟ್ರ್ಯಾಕ್ಟರ್ 5 ಕಿ.ಮೀ ರಸ್ತೆಯಲ್ಲಿ 2.3 ಕಿ.ಮೀ ರಸ್ತೆ ಕಾಮಗಾರಿ ಮುಗಿಸಿದಿದ್ಧಾರೆ. ಈಗಾಗಲೇ ಕಾಂಟ್ರಾಕ್ಟರ್ 1 ಕೋಟಿಗೂ ಹೆಚ್ಚು ಬಿಲ್ ಪಾವತಿ ಮಾಡಿಸಿಕೊಂಡಿದ್ಧಾರೆ. ಕಳಪೆ ಕಾಮಗಾರಿಯಿಂದಾಗಿ 2.3 ಕಿಲೋಮೀಟರ್ ಉದ್ದದ ರಸ್ತೆ ಕಿತ್ತು ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಡ್ಯಾಮೇಜ್ ರಸ್ತೆಗೆ ಡಾಂಬರು ಬದಲು ಸೀಮೆಂಟ್ ತೇಪೆ ಹಚ್ಚಿದ್ಧಾರೆ. ಕಾಂಟ್ರಾಕ್ಟರ್ ಶ್ರೀರಾಮಚಂದ್ರರಿಂದ ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. AEE ನಾಗರಾಜ್, EE ಮರಿಸ್ವಾಮಿ, AE ತಿಮ್ಮಪ್ಪ ವಿರುದ್ದವೂ ಸ್ಥಳೀಯರ ಆಕ್ರೋಶಪಡಿಸಿದ್ಧಾರೆ. ರಾಜಕಾರಣಿಗಳು & ಅಧಿಕಾರಿಗಳ ಪರ್ಸೆಂಟೇಜ್ ಆಸೆಗಾಗಿ ಅಕ್ರಮ ಎಂದು ಆರೋಪ ಮಾಡಿದ್ಧಾರೆ.
ರಾಜ್ಯದಲ್ಲಿ ಈ ಹಿಂದೆ 40% ಕಮೀಷನ್ ಆರೋಪ ಜೋರಾಗಿ ಕೇಳಿಬಂದಿತ್ತು. ಗುತ್ತಿಗೆದಾರರಿಂದ ಸರಕಾರ ಕಮೀಷನ್ ಪಡೆದು ಕಳಪೆ ರಸ್ತೆ ಮಾಡುತ್ತಿದೆ. ಕಳಪೆ ರಸ್ತೆ ನಿರ್ಮಾಣ ಮಾಡಿದವರ ಮೇಲೆ ಕ್ರಮ ಜತುಗಿಸಬೇಕು ಎಂದು ದೊಡ್ಡಾಲಘಟ್ಟ ಗ್ರಾಮಸ್ಥರು ಆರೋಪಿಸಿದ್ದಾರೆ.