ಮಂಗಳೂರು : ಶತಶತಮಾನಗಳಿಂದ ಕರಾವಳಿ ಕರ್ನಾಟಕದ ಮೂಲನಿವಾಸಿಗಳಾಗಿ ಇಲ್ಲಿಯ ನೆಲ,ಜಲ ಮತ್ತು ಅರಣ್ಯ ಸಂಪತ್ತಿನ ಒಡೆಯರಾದ ಕೊರಗ ಸಮುದಾಯವನ್ನು ಮೂಲೆಗುಂಪು ಮಾಡಿ, ಶೊಷಣೆಗೆ ಗುರಿ ಮಾಡಿ, ಅಮಾನವೀಯವಾಗಿ ನಡೆಸಿಕೊಂಡ ಪ್ರಭುತ್ವ ಮತ್ತು ಜನತೆ ಚಾರಿತ್ರಿಕವಾಗಿ ಅನ್ಯಾಯವೆಸಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಟೀಕಿಸಿದರು.
ಮಂಗಳೂರಿನ ವಾಮಂಜೂರು ಜಂಕ್ಷನ್‌ನಲ್ಲಿ ಆದಿವಾಸಿ ಕೊರಗ ಕುಟುಂಬಗಳಿಗೆ 2018ರಲ್ಲಿ ಮಂಜೂರಾತಿ ಆದ 33 ಮನೆ ನಿವೇಶನಗಳನ್ನು ಹಸ್ತಾಂತರಿಸಲು ಅಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿಮಾತನಾಡಿದ ಅವರು, ವಿಚಿತ್ರವೆಂದರೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ,ಸಂವಿಧಾನಿಕ ಹಕ್ಕುಗಳು ಇದ್ದರೂ ಇಂದೂ ಕೂಡಾ ಇದೇ ಮನಸ್ಥಿತಿ ಮುಂದುವರಿಯುತ್ತಿರುವುದು ದುಃಖದ ಸಂಗತಿ ಎಂದು ಆಕ್ರೋಶ ಹೊರಹಾಕಿದರು.
ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಸರಕಾರ ಆಗಾಗ ಕೇವಲ ಅಗ್ಗದ ಪ್ರಚಾರಕ್ಕಾಗಿ ಕೊರಗ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ವಿನಃ ನಿಜವಾದ ಇಚ್ಚಾ ಶಕ್ತಿ ಇಲ್ಲ ಎಂದು ಹೇಳಿದರು,.ನಿವೇಶನ ರಹಿತ 33 ಕೊರಗ ಕುಟುಂಬಗಳಿಗೆ ಐದು ವರ್ಷ ಕಳೆದರೂ ನಿವೇಶನ ಹಸ್ತಾಂತರವಾಗಳೀ ದಾಖಲೆಗಳಾಗಲೀ ನೀಡದಿರುವುದರ ಹಿಂದೆ ಈ ದೃಷ್ಟಿಕೋನವೇ ಅಡಗಿದೆ ಎಂದು ಸುನೀಲ್ ಕುಮಾರ ಹೇಳಿದರು.
ಖ್ಯಾತ ಜಾನಪದ ವಿದ್ವಾಂಸಕರೂ, ಪಗತಿಪರ ಚಿಂತಕರೂ ಆದ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಈ ನೆಲದ ಮೂಲನಿವಾಸಿಗಳಾಗಿ ಒಂದೊಮ್ಮೆ ಸಮಸ್ತ ಭೂಮಿಯ ಒಡೆಯರಾಗಿದ್ದ ಕೊರಗ ಕುಟುಂಬ ನೆಲೆ ಇಲ್ಲದೆ ಪರಿತಪಿಸಬೇಕಾಗಿದೆ. ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿ ಬಂದುದು ನಮ್ಮ ವ್ಯವಸ್ಥೆಯ ಸೋಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಬೇಷರತ್ತಾಗಿ ಯಾವುದೇ ವಿಳಂಬವಿಲ್ಲದೆ 33 ನಿವೇಶನ ಹಸ್ತಾಂತರ ಮಾಡಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾ ಕೊರಗ ಸಮುದಾಯದ ಮುಂದಾಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ನಾಡಾ ರವರು ಮಾತಾನಾಡುತ, ಆದಿವಾಸಿ ಕೊರಗ ಸಮೂದಾಯದ ಭೂಮಿಯ ಪ್ರಶ್ನೆ ಮೂಲಭೂತ ಪ್ರಶ್ನೆಯಾಗಿದ್ದು ಕೇವಲ ಎರಡೂವರೆ ಸೆಂಟ್ಸ್ ನಿವೇಶನ ನೀಡಲು ಐದು ವರ್ಷಗಳ ಕಾಲ ಸತಾಯಿಸಿದ ನಗರ ಪಾಲಿಕೆ ಜನ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.ಉಭಯ ಜಿಲ್ಲೆಗಳ ಆದಿವಾಸಿ ಹಕ್ಕುಗಳ ಸಮಿತಿಯು ಮಹಮ್ಮದ್ ಪೀರ್ ವರದಿಯ ಪ್ರಕಾರ ಎರಡೂವರೆ ಎಕರೆ ಕೃಷಿ ಭೂಮಿ ಮಂಜೂರಾತಿಗಾಗಿ ಜಂಟಿ ಹೋರಾಟ ರೂಪಿಸಲಿದೆ ಎಂದು ಹೇಳಿದರು.
ದ.ಕ.ಜಿಲ್ಲಾ,ಪೆನ್ಸನ್ ದಾರರ ಸಂಘ ಇದರ ಜಿಲ್ಲಾ ಪ್ರಧನ ಕಾರ್ಯದರ್ಶಿ ಸುಕುಮಾರ್ ತೊಕ್ಕೋಟ್ಟು ರವರು ಮಾತನಾಡುತ್ತಾ ಭುಮಿಯ ಮೂಲ ಹಕ್ಕುದಾರರೇ ಭೂಮಿಗಾಗಿ ಹೋರಾಟ ಮಾಟಬೇಕಾದ ದುಸ್ಥಿತಿ ಬಂದಿರುವುದು ನಾಚಿಕೆಗೇಡು ಎಂದು ಹೇಳಿದರು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ,ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತಾ, ಮಂಗಳೂರು ಮಹಾನಗರ ಪಾಲಿಕೆಯು ನಿವೇಶನ ಹಂಚಿಕೆ, ನೇಮಕಾತಿ ಮತ್ತು ವಿವಿಧ ಯೋಜನೆಗಳಲ್ಲಿ ನಿರಂತರವಾಗಿ ಕೊರಗ ಸಮುದಾಯಕ್ಕೆ ಅನ್ಯಾಯವೆಸಗಿದೆ. ಪ್ರಸ್ತುತ 33 ಕೊರಗ ಕುಟುಂಬಗಳ ಮನೆ ವಾಸ್ತವಿಕವಾಗಿ ಹಸ್ತಾಂತರ ಆಗುವವರೆಗೆ ನಿರಂತರ ಹೋರಾಟ ನಡೆಸಲಾಗುವುದೆಂದು ಘೋಷಿಸಿದರು.
ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಮುಂದಾಳು ಹಾಗೂ ಕಾನಾನು ಸಲಹೆಗಾರರಾದ ಮನೋಜ್ ವಾಮಂಜೂರುರವರು ಬಹಿರಂಗ ಸಭೆಯಲ್ಲು ಭಷಣ ಮಾಡುತ್ತಾ ಕೊರಗ ಸಮುದಾಯದ ನ್ಯಾಯೀಚಿತ ಹೋರಾಟಕ್ಕೆ ಕಾನೂನಿನಬಲವಾದ ಬೆಂಬಲವಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಸಂಘಟನೆಯ ಜಿಲ್ಲಾ ಮಾರ್ಗದರ್ಶಕರಾದ ಯೋಗಿಶ್ ಜಪ್ಪಿನಮೊಗರು ಮಾಡಿದರು. ಪಾದಯಾತ್ರೆಯ ನಾಯಕ್ವವನ್ನು ಅಧ್ಯಕ್ಷರಾದ ಕರಿಯ ಕೆ, ಶೇಖರ್, ಪುನೀತ್, ಗಣೇಶ್ , ವಿನೋದ್, ಕೃಷ್ಣಪ್ಪ, ವಿಗ್ನೆಶ್, ವಿಕ್ಯಾತ್, ಮಂಜುಳಾ ಶಶಿಕಲಾ, ಯಶೋಧ. ಪೂರ್ಣಿಮಾ ತುಳಸಿ, ಮೊದಲಾದವರು ವಹಿಸಿದ್ದರು.